ಬಿಜೆಪಿ ಸರಕಾರದ ಸಾಧನೆ ಕುರಿತು ಮನೆ ಮನೆ ಪ್ರಚಾರ

ಸಿರಿನಾಡ ಸುದ್ದಿ, ಕೊಟ್ಟೂರು: ನೆರೆ ಹಾವಳಿ ಹಾಗೂ ಕೊರೊನಾ ಸಂಕಷ್ಟಗಳ ನಡುವೆ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಸಮರ್ಥವಾಗಿ ಆಡಳಿತ ನಡೆಸಿ ಯಶಸ್ವಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಎಸ್.ಸಿ ಮೊರ್ಚಾದ ಅಧ್ಯಕ್ಷ ಗೋವಿಂದರಾಜು ತಿಳಿಸಿದರು.
ತಾಲೂಕಿನ ಅಲಬೂರು ಗ್ರಾಮದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳ ಕುರಿತಾದ ಮಾಹಿತಿ ನೀಡಲು ಕರ ಪತ್ರಗಳನ್ನು ಮನೆ ಮನೆಗೆ ಹಂಚಿಕೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ಸಮೃದ್ಧ ಕರ್ನಾಟಕ ನಿರ್ಮಾಣದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿ.ಎಸ್.ಯಡಿಯೂರಪ್ಪರಿಗೆ ಆಡಳಿತದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಜನತೆಗೆ ಸ್ಪಂದಿಸಿದ್ದಾರೆ. ಸರಕಾರದ ಸಾಧನೆಗಳನ್ನು ಜಿಲ್ಲೆಯ ಜಿ.ಪಂ. ವ್ಯಾಪ್ತಿಯ ಎಲ್ಲಾ ಗ್ರಾ.ಪಂ.ಗಳಲ್ಲಿ ಜನತೆಗೆ ಕರಪತ್ರಗಳ ಮೂಲಕ ಮನ ಮುಟ್ಟಿಸಲಾಗುತ್ತಿದೆ ಎಂದರು.
ಎಸ್.ಸಿ ಮೋರ್ಚಾದ ಕಾರ್ಯಾಲಯ ಕಾರ್ಯದರ್ಶಿ ರವಿಕಿರಣ್ ಮಾತನಾಡಿ, ಕೊರೊನಾ ಸಂಕಷ್ಟದ ಪರಿಸ್ಥತಿಯಲ್ಲಿ ರೈತರ, ಶ್ರಮಿಕವರ್ಗ ಸೇರಿ ಎಲ್ಲ ವರ್ಗದ ಜನಕ್ಕೆ ಕೊರೊನಾ ಸಂಕಷ್ಟದಲ್ಲಿ ಮುಖ್ಯಮಂತ್ರಿಗಳು ಪರಿಹಾರ ನೀಡಿದ್ದಾರೆ. ಜನರಿಗೆ ಮನವರಿಕೆ ಮಾಡುತ್ತೇವೆ ಎಂದು ಹೇಳಿದರು.
ಹ.ಗ.ಹಳ್ಳಿ ಕ್ಷೇತ್ರದ ಮಂಡಲಾಧ್ಯಕ್ಷ್ಷ ಗಣೇಶ್ ಅಲಬೂರು, ಪ್ರಧಾನ ಕಾರ್ಯದರ್ಶಿ ನಾಗರಾಜ್ ಬ್ಯಾಟೆ, ಕಾರ್ಯದರ್ಶಿ ಹನುಮನಾಯ್ಕ್, ಕಾರ್ಯಕರ್ತರಾದ ಹೇಮಣ್ಣ, ವೀರೇಶ್, ಸಿದ್ಧಪ್ಪ, ದೇವಪ್ಪ, ಟಿ.ದುರುಗಪ್ಪ,ಕೊಟ್ರೇಶ, ನಿಂಗಪ್ಪ ಇತರರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap