ಬಳ್ಳಾರಿಯಲ್ಲಿ ಪ್ರಾರಂಭವಾಗಲಿದೆ 50 ಬೆಡ್‌ಗಳ ಪ್ರತ್ಯೇಕ ಪೊಲೀಸ್ ಕೋವಿಡ್ ಕೇರ್ ಸೆಂಟರ್ .

ಸಿರಿನಾಡ ಸುದ್ದಿ, ಬಳ್ಳಾರಿ: ಕರೋನಾ ತನ್ನ ಆರ್ಭಟ ಮುಂದುವರೆಸಿದ್ದು ಪೊಲೀಸ್ ಸಿಬ್ಬಂದಿಗಳಿಗೂ ನಿತ್ಯವೂ ಕರೋನಾ ಸೋಂಕು ತಗಲುತ್ತಿರುವುದು ಆತಂಕಕ್ಕೆ ಮನೆ ಮಾಡಿದೆ. ಇದರಿಂದ ಸೊಂಕಿತ ಪೊಲೀಸರಿಗೆ ಸೂಕ್ತ ಚಿಕಿತ್ಸೆ ಮತ್ತು ಪ್ರತ್ಯೇಕ ನಿಘವಹಿಸುವ ನಿಟ್ಟಿನಲ್ಲಿ ನಗರದ ನೆಲಚೆರವು ಬಳಿ ಇರುವ ವಾಲ್ಮೀಕಿ ಭವನದಲ್ಲಿ ಸುಸಜ್ಜಿತ 50 ಬೆಡ್‌ಗಳ ಕೋವಿಡ್ ಕೇರ್ ಹಾರೈಕೆ ಕೇಂದ್ರವನ್ನು ಪ್ರಾರಂಭಿಸಲು ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ನಿತ್ಯವೂ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಒಂದು ಕಡೆಯಾದರೆ ಕರೋನಾ ವಾರಿಯರ‍್ಸ್ ಆಗಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಬೆಂಬಿಡದೆ ಕಾಡುತ್ತಿದೆ. ಇದರೊಂದ ಪೊಲೀಸ್ ಸಿಬ್ಬಂದಿಗೆ ಹಾರೈಕೆಗಾಗಿ ಪ್ರತ್ಯೇಕ ಕೋವಿಡ್ ಆಸ್ಪತ್ರೆ ಪ್ರಾರಂಭಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾರ ಮನವಿ ಮೇರೆಗೆ ಜಿಲ್ಲಾಡಳಿತ ಈ ವ್ಯವಸ್ಥೆ ಮಾಡಲಾಗಿದೆ. ಇದೀಗ ಕೇವಲ 50 ಬೆಡ್ ಗಳನ್ನ ಮಾತ್ರ ವ್ಯವಸ್ಥೆ ಮಾಡಲಾಗಿದೆ. ಹಂತ ಹಂತವಾಗಿ ಬೆಡ್‌ಗಳ ಸಂಖ್ಯೆಯನ್ನ ಹೆಚ್ಚಳ ಮಾಡುವ ಚಿಂತನೆ ಜಿಲ್ಲಾಡಳಿತದಲ್ಲಿದೆ.
ಭೇಟಿ ಪರಿಶೀಲನೆ: ಈ ನಿಟ್ಟಿನಲ್ಲಿ ವಾಲ್ಮೀಕಿ ಭವನದಲ್ಲಿ ಸಿದ್ದಗೊಂಡಿರುವ ಪೊಲೀಸ್ ಕೋವಿಡ್ ಕೇರ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹಾಗೂ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ನಡೆಸಿದ್ರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಪೊಲೀಸ್ ಸಿಬ್ಬಂದಿ ಹಾಗೂ ಇತರೆ ಇಲಾಖೆಗಳ ಸಿಬ್ಬಂದಿಗೂ ಕೋವಿಡ್ -19 ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಕೋವಿಡ್ ಕೇರ್ ಸೆಂಟರ್ ವಿಶೇಷವಾಗಿ ಪೊಲೀಸ್ ಸಿಬ್ಬಂದಿ ಸಲುವಾಗಿಯೇ ಸ್ಥಾಪಿಸಲಾಗಿದೆ. ಮೊದಲ ಆದ್ಯತೆ ಪೊಲೀಸರಿಗೆ ನೀಡಲಾಗುವುದು, ಒಂದು ವೇಳೆ ಇನ್ನೂ ಬೆಡ್‌ಗಳು ಖಾಲಿ ಇದ್ದು ಇತರೆ ಇಲಾಖೆಗಳ ಸಿಬ್ಬಂದಿಗಳಿಗೆ ಸೋಂಕು ತಗುಲಿದ ಸಿಬ್ಬಂದಿಗೆ ಹಾರೈಕೆ ಕೇಂದ್ರಕ್ಕೆ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದ ಅವರು,
ಈ ಕೋವಿಡ್ -19 ಸೋಂಕನ್ನ ಸಮರ್ಥವಾಗಿ ಎದುರಿಸಬೇಕು. ಅಲ್ಲದೇ, ಅಧಿಕಾರ ವರ್ಗದಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ಬೇಗನೆ ಗುಣಮುಖರಾಗಿ ಕೋವಿಡ್ ಸೋಂಕಿತರ ಸೇವೆಗೆ ಮುಂದಾಗಬೇಕೆAಬ ನಿಟ್ಟಿನಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಜಿಲ್ಲೆಯಲ್ಲಿ ಈ ವರಗೆ 1801 ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್ ಒಳಪಡಿಸಿದ್ದು, ಈ ಪೈಕಿ 296 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಅವರೆಲ್ಲರೂ ಕೂಡ ಹೋಂ ಐಶೋಲೇಷನ್ ನಲ್ಲಿರಿಸಲಾಗಿದೆ. ಪೊಲೀಸ್ ಸಿಬ್ಬಂದಿಗೆ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಇದನ್ನು ಗಂಭಿರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಮನವಿ ಮೇರೆಗೆ ಪ್ರತ್ಯೇಕ ಕೋವಿಡ್ ಕೇಂರ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap