ಬಾಗೇವಾಡಿ ಕೆಳ ಭಾಗದ ಅಚ್ಚುಕಟ್ಟು ರೈತರಿಂದ ಸಭೆ. ಆಕ್ರಮ ನೀರು ಬಳಕೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜು.7ರಂದು ಪ್ರತಿಭಟನೆಯ ಕುರಿತು ಪೂರ್ವಭಾವಿ ಸಭೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ನೀರು ಸರಬರಾಜು ಕಛೇರಿಯ ಆವರಣದಲ್ಲಿ ಬಾಗೇವಾಡಿ ಕಾಲುವೆಯ ಕೆಳಭಾಗದ ರೈತ ಹೋರಾಟ ಸಮಿತಿ ವತಿಯಿಂದ ಜು.7ರಂದು ನಡೆಯುವ ಪ್ರತಿಭಟನೆಯ ಕುರಿತು ಪೂರ್ವಭಾವಿ ಸಭೆ ನಡೆಯಿತು.
ತೆಕ್ಕಲಕೋಟೆ ನೀರು ಬಳಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಬಿ.ಎಸ್.ಬಂದೇನಾವಜ್ ಮಾತನಾಡಿ ತುಂಗಭದ್ರ ಜಲಾಶಯದ ಅಡಿಯಲ್ಲಿ ಬರುವ ಕರ್ನೂಲ ಕಾಲುವೇಯ ಉಪವಿಭಾಗವಾದ ಎಲ್.ಎಲ್.ಸಿ 68ನೇ ಕೆ.ಎಂ.ನಲ್ಲಿ ಬಾಗೇವಾಡಿ ಕಾಲುವೆಗೆ ಸುಮಾರು 12ಸಾವಿರ ಎಕರೆ ನೀರಾವರಿದ್ದು, ಪ್ರತಿ ನಿತ್ಯ 145ಕ್ಯೂಸೇಕ್ಸ್ ನೀರನ್ನು ಕಾಲುವೇಗೆ ಬಿಡಲಾಗುತ್ತಿದ್ದು ಈ ಕಾಲುವೆಯ ಮೇಲ್ಭಾಗದ ರೈತರು ಅಕ್ರಮವಾಗಿ ಅನಾಧಿಕೃತವಾಗಿ ಪೈಪುಗಳನ್ನು ಅಳವಡಿಸಿಕೊಂಡು ಸುಮಾರು 5ಕಿ.ಮೀ.ವರಗೆ ನೀರನ್ನು ತೆಗೆದುಕೊಂಡು ಸ್ವಂತ ಕೆರೆಗಳನ್ನು ನಿರ್ಮಿಸಿಕೊಂಡು ಭತ್ತವನ್ನು ಬೆಳೆಯುತ್ತಿದ್ದಾರೆ, ಇದರಿಂದ ಕೆಳಭಾಗದ ರೈತರಿಗೆ ನೀರು ಇಲ್ಲದೆ ಮಾಡಿದ್ದಾರೆ.
ಕೆಳಭಾಗದ 5ಸಾವಿರ ಎಕರೆಗೆ ಸುಮಾರು ಹಲವಾರು ವರ್ಷಗಳಿಂದ ನೀರಾವರಿ ಭೂಮಿಗೆ ನೀರು ಇಲ್ಲದೆ ಬೀಳು ಬಿಟ್ಟಿದ್ದಾರೆ, ಈ ಭಾಗದ ರೈತರು ಸ್ವಂತ ಭೂಮಿ ಇದ್ದರು ಕೂಲಿಕಾರ್ಮಿಕರಾಗಿ ವಲಸೆ ಹೊಗುತ್ತಿದ್ದಾರೆ, ಮಳೆ ನಂಬಿ ಬಿತ್ತನೆ ಮಾಡಿ ಬೆಳೆ ಸಿಗದೆ ಈ ಭಾಗದ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ. ನೀರಾವರಿ ಭೂಮಿಯ ರೈತರು ನೀರು ಇಲ್ಲದೆ ಬೆಳೆಯನ್ನು ಬೆಳೆದೆ ಮಹಾನಗರ, ಪಟ್ಟಣಗಳಿಗೆ ಕೂಲಿಗಾಗಿ ವಲಸೆ ಹೋಗುತ್ತಿದ್ದಾರೆ.
ಬಾಗೇವಾಡಿ ಕಾಲುವೆಯ ನೀರನ್ನು ನಂಬಿದ ಕೆಳಭಾಗದ ಸಾವಿರಾರು ರೈತ ಕುಟುಂಬಗಳು ಇಂದು ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ. ಕೆಳಭಾಗದಲ್ಲಿ ಕುಡಿಯುವ ನೀರಿಗೂ ತತ್ತರ, ದನಕರಗಳಿಗೆ ಆಹಾಕಾರ.
ಮುಖ್ಯ ಕಾಲುವೆಯಿಂದ ಬಾಗೇವಾಡಿ ಕಾಲುವೆಯ ಕೆಳಮಟ್ಟದ ಕಡೆ ರೈತರಿಗೆ ಸಂಪೂರ್ಣವಾಗಿ ಎರಡು ಅವಧಿಗೆ ನೀರನ್ನು ಒದಗಿಸಿಕೊಡಬೇಕು, ಕಾಲುವೆ ಪಕ್ಕದಲ್ಲಿರುವ ಅಕ್ರಮ ಕೆರೆಗಳಿಗೆ ಹರಿಯುವ ನೀರನ್ನು ಕಡಿವಾಣ ಹಾಕಬೇಕು, ಅಕ್ರಮ ಕರೆಗಳಿಗೆ ಅಳವಡಿಸಿಕೊಂಡ ವಿದ್ಯತ್ ಸಂಪರ್ಕಗಳಿಗೆ ಕೆ.ಇ.ಬಿ.ಇಲಾಖೆಯಿಂದ ಸಂಪರ್ಕ ಕಡಿತಗೊಳಿಸಿ ಪರವಾನಿಗೆ ರದ್ದುಪಡಿಸಬೇಕು, ಕಾಲುವೆಗೆ ಅಳವಡಿಸಿಕೊಂಡ ಅಕ್ರಮ ನೀರು ಹರಿಸಲು ಹಾಕಿರುವ ಅನಾಧಿಕೃತ ಪೈಪುಗಳನ್ನು ಕಿತ್ತಿ ಹಾಕಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಈ ಕಾಲುವೆಗೆ 185ಕ್ಯೂಸೆಕ್ಸ್ ನೀರನ್ನು ಒದಗಿಸಬೇಕು ಈ ಬೇಡಿಕೆಗಳನ್ನು ಪೂರೈಸುವಂತೆ ಒತ್ತಾಯಿಸಿ, ಈ ಕುರಿತು ತಹಶೀಲ್ದಾರ, ನೀರಾವರಿ ಇಲಾಖೆ ಅಧಿಕಾರಿ, ಜಿಲ್ಲಾಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಲಿಖಿತ ಮೂಲಕ ಮನವರಿಕೆ ಮಾಡಿದರು ಯಾವುದೇ ಸ್ಪಂಧನೆ ಇಲ್ಲವಾಗಿದೆ ಆದ್ದರಿಂದ ಜು.7 ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ಧರಣಿ ನಡೆಸಲಾಗುತ್ತದೆ. ಬಾಗೇವಾಡಿ ಕಾಲುವೆಯ ಕೆಳಭಾಗದ ರೈತರು ಈ ಹೊರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ನೀರು ಬಳಕೆದಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಜಿ.ವೀರೇಶಪ್ಪ, ಉಪಾಧ್ಯಕ್ಷ ಮರಿನಾಗಪ್ಪ, ಮುಖಂಡರಾದ ಟಿ.ತಿಪ್ಪಯ್ಯ, ಜ್ಞಾನನಂದಸ್ವಾಮಿ, ಬೆಳಗಲ್ ಮಲ್ಲಿಕಾರ್ಜುನ, ಚಂದ್ರ ಸೇರಿದಂತೆ ಇತರೆ ರೈತರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap