ಬಳ್ಳಾರಿಯಲ್ಲಿ ಒಂದೇ ದಿನ 216 ಜನರಿಗೆ ಸೋಂಕು ಧೃಡ, 49 ಜನರು ಗುಣಮುಖರಾಗಿ ಬಿಡುಗಡೆ.

ಸಿರಿನಾಡ ಸುದ್ದಿ, ಬಳ್ಳಾರಿ: ಜಿಲ್ಲೆಯಲ್ಲಿ ಕರೋನಾ ಆರ್ಭಟ ಮುಂದುವರೆದಿದ್ದು, ಸೋಮವಾರ ಒಂದೇ ದಿನ 216 ಜನರಿಗೆ ಸೊಂಕು ಧೃಡಪಡುವ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 2668ಕ್ಕೆ ಮುಟ್ಟಿದೆ.
ಜಿಲ್ಲೆಯ 216 ಸೋಂಕಿತರ ಪೈಕಿ ಬಳ್ಳಾರಿ 49, ಸಂಡೂರು 12, ಸಿರುಗುಪ್ಪ 13, ಕುಡ್ಲಿಗಿ 8, ಹಡಗಲಿ 12, ಹೊಸಪೇಟೆ ಸಚಿವರ ವಾಹನ ಚಾಲಕ ಸೇರಿ 105 ಪ್ರಕರಣಗಳು ಪತ್ತೆಯಾಗಿದ್ದರೆ, ಹಗರಿಬೊಮ್ಮನಹಳ್ಳಿ 4, ಹರಪನಹಳ್ಳಿ 11, ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ ತಲ ಒಬ್ಬರು ಸೇರಿ ಒಟ್ಟು 216 ಜನರಿಗೆ ಸೋಂಕು ಧೃಡಪಟ್ಟಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2668 ಆಗಿದ್ದು, ಸೋಮವಾರ 49 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ, ಇದರೊಂದಿಗೆ ಒಟ್ಟು 1376 ಜನರು ಗುಣಮುಖರಾಗಿದ್ದು, ಕೋವಿಡ್‌ನಿಂದ ಇಂದು ಇಬ್ಬರು ಮೃತಪಟ್ಟಿರುವುದು ಸೇರಿ ಒಟ್ಟು 62 ಜನರು ಕರೋನಾಗೆ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಪೈಕಿ 1230 ಜನರು ಕೋವಿಡ್ ಕೇರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap