ಬಯಲಾಟ ಕಾಲೇಜಿನಲ್ಲಿ ಸೊಲಬಕ್ಕನವರಿಗೆ ನುಡಿನಮನ. ಡಾ.ಟಿ.ಬಿ.ಸೊಲಬಕ್ಕ ಬಯಲಾಟದ ಸಿರಿ: ಡಾ.ಕೆ.ರುದ್ರಪ್ಪ

ಹೂವಿನಹಡಗಲಿ: ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಹಿರಿಯ ರಂಗಕರ್ಮಿ ಹಾಗೂ ಬಯಲಾಟದ ಸಿರಿ ಎಂದೇ ಹೆಸರಾದ ಡಾ.ಟಿ.ಬಿ.ಸೊಲಬಕ್ಕನವರ ಅಗಲಿಕೆಯಿಂದ ಜನಪದ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬಯಲಾಟ ಅಕಾಡೆಮಿ ಸದಸ್ಯ ಡಾ.ಕೆ.ರುದ್ರಪ್ಪ ಹೇಳಿದರು.
ಪಟ್ಟಣದ ಡಾ.ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜಿನಲ್ಲಿ ಕೊಂಬಳಿಯ ಗಾಂಧೀಜಿ ಸೇವಾಸಂಸ್ಥೆ ಹಾಗೂ ರಂಗಚೈತನ್ಯ ಬಯಲಾಟ ಸಂಶೋಧನೆ ಮತ್ತು ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ಡಾ.ಟಿ.ಬಿ.ಸೊಲಬಕ್ಕನವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಕಲೆಯನ್ನು ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡಿದ್ದ ಸೊಲಬಕ್ಕ ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದವರು. ಯುವಕರ ಮೂಲಕ ಮುಂದಿನ ಪೀಳಿಗೆ ತಲುಪುವಂತಹ ಸೃಜನಾತ್ಮಕ ಶಿಲ್ಪ ಕಲೆಗಳು ಹಾಗೂ ದೊಡ್ಡಾಟ ಪ್ರಯೋಗಗಳನ್ನು ನಡೆಸಿದ್ದರು.
ಸಾವಿರ ಪುಟಗಳ ಸಚಿತ್ರಗಳನ್ನೊಳಗೊಂಡ ಬೃಹತ್ ಬಯಲಾಟ ಸಂಪುಟವನ್ನು ಹೊರತರುವ ನಿರ್ಧಾರ ಅವರದಾಗಿತ್ತು. ಬಾಗಲಕೋಟೆಯಲ್ಲಿ ಬಯಲಾಟ ಭವನದ ನಿರ್ಮಾಣದ ವಿಷಯ ಕೂಡ ಚರ್ಚೆಯಾಗಿತ್ತು. ಅಭಿವೃದ್ಧಿ ಪ್ರಾಧಿಕಾರದ ವೀರಣ್ಣ Z್ಪರಂತಿಮಠರು ಅಕಾಡೆಮಿಗೆ ನಿವೇಶನ ಒದಗಿಸಲು ಒಪ್ಪಿದ್ದರು. ಹಿರಿಯ ರಂಗಭೂಮಿ ನಿರ್ದೇಶಕರಿಂದ ಯುವಕರಿಗೆ ತರಬೇತಿಯನ್ನು ಕೊಡಿಸಿ, ಪರಿಷ್ಕರಣ ಮಾಡಿ ಜನರಿಗೆ ಹತ್ತಿರವಾಗುವಂತಹ, ಮನೆಯ ಮಂದಿ ಕುಳಿತು ಆಕರ್ಷಕ ಧಾರಾವಾಹಿಗಳನ್ನು ವೀಕ್ಷಣೆ ಮಾಡಿದಂತೆ ಬಯಲಾಟಗಳನ್ನು ವೀಕ್ಷಿಸಬೇಕೆಂಬುದು ಅವರ ಕನಸಾಗಿತ್ತು ಎಂದರು..
ಅವರ ಸೃಜನಶೀಲ ಪ್ರತಿಭೆ ಹಾಗೂ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದನ್ನ ಸ್ಮರಿಸಿದರು. ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ, ಸಂWಟನಾ ಪ್ರಶಸ್ತಿ ರಾಜ್ಯೋತ್ಸವ ಹಾಗೂ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗಳ ಜೊತೆಗೆ ಅಭೂತ ಕಲೆಯ ಮೂಲಕ ವರ್ಲ್ಡ್ ರೆಕಾರ್ಡನ್ನು ಪಡೆದ ಮಹಾನ್ ಕಲಾವಿದರಾಗಿದ್ದರು. ಅವರ ಮಹತ್ವದ ಯೋಜನೆಗಳನ್ನು ಸಾಕಾರಗೊಳಿಸಬೇಕಿದೆ ಎಂದು ಹೇಳಿದರು. ನೊಂದ ಕಲಾವಿದರಿಗೆ ಬಯಲಾಟ ಅಕಾಡೆಮಿಯಿಂದ ಮಾಸಾಸನ ಕೊಡಿಸುವ ಕಾರ್ಯ ನಡೆಸಿದ್ದರು. ಏನೆಲ್ಲಾ ಕಾರ್ಯಕ್ರಮಗಳನ್ನು ಏರ್ಪಡಿಸುವ ಸಂದರ್ಭದಲ್ಲೇ ಕೋವಿಡ್ ಅಡ್ಡಗಾಲು ಹಾಕಿದೆ ಎಂದರು.
ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಮಾತನಾಡಿ, ಹಾವೇರಿಯ ರಾಕ್ ಗಾರ್ಡನ್ ರೂವಾರಿ, ಅವರ ಕೈಚಳಕದ ಕಲಾ ಕೌಶಲ್ಯದಿಂದ ಅರಳಿದ ಮಾದರಿ ಪಾರಂಪರಿಕ ಗ್ರಾಮಗಳ ಮೂಲಕ ನಾಡಿನ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಬಯಲಾಟ ಸೇವೆ ಹಾಗೂ ಸೃಜನಾತ್ಮಕ ಕಲೆ ಸದಾ ಜೀವಂತವಾಗಿವೆ ಎಂದು ಹೇಳಿದರು.
ಕಲಾವಿದ ಬಯಲಾಟ ರಾಜ್ಯ ಪ್ರಶಸ್ತಿ ಪುರಸ್ಕೃತ ದೂಪದ ಕೊಟ್ರಪ್ಪ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೈ.ಮಲ್ಲಪ್ಪ ಗವಾಯಿ, ಬಯಲಾಟ ರಾಜ್ಯ ಪ್ರಶಸ್ತಿ ಪುರಸ್ಕೃತ ಚಲುವಾದಿ ಈರಣ್ಣ, ವಿ.ಬಿ.ನಾಗರಾಜ ಉಪಸ್ಥಿತರಿದ್ದರು. ಕಾಲೇಜಿನ ದೊಡ್ಡಾಟದ ಸಂಪನ್ಮೂಲ ಕಲಾವಿದರು ಪ್ರಾರ್ಥನೆ ಹಾಡಿದರು. ವೈ.ಕರಿಬಸವೇಶ ನಿರ್ವಹಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap