ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಜೆ.ಎಂ.ನಾಗಯ್ಯ ಆಯ್ಕೆ

ಸಿರಿನಾಡ ಸುದ್ದಿ, ಬಳ್ಳಾರಿ: ಬಳ್ಳಾರಿಯಲ್ಲಿ ಫೆಬ್ರವರಿ ೧ ಮತ್ತು ೨ರಂದು ನಡೆಯಲಿರುವ ಬಳ್ಳಾರಿ ಜಿಲ್ಲಾ ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇತಿಹಾಸ ಸಂಶೋಧಕ, ಸಾಹಿತಿ ಡಾ.ಜೆ.ಎಂ.ನಾಗಯ್ಯನವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ತಿಳಿಸಿದ್ದಾರೆ.
ಡಾ.ಜೆ.ಎಂ.ನಾಗಯ್ಯ ಅವರು ಬಹುಮುಖ ಪ್ರತಿಭೆಯ ಸಂಶೋಧಕ, ಸಮರ್ಥ ಬೋಧಕ, ಶಾಸನತಜ್ಞ, ಸಂಸ್ಕೃತಿಯ ಚಿಂತಕ ಹೀಗೆ ಬಹುಮುಖ ವ್ಯಕ್ತಿತ್ವದ ಅವರು ೧೯೫೭ ಸೆಪ್ಟಂಬರ್ ೯ರಂದು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣದಲ್ಲಿ ತಂದೆ ಜರಿಮಲೆ ಮಠದ ಪತ್ರಯ್ಯ , ತಾಯಿ ಶಾಂತಮ್ಮ ದಂಪತಿಗಳ ಪುತ್ರರಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲೇ ಪೂರೈಸಿ ಪ್ರೌಢಶಿಕ್ಷಣವನ್ನು ಮರಿಯಮ್ಮನಹಳ್ಳಿ ಪಡೆದರು. ೧೯೭೮ರಲ್ಲಿ ಬಿ.ಎ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದು ಬಳ್ಳಾರಿ ಜಿಲ್ಲೆ ಪ್ರಥಮ ದರ್ಜೆಯಲ್ಲಿ ಪಾಸಾದ ಏಕೈಕ ವಿದ್ಯಾರ್ಥಿಯಾಗಿದ್ದರು. ೧೯೮೦ರಲ್ಲಿ ಎಂ.ಎ. ಕನ್ನಡ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಇನ್ ಎಪಿಗ್ರಾಫಿಯನ್ನು ಪ್ರಥಮ ರ‍್ಯಾಂಕ್‌ನೊAದಿಗೆ ಪಾಸಾದರು. ಹಾಗೆಯೇ ೧೯೮೧ರಲ್ಲಿ ಡಿಪ್ಲೋಮಾ ಇನ್ ಟ್ರಾನ್ಸ್ಲೇಷನ್ ಪದವಿ, ೧೯೮೨ರಲ್ಲಿ ಬಿ.ಎಲ್.ಐ.ಎಸ್.ಸಿ ಪದವಿಯನ್ನು ಪ್ರಥಮ ರ‍್ಯಾಂಕ್ ಮತ್ತು ಸುವರ್ಣ ಪದಕದೊಂದಿಗೆ ಉತ್ತೀರ್ಣರಾದರು. ೧೯೮೫ರಲ್ಲಿ ಸಹಾಯಕ ಗರಂಥಪಾಲಕರಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡರು. ೧೯೮೭ರಲ್ಲಿ ೬ನೇ ವಿಕ್ರಮಾದಿತ್ಯನ ಶಾಸನಗಳು ಒಂದು ಅಧ್ಯಯನ ಎಂಬ ವಿಷಯದಲ್ಲಿ ಡಾ.ಎಂ.ಎA.ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ಪಿಹೆಚ್.ಡಿ ಸಂಶೋಧನೆ ಕೈಗೊಂಡು ಪೂರೈಸಿದರು. ಬಳ್ಳಾರಿ ಜಿಲ್ಲೆಯ ನಂದಿಹಳ್ಳಿ ಮತ್ತು ಬಳ್ಳಾರಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು.
ಡಾ.ಎಂ.ಎA.ಕಲಬುರ್ಗಿಯವರ ವಿದ್ವತ್ ಪರಂಪರೆಯ ಮುಂದುವರೆದ ದೀಪಸ್ಥಂಭದAತೆ ತೋರುತ್ತಾರೆ. ಅವರು ಹಳಗನ್ನಡ ಸಾಹಿತ್ಯ, ಶಾಸನ, ಗ್ರಂಥಸAಪಾದನೆ, ಶಾಸ್ತç ಸಾಹಿತ್ಯ, ಇತಿಹಾಸ, ಸಂಸ್ಕೃತಿಯAತಹ ಜ್ಞಾನ ವಲಯಗಳ ಪರಿಧಿಯನ್ನು ತಮ್ಮ ಸಂಶೋಧನಾ ಬರಹಗಳ ಮೂಲಕ ವಿಸ್ತರಿಸಿದ್ದಾರೆ. ಅವರ ಸಂಶೋಧನಾ ಕೃತಿಗಳು ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯನ್ನು ಪುರ‍್ರಚಿಸುವ ದೃಷ್ಟಿಯಿಂದ ಮಹತ್ವಪೂರ್ಣವಾಗಿವೆ. ಡಾ.ನಾಗಯ್ಯ ಅವರು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರಾಗಿ, ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕರಾಗಿ, ಅಕಾಡೆಮಿಕ್ ಕೌನ್ಸಿಲ್‌ನ ಪದನಿಮಿತ್ತ ಸದಸ್ಯರಾಗಿ, ಸೇವೆ ಸಲ್ಲಿಸಿದ್ದಾರೆ.
ಅವರು ೧೯ ಸಂಶೋಧನಾ ಕೃತಿಗಳನ್ನು ಹೊರತಂದಿದ್ದು, ಅದರಲ್ಲಿ ಮುಖ್ಯವಾಗಿ ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ೬ನೇ ವಿಕ್ರಮಾದಿತ್ಯನ ಶಾಸನಗಳು ಒಂದು ಅಧ್ಯಯನ, ಸಂದರ್ಭ ಸಾಹಿತ್ಯ, ಬಳ್ಳಾರಿ ಜಿಲ್ಲೆಯ ಶಾಸನಗಳು, ಕಲಕೇರಿ, ಕರ್ನಾಟಕ ಶಿಲ್ಪಗಳಲ್ಲಿ ಶಿವಶರಣರು, ಗುಂಡಬ್ರಹ್ಮಯ್ಯ, ಡಾ.ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ -೭, ಸಾಂಪಥ ಸಂಪುಟ ೧, ಸಂಪುಟ ೭, ಸಮಗ್ರ ಸಂಶೋಧಕ ಎಂ.ಎA.ಕಲಬುರ್ಗಿ, ಕಾಯಕದರ್ಶಿ, ಮಹಾಮರಣ, ಕಲ್ಯಾಣ ಚಾಲುಕ್ಯರ ಶಾಸನಗಳು ಸಂಪುಟ-೧, ಧಾರವಾಡ ಜಿಲ್ಲಾ ಗ್ರಾಮ ಚರಿತ್ರೆ ಕೋಶ, ಧಾರವಾಡ ಸಂಸ್ಕೃತಿ, ಆತ್ಮಬಲಿದಾನ,
ಪ್ರಧಾನ ಸಂಪಾದನೆ: ಕನ್ನಡ ಸಂಸ್ಕೃತಿ, ಕನ್ನಡ ದೀಪ, ಕನ್ನಡ ಕಂಕಣ, ಕನ್ನಡ ಡಿಂಡಿಮ, ಕನ್ನಡ ದುಂದುಬಿ, ಕನ್ನಡ ಲೋಕ, ಕನ್ನಡ ಸುರಭಿ, ಕನ್ನಡ ಐಸಿರಿ, ಯು.ಪಿ.ಯೋಜನೆ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಉಪಸಂಯೋಜಕರಾಗಿ ಸೇವೆ ಸಲ್ಲಿಸುತ್ತಾ ಸಂಪಾದಕರಾಗಿ ಡಾ.ರಾಜೇಂದ್ರ ನಾಯಕ್ ಅವರೊಂದಿಗೆ ಹೊರತಂದ ಗ್ರಂಥಗಳು – ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ದೇಶೀ ಜ್ಞಾನ – ದೇಶೀ ಸಂಸ್ಕೃತಿ ಚಿತ್ರಣ, ಜಾಗತೀಕರಣ ಮತ್ತು ಸ್ಥಳೀಯ ಸಂಸ್ಕೃತಿಗಳ ಅಧ್ಯಯನ, ಕನ್ನಡ ಜನಪದ ಕತೆಗಳ ಇಂಗ್ಲೀಷ್ ಅನುವಾದ ಭಾಗ-೧, ೨, ಕನ್ನಡ ತ್ರಿಪದಿಗಳ ಹಿಂದಿ ಅನುವಾದ, ವಡ್ಡಾರಾಧನೆ ಕತೆಗಳ ಇಂಗ್ಲಿಷ್ ಅನುವಾದ, ವಿಶೇಷ ಉಪನ್ಯಾಸಗಳ ಸಂಪುಟ – ಕನ್ನಡ ಗಾದೆ, ಮತ್ತು ಒಗಟುಗಳ ಜರ್ಮನ್ ಭಾಷೆಯ ಅನುವಾದ, ಕನ್ನಡ ತತ್ವ ಪದಗಳ ಉರ್ದು ಅನುವಾದ, ಸಂಸ್ಕೃತಿ ವಿಭಾಗದ ಲೇಖನಗಳ ಸಂಪುಟವನ್ನು ಹೊರತಂದಿದ್ದಾರೆ.
ಯು.ಪಿ.ಇ. ಯೋಜನೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಸಂಯೋಜಕರಾಗಿ ಸೇವೆ ಸಲ್ಲಿಸಿ ಪ್ರಧಾನ ಸಂಪಾದಕರಾಗಿ ಕನ್ನಡ ಜನಪದ ಕತೆಗಳ ಹಿಂದಿ ಅನುವಾದ, ಆಧುನಿಕ ಬದುಕಿಗೆ ಸಂಸ್ಕೃತ ಕಾವ್ಯ ಹಾಗೂ ಸಾಹಿತ್ಯದ ಪ್ರಸ್ತುತತೆ, ಕನ್ನಡ ಪ್ರಬಂಧಗಳ ಉರ್ದು ಅನುವಾದಗಳ ಗ್ರಂಥಗಳನ್ನು ಹೊರತಂದಿದ್ದಾರೆ. ಅಲ್ಲದೆ ೬೦ ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.
ಪ್ರಶಸ್ತಿ: ಸಾಹಿತ್ಯ ಕೃತಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕದ ಶಿಲ್ಪಗಳಲ್ಲಿ ಶಿವಶರಣರು ಕೃತಿಗೆ ಸ.ಸ.ಮಾಳವಾಡ ಪ್ರಶಸ್ತಿç, ಆತ್ಮಬಲಿದಾನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಇತಿಹಾಸ ಅಕಾಡೆಮಿಯು ೨೦೧೯ನೇ ಸಾಲಿನಲ್ಲಿ ಡಾ.ಬಾ.ರಾ. ಗೋಪಾಲ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ.
ಸೇವೆ: ಸಹಾಯಕ ಗ್ರಂಥಪಾಲಕರಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡು, ನಂದಿಹಳ್ಳಿ ಹಾಗೂ ಬಳ್ಳಾರಿಯ ಸ್ನಾತಕೋತ್ತರ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಉಪನ್ಯಾಸಕರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸೇವೆ ಆರಂಭಿಸಿ ಅದೇ ಕೇಂದ್ರದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾ ಲಯದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಸೇವೆ. ಹಲವು ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡು ಎಂ.ಫಿಲ್, ಪಿಹೆಚ್.ಡಿ ಪದವಿಗಳನ್ನು ಪಡೆದಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap