ಭತ್ತದ ಜಮೀನು ಮತ್ತು ಸಸಿ ಮಡಿಗಳಿಗೆ ನುಗ್ಗಿದ ಮಳೆ ನೀರು

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಮಳೆಯು ಸುರಿಯುತ್ತಿದ್ದು, ಶನಿವಾರ ರಾತ್ರಿ ಮತ್ತು ಭಾನುವಾರ ರಾತ್ರಿಯು ಹೆಚ್ಚಿನ ಪ್ರಮಾಣದಲ್ಲಿ ಸುರಿದ ಮಳೆಯ ಪರಿಣಾಮವಾಗಿ ತಾಲೂಕಿನ ಕೆಂಚನಗುಡ್ಡ ತಾಂಡ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸಾವಿರಾರು ರೂ. ವೆಚ್ಚ ಮಾಡಿ ನಾಟಿ ಮಾಡಿದ್ದ ಭತ್ತದ ಜಮೀನು ಮತ್ತು ಭತ್ತದ ಸಸಿಮಡಿಯಲ್ಲಿ ಮಳೆಯ ನೀರು ನುಗ್ಗಿ ಸಸಿ ಮಡಿಯು ನಾಶವಾಗಿದೆ.
ತಾಲೂಕಿನ ತುಂಗಭದ್ರ ನದಿಯ ಪಕ್ಕದಲ್ಲಿ ಅಲ್ಪಸ್ವಲ್ಪ ನೀರಿಗೆ ಭತ್ತದ ಸಸಿ ಮಡಿಗಳನ್ನು ಹಾಕಿಕೊಂಡಿದ್ದು ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸಸಿಗಳ ಮೇಲೆ ಮಣ್ಣಿನ ಹೊಂಡು ಬಿಟ್ಟು ಸಸಿಗಳು ನಾಶವಾಗಿವೆ, ಇದರಿಂದ ರೈತರು ಕಂಗಲಾಗಿದ್ದಾರೆ.
ಶನಿವಾರ ರಾತ್ರಿಯಲ್ಲಿ ಸಿರುಗುಪ್ಪ 13 ಎಂ.ಎ0., ತೆಕ್ಕಲಕೋಟೆ 7.2ಎಂ.ಎ0., ಸಿರಿಗೇರಿ 5.1ಎಂ.ಎ0., ಎಂ.ಸೂಗೂರು 5.4 ಎಂ.ಎ0., ಹಚ್ಚೋಳ್ಳಿ 12.3ಎಂ.ಎ0., ರಾವಿಹಾಳ್ 18.2ಎಂ.ಎ0., ಕರೂರು 38.4 ಎಂ.ಎ0., ಕೆ.ಬೆಳಗಲ್ 13.4ಎಂ.ಎ0. ನಷ್ಟು ಮಳೆಯಾಗಿದೆ.
ಭಾನುವಾರ ರಾತ್ರಿಯಲ್ಲಿ ಸುರಿದ ಮಳೆಯು ಸಿರುಗುಪ್ಪ 11.5ಎಂ.ಎ0., ತೆಕ್ಕಲಕೋಟೆ 62.2ಎಂ.ಎ0., ಎಂ.ಸೂಗೂರು 27.6ಎಂ.ಎ0., ಹಚ್ಚೋಳ್ಳಿ 5.2ಎಂ.ಎ0., ರಾವಿಹಾಳ್ 22.4ಎಂ.ಎ0.., ಕರೂರು 26.2ಎಂ.ಎ0., ಕೆ.ಬೆಳಗಲ್ 39.4 ಎಂ.ಎ0 ನಷ್ಟು ಮಳೆಯಾಗಿದೆ.
ಅತಿ ಹೆಚ್ಚು ತೆಕ್ಕಲಕೋಟೆಯಲ್ಲಿ 62.2ಎಂ.ಎ0. ಮಳೆಯಾಗಿದ್ದು ಸಣ್ಣ ಪುಟ್ಟ ಹಳ್ಳಗಳು ತುಂಬಿ ಹರಿದ್ದವು, ಪಟ್ಟಣ ಪ್ರದೇಶದಲ್ಲಿ ಶಾಲಾ ಕಾಲೇಜ್ ಮತ್ತು ಇತರೆ ತಗ್ಗು ಪ್ರದೇಶಗಳಲ್ಲಿ ಮಳೆಯ ನೀರು ನಿಂತಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap