ಬಸನಗೌಡ ಬಾದರ್ಲಿಯಿಂದ ಸಿರಗುಪ್ಪಾದಲ್ಲಿ ಹೊಸ ಇತಿಹಾಸ

ಸಿರಿನಾಡ ಸುದ್ದಿ, ಸಿಂಧನೂರು; ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಅಧಿಕಾರ ಸಿಗುವಂತೆ ಮಾಡಿ, ಸಿರಗುಪ್ಪಾದಲ್ಲಿ ಹೊಸ‌‌ ಇತಿಹಾಸ ನಿರ್ಮಿಸಿದ ಕೀರ್ತಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರಿಗೆ ಸಲ್ಲುತ್ತದೆ ಎಂದು ಸಿರಗುಪ್ಪಾ ನಗರಸಭೆ ನೂತನ ಅಧ್ಯಕ್ಷ ದೇಶನೂರು ನಾಗರಾಜ ಹೇಳಿದರು.
ನಗರದ ಯುವ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಅವರು ಬಸನಗೌಡರನ್ನು ಸನ್ಮಾನಿಸಿ ನಂತರ ಮಾತನಾಡಿದರು.ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ‌ ಸಿಗುವಲ್ಲಿ ಬಸನಗೌಡರ ಪಾತ್ರ ಮಹತ್ವದ್ದಾಗಿದೆ. ಪಕ್ಷ ಸಂಘಟನೆ ಹಾಗೂ ಸಾಮಾನ್ಯರಿಗೂ ಅಧಿಕಾರ ಸಿಗುವಂತೆ ಶ್ರಮಿಸುವ ಅವರ ಕಾರ್ಯ ಮೆಚ್ಚುವಂತದ್ದು. ನಾವುಗಳು ಸದಾ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷರು, ಸದಸ್ಯರು, ಮುಖಂಡರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap