ಬಾಲಕಾರ್ಮಿಕರ ರಕ್ಷಣೆ ಜೊತೆಗೆ ಸಂಬ0ಧಿಸಿದ ಮಾಲೀಕರ ಮೇಲೆ ತಕ್ಷಣ ಪ್ರಕರಣ ದಾಖಲಿಸಿ

ಸಿರಿನಾಡ ಸುದ್ದಿ, ಬಳ್ಳಾರಿ: ಉದ್ದಿಮೆಗಳು ಸೇರಿದಂತೆ ವಿವಿಧೆಡೆ ಆಕಸ್ಮಿಕವಾಗಿ ದಾಳಿ ನಡೆಸಿದ ಸಂದರ್ಭದಲ್ಲಿ ಬಾಲಕಾರ್ಮಿಕರನ್ನು ರಕ್ಷಣೆ ಮಾಡುವುದರ ಜತೆಗೆ ಸಂಬAಧಿಸಿದ ಮಾಲೀಕರ ಮೇಲೆ ತಕ್ಷಣ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಷ್ಟಿçÃಯ ಬಾಲಕಾರ್ಮಿಕ ಯೋಜನೆಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಕಸ್ಮಿಕÀವಾಗಿ ದಾಳಿಯಲ್ಲಿ ಬಾಲಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಅವರನ್ನು ಪುನರ್ವಸತಿಗೊಳಿಸಿದಾಗ ಮಕ್ಕಳ ದುಡಿಮೆಯನ್ನು ಅವಲಂಬಿಸಿದ ಸಾಕಷ್ಟು ಕುಟುಂಬಗಳಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗುತ್ತದೆ. ಇದನ್ನು ಸಂಬAಧಿಸಿದ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಬಾಲಕಾರ್ಮಿಕರ ಪೋಷಕರಿಗೆ ವಿವಿಧ ಅಭಿವೃದ್ಧಿ ನಿಗಮಗಳ ವತಿಯಿಂದ ಸಬ್ಸಿಡಿ ರೂಪದಲ್ಲಿ ಸಾಲಸೌಲಭ್ಯವನ್ನು ಒದಗಿಸುವುದರ ಮೂಲಕ ಅವರು ಅರ್ಥಿಕವಾಗಿ ಸಬಲರಾಗುವುದಕ್ಕೆ ಸಹಾಯ-ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೇ 8 ಬಾಲಕಾರ್ಮಿಕ ವಿಶೇಷ ವಸತಿ ಕೇಂದ್ರಗಳ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 16 ಬಾಲಕಾರ್ಮಿಕ ವಿಶೇಷ ತರಬೇತಿಗಳಿಗೆ ಮಂಜೂರಾಗಿದ್ದು, ವಸತಿ ಶಾಲೆಗೆ ಅವಶ್ಯಕತೆ ಇರುವ ಅನುದಾನವನ್ನು ಡಿಎಂಎಫ್ ಅಥವಾ ಸಿಎಸ್‌ಆರ್ ಪಡೆದುಕೊಂಡು ಬಲವರ್ಧನೆ ಮಾಡುವುದು ಅಗತ್ಯ, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಬಾಲಕಾರ್ಮಿಕ ಶಾಲಾ ಮಕ್ಕಳಿಗೆ ಡಿಬಿಟಿ ಮುಖಾಂತರ ಶಿಷ್ಯವೇತನವನ್ನು ನೇರವಾಗಿ ಅವರ ಖಾತೆಗೆ ಜಮಾ ಆಗುವಂತೆ ಪ್ರತಿಯೊಂದು ಮಗುವಿಗೆ ಬ್ಯಾಂಕ್ ಖಾತೆಯನ್ನು ತೆರೆಯಲು ಇದೇ ಸಂದರ್ಭದಲ್ಲಿ ಸೂಚಿಸಿದರು.
ಆಕಸ್ಮಿಕ ದಾಳಿಯಲ್ಲಿ ಕಂಡು ಬರುವ ಬಾಲಕಾರ್ಮಿಕರನ್ನು ರಕ್ಷಿಸಿ ದುಡಿಸಿಕೊಳ್ಳುತ್ತಿರುವ ಮಾಲೀಕರಿಂದ ಬಾಲಕಾರ್ಮಿಕಕಾಯ್ದೆ ಅನ್ವಯ ಪ್ರತಿ ಬಾಲಕಾರ್ಮಿಕರಿಗೆ 20 ಸಾವಿರ ರೂ.ಗಳನ್ನು ವಸೂಲಾತಿ ಪ್ರಕ್ರಿಯೆ ಜಾರಿಯಾಗಿರುವುದರಿಂದ ಇದುವರೆಗೂ 25ಲಕ್ಷ ರೂ. ಹೆಚ್ಚು ಹಣ ವಸೂಲಾಗಿದ್ದು,ವಸೂಲಾದ ಅನುದಾನವನ್ನು ಮಕ್ಕಳಿಗೊಸ್ಕರ ಶೈಕ್ಷಣಿಕ ವೆಚ್ಚಕ್ಕಾಗಿ ಉಪಯೋಗಿಸಬೇಕು ಎಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಅಲ್ತಾಫ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶುಭಾ, ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಎ.ಮೌನೇಶ್, ಪಿಎಸ್‌ಐ ವೈ.ಎಸ್ ಹನುಮಂತಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಭರತ್.ಬಿ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap