ಪೊಲೀಸ್ ಠಾಣೆಯಲ್ಲಿ ಇಬ್ಬರಿಗೆ, ಸಾರಿಗೆ ಇಲಾಖೆಯಲ್ಲಿ ಒಬ್ಬರಿಗೆ ಕರೋನಾ ಸೋಂಕು. ಒಟ್ಟು 12 ಜನರಿಗೆ ಸೋಂಕು.ಸೋಂಕಿತರ ಸಂಖ್ಯೆ 416

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ನಿತ್ಯವೂ ಕರೋನಾ ಆರ್ಭಟ ಮುಂದುವರೆಯುತ್ತ ಇದೀಗಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 416ರ ಗಡಿ ಮುಟ್ಟಿದೆ.
ಗುರುವಾರದ ವರದಿಯಲ್ಲಿ ತಾಲೂಕಿನಲ್ಲಿ ಒಟ್ಟು 12 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಪೊಲೀಸ್ ಠಾಣೆಯ ಒರ್ವ ಪುರುಷ ಹಾಗೂ ಮಹಿಳಾ ಸಿಬ್ಬಂದಿಗೆ ಸೋಂಕು ತಗಲುವ ಮೂಲಕ ಠಾಣೆಯಲ್ಲಿ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಇನ್ನೂ ನಗರದ ಸಾರಿಗೆ ಇಲಾಖೆಯ ಘಟಕದ ಓರ್ವ ಸಿಬ್ಬಂದಿಯ ಮೂಲಕ ಅಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಇನ್ನೂಳಿದಂತೆ ತೆಕ್ಕಲಕೋಟೆಯ 10ನೇ ವಾರ್ಡ್ನ 60 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ತಾಲೂಕಿನ ಬಾಗೇವಾಡಿ ಗ್ರಾಮದ 16 ವರ್ಷದ ಯುವಕನಿಗೆ , ಕರೂರು ಗ್ರಾಮದಲ್ಲಿ 75 ವರ್ಷದ ವ್ಯಕ್ತಿಯೊರ್ವನಿಗೆ ಸೋಂಕು ಧೃಡಪಟ್ಟಿದ್ದರೆ,
ನಗರ ವರದಿ: ಸಿರುಗುಪ್ಪದ 42 ವ್ಯಕ್ತಿಯೊರ್ವನಿಗೆ, ಸದಾಶಿವ ನಗರದ 40 ವರ್ಷದ ವ್ಯಕ್ತಿ, ಬಸ್ ಡಿಪೋ ಬಳಿಯ 46 ವರ್ಷದ ಮಹಿಳೆ, ಸಿಂಧನೂರು ರಸ್ತೆಯ 50 ವರ್ಷದ ಮಹಿಳೆ, ಹೌಸಿಂಗ್ ಬೋರ್ಡ್ ಕಾಲೋನಿಯ 52ವರ್ಷದ ಪುರುಷ, 45 ವರ್ಷದ ಮಹಿಳೆ, ಆಶ್ರಯ ಕಾಲೋನಿಯ 45 ವರ್ಷದ ಪುರುಷ, ಹೌಸಿಂಗ್ ಬೋರ್ಡ್ ಕಾಲೋನಿಯ 29 ವರ್ಷದ ಯುವಕನೊರ್ವನಿಗೆ ಸೋಂಕು ಧೃಡಪಟ್ಟಿದೆ.
ಬುಧವಾರವು ಸಹ ನಗರದಲ್ಲಿ 11 ಜನರಿಗೆ ಸೋಂಕು ಧೃಡಪಟ್ಟಿದೆ.
ಒಟ್ಟು 416 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 232 ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಮೂಲಕ ನೆಮ್ಮದಿ ಮೂಡಿಸಿದೆ. ತಾಲೂಕಿನಲ್ಲಿ ಒಟ್ಟು 184 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

2 thoughts on “ಪೊಲೀಸ್ ಠಾಣೆಯಲ್ಲಿ ಇಬ್ಬರಿಗೆ, ಸಾರಿಗೆ ಇಲಾಖೆಯಲ್ಲಿ ಒಬ್ಬರಿಗೆ ಕರೋನಾ ಸೋಂಕು. ಒಟ್ಟು 12 ಜನರಿಗೆ ಸೋಂಕು.ಸೋಂಕಿತರ ಸಂಖ್ಯೆ 416

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap