ಬೇಸಿಗೆ ಬೆಳೆಗೆ ಎಪ್ರೀಲ್ 15ರವರೆಗೆ ಕಾಲುವೆ ನೀರು. – ಎಂ.ಎಸ್.ಸೋಮಲಿ0ಗಪ್ಪ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ತುಂಗಭದ್ರಾ ಕಾಲುವೆಯ ನೀರು ಬಳಕೆ ಮಾಡಿಕೊಂಡು ಕೃಷಿ ಕೈಗೊಳ್ಳುವ ರೈತರಿಗೆ ಯಾವುದೇ ತೊಂದರೆಯಾಗದAತೆ ಎ.15ರವರೆಗೆ ಕಾಲುವೆಗಳಿಗೆ ನೀರು ಹರಿಸಲು ಶನಿವಾರ ನಡೆದ ಐಸಿಸಿ ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ಶಾಸಕ ಎಂ.ಎಸ್.ಸೋಮಲಿ0ಗಪ್ಪ ತಿಳಿಸಿದರು.
ನಗರದ ತೆಕ್ಕಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವರ್ಷ ಉತ್ತಮ ಮಳೆಯಿಂದ ಜಲಾಶಯದಲ್ಲಿ ನೀರಿನ ಕೊರತೆ ಇಲ್ಲದ ಹಿನ್ನಲೆಯಲ್ಲಿ ಬೆಸಿಗೆ ಬೆಳೆ ಬೆಳೆಯುವ ರೈತರಿಗೆ ಯಾವುದೇ ತೊಂದರೆ ಇಲ್ಲದ ರೀತಿಯಲ್ಲಿ ನೀರು ಹರಿಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ, ಡಿ.10 ರಿಂದ 25ರವರೆಗೆ ಕಾಲುವೆ ನೀರು ಸ್ಥಗಿತಗೊಳಿಸಲಾಗುವುದು, ಡಿ.25ರಿಂದ 31ರವೆಗೆ ಕಾಲುವೆಗೆ 250 ಕ್ಯೂಸೆಕ್ಸ್ ನೀರು ಹರಿಸಲಾಗುವುದು. ನಂತರ ಜ.1ರಿಂದ ಮಾಚ್ 31ರವರೆಗೆ 660ಕ್ಯೂಸೆಕ್ಸ್ ನೀರು ಹರಿಸಲಾಗುವುದು ಮತ್ತು ಎ.1ರಿಂದ 15ರವರಗೆ 250ಕ್ಯೂಸೆಕ್ಸ್ ನೀರು ಹರಿಸಲು ತಿರ್ಮಾನಿಸಲಾಗಿದೆ ಎಂದು ವಿವರಿಸಿದರು.
ನ.30ರಿಂದ ಭತ್ತ ಖರೀದಿ ಕೇಂದ್ರ ಪ್ರಾರಂಭ: ಭತ್ತಕ್ಕೆ ಬೆಲೆ ಇಲ್ಲದೆ ಕಾಂಗಲಾಗಿದ್ದ ರೈತರ ನೆರವಿಗೆ ಸರಕಾರ ಧಾವಿಸಿದ್ದು, ಇದೇ ನ.30ರಿಂದ ಡಿ.30ರವರಗೆ ರೈತರಿಂದ ನೊಂದಣಿ ಕಾರ್ಯ ನಡೆಸಲಾಗುವುದು. ನಂತರ ಜ.1ರಿಂದ 31ರವರಗೆ ರೈತರಿಂದ ಖರೀದಿ ನಡೆಲಾಗುವುದು ಎಂದು ತಿಳಿಸಿದರು.
ನ.23ರಂದು ನಾನಾ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆಗೆ ಸಚಿವರ ಆಗಮನ: ತಾಲೂಕಿನ ತೆಕ್ಕಲಕೋಟೆ ಭಾಗದ ರೈತರಿಗೆ 2ಕೋಟಿ ರೂ. ವೆಚ್ಚದಲ್ಲಿ 300 ಎಕರೆ ಪ್ರದೇಶಕ್ಕೆ ಕೈಗೊಂಡಿರುವ ಏತನೀರಾವರಿ ಯೋಜನೆ ಉದ್ಘಾಟನೆ ಹಾಗೂ ಸಿರಿಗೇರಿ ಮತ್ತು ತೆಕ್ಕಲಕೋಟೆ ಭಾಗದ ರೈತರ ಜಮೀನುಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ಸುಮಾರು 6ಕೋಟಿ25ಲಕ್ಷ ರೂ. ವೆಚ್ಚದ 550 ಎಕರೆ ಪ್ರದೇಶಕ್ಕೆ ನೀರು ಹರಿಸುವ ಯೋಜನೆಗೆ ಭೂಮಿ ಪೂಜೆ ನೆರವೇರಿಸಲು ಸಣ್ಣ ನೀರಾವತಿ ಖಾತೆ ಸಚಿವರಾದ ಮಾದುಸ್ವಾಮಿ ಆಗಮಿಸಲಿದ್ದಾರೆ. ಇದೇ ರೀತಿ ಭತ್ತ ಖರೀದಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅನಂದ್ಸಿAಗ್ ಹಾಗೂ ಸಂಸದ ಕರಡಿ ಸಂಗಣ್ಣ ಚಾಲನೆ ನೀಡಲಿದ್ದು, ನಂತರ ತೆಕ್ಕಲಕೋಟೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಬಿಜೆಪಿ ತಾಲೂಕ ಅಧ್ಯಕ್ಷ ಆರ್.ಸಿ.ಪಂಪನಗೌಡ, ಮಾಜಿ ಜಿ.ಪಂ.ಸದಸ್ಯ ಡಿ.ಸೋಮಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ಎಚ್.ಎಂ. ಶಾಂತಮೂರ್ತಿಸ್ವಾಮಿ, ತಾ.ಪಂ.ಉಪಾಧ್ಯಕ್ಷ ಶರಣಬಸವ ಸೇರಿದಂತೆ ಇತರರು ಇದ್ದರು.