ಪ್ರತಿಷ್ಠಿತ ಶಾಲೆಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ
ಸಿರಿನಾಡ ಸುದ್ದಿ, ರಾಯಚೂರು: 2020-21ನೇ ಸಾಲಿಗೆ ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿಷ್ಠಿತ ಶಾಲೆಗೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಗೆ 65 ಗುರಿ ನಿಗಧಿಪಡಿಸಲಾಗಿರುತ್ತದೆ. ಜಿಲ್ಲೆಯ ಪ್ರತಿಭಾವಂತ ಪರಿಶಿಷ್ಟ ವರ್ಗದ 5ನೇ ತರಗತಿಯಲ್ಲಿ ಶೇ 60 ಅಂಕ ಪಡೆದ ವಿದ್ಯಾರ್ಥಿಗಳು 6ನೇ ತರಗತಿಗೆ ಅರ್ಹತಾ ಪರೀಕ್ಷೆ ಮೂಲಕ ಆಯ್ಕೆ ಮಾಡಿ ನಿಯಮಗಳನ್ವಯ ದಾಖಲು ಮಾಡಿಕೊಳ್ಳಲು ಅರ್ಹ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ವಸತಿ, ಭೋಜನಾ ವೆಚ್ಚ, ಶಾಲೆಯ ಕಡ್ಡಾಯ ಶುಲ್ಕ, ಸಮವಸ್ತç, ಪಠ್ಯ ಪುಸ್ತಕ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನಿಗಧಿಪಡಿಸಿದಂತೆ ಸೌಲಭ್ಯ ನೀಡಲಾಗುವುದು.
ವಿದ್ಯಾರ್ಥಿಗಳು ಸಂಬAಧಪಟ್ಟ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಿಂದ ಅರ್ಜಿ ಪಡೆದು ಅಕ್ಟೋಬರ್ 10 ರೊಳಗಾಗಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳಿಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರದ ಪ್ರತಿಗೆ ಪತ್ರಾಂಕಿತ ಅಧಿಕಾರಿರವರಿಂದ ದೃಢೀಕರಿಸಿದ ಪ್ರಮಾಣಪತ್ರ ಲಗತ್ತಿಸಬೇಕು ಹಾಗೂ 2 ಭಾವಚಿತ್ರಗಳನ್ನು (ಪಾಸ್ಪೋರ್ಟ್ ಸೈಜ್) ಲಗತ್ತಿಸುವುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಕುಟುಂಬದ ಆದಾಯ ಮಿತಿ 2 ಲಕ್ಷ ರೂಗಳ ಒಳಗಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಅಥವಾ ಆಯಾ ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಬೇಕೆAದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಚಿದಾನಂದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.