ಪ್ರತಿಯೊಬ್ಬರು ಪರಿಸರ ಪಾಲನೆ ಕಾಳಜಿ ಮುಖ್ಯ

ಸಿರಿನಾಡ ಸುದ್ದಿ, ಕುರುಗೋಡು: ಬಕ್ರೀದ್ ಹಬ್ಬದ ಅಂಗವಾಗಿ ಶನಿವಾರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಬ್ಬವನ್ನು ಸರಳವಾಗಿ ಜರುಗಿತು.
ಸಮೀಪದ ಎಮ್ಮಿಗನೂರಿನ ಸೂಗೂರು ರಸ್ತೆಯಲ್ಲಿ ಇರುವ ಮಳ್ ಹರ್ ಪಬ್ಲಿಕ್ ಶಾಲೆಯ ಅವರಣದಲ್ಲಿ ಹೆಚ್ಚು ಸಸಿ ನೆಡುವ ಹಾಗೂ ವಿತರಣೆ ಮಾಡುವ ಮೂಲಕ ವಿಶೇಷವಾಗಿ ಅಚರಿಸಿದರು.
ನಂತರ ಸಿದ್ದಿಕ್ ಸಖಾಪೀ ಮತನಾಡಿ, ಪ್ರತಿಯೊಬ್ಬರು ಪರಿಸರ ಪಾಲನೆ ಕಾಳಜಿ ಮುಖ್ಯ ಹಾಗೂ 100 ಹೆಚ್ಚು ಸಸಿ ಗಳನ್ನು ವಿತರಿಸಲಾಗಿತು. ಈ ವೇಳೆ ಮುಖಂಡರಾದ ಇಮಾಮ್ ಸಾಬು,ಮಾಬು ಸಾಬು, ಸಾಯಿಬಣ್ಣ, ರಾಜಸಾಬು, ಶಿಕ್ಷಕರಾದ ಎಸ್. ರಾಮು, ಹಾಗೂ ಇತರರು ಇದ್ದರು.
ಕೋವಿಡ್ ಕಾರಣ ಗ್ರಾಮೀಣ ಭಾಗದಲ್ಲಿಯೂ ಸಹ ಸಮುದಾಯ ಅನೇಕರು ಸ್ವಯಂ ಪ್ರೇರಿತವಾಗಿ ಮನೆಯಲ್ಲಿ ಸರಳವಾಗಿ ಹಬ್ಬದ ಅಂಗವಾಗಿ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap