ಪಿಯುಸಿ ಪರೀಕ್ಷೆ ಆರಂಭ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದ ವಿ.ಕೆ.ಜೆ. ಪದವಿ ಪೂರ್ವ ಕಾಲೇಜ್‌ನಲ್ಲಿ ಬುಧವಾರ ಪಿ.ಯು.ಸಿ. ದ್ವಿತಿಯಾ ವರ್ಷದ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಪ್ರಾರಂಭವಾಯಿತು.
ತಾಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ವಿಧ್ಯಾರ್ಥಿಗಳು ಬೆಳಿಗ್ಗೆಯೇ ಶಾಲೆಯ ಆವರಣಕ್ಕೆ ಆಗಮಿಸಿ ತಮ್ಮ ಪರೀಕ್ಷಾ ಕೊಠಡಿಗಳ ಬಗ್ಗೆ ಸೂಚನ ಫಲಕದಲ್ಲಿ ಮಾಹಿತಿ ಪಡೆದು ತಮ್ಮ ತಮ್ಮ ಕೊಠಡಿಗಳಿಗೆ ತೆರಳಿದರು. ಪಾಲಕರು ತಮ್ಮ ಮಕ್ಕಳಿಗೆ ಕೊಠಡಿಗಳನ್ನು ಹುಡುಕಲು ನೆರವಾಗುತ್ತಿರುವುದು ಪರೀಕ್ಷಾ ಕೇಂದ್ರಗಳಲ್ಲಿ ಕಂಡುಬAತು.
ವಿ.ಕೆ.ಜೆ ಕಾಲೇಜಿನ ಪ್ರಾಚಾರ್ಯ ಹಾಗೂ ಮುಖ್ಯ ಪರೀಕ್ಷಾ ಅಧೀಕ್ಷಕ ಶಾಂತನಗೌಡ ಮಾತನಾಡಿ, ತಾಲೂಕಿನಲ್ಲಿ ೧೪ ಪಿ.ಯು.P Áಲೇಜುಗಳಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ನಗರದಲ್ಲಿ ೨ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ವಿ.ಕೆ.ಜೆ ಕಾಲೇಜಿನಲ್ಲಿ ೧೦ ಕಾಲೇಜುಗಳ ೧೩೦೧೪ ವಿದ್ಯಾರ್ಥಿಗಳು, ೩೪ ಕೊಠಡಿಗಳಲ್ಲಿ ಪರೀಕ್ಷೆಗಳನ್ನು ಬರೆಯಲು ಅನುಕೂಲ ಕಲ್ಪಿಸಲಾಗಿದೆ. ಎಸ್.ಇ.ಎಸ್. ಬಾಲಕಿಯರ ಶಾಲೆಯಲ್ಲಿ ಡಾ.ಕೆ.ಶಿವಪ್ಪ ಮುಖ್ಯ ಪರೀಕ್ಷಾ ಅಧೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ೪ ಕಾಲೇಜುಗಳ ೯೫೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ೨ ಪರೀಕ್ಷಾ ಕೇಂದ್ರಗಳಲ್ಲಿಯೂ ಪ್ರತಿಯೊಂದು ಕೊಠಡಿಗಳಲ್ಲಿಯೂ ಸಿ.ಸಿ.ಕ್ಯಾಮರ ಅಳವಡಿಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಾಗಿದ್ದು, ನಕಲು ಮಾಡುವುದನ್ನು ತಡೆಯಲು ಜಾಗೃತ ತಂಡಗಳನ್ನು ಕೂಡು ರಚಿಸಲಾಗಿದೆ.
ಮೊದಲ ದಿನದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಇತಿಹಾಸ ಪರೀಕ್ಷೆಯನ್ನು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭËತಶಾಸ್ತç, ಸಾಮಾನ್ಯ ಗಣಿತ ವಿಷಯ ಕುರಿತು ಪರೀಕ್ಷೆಯನ್ನು ಬರೆಯಲಿದ್ದಾರೆಂದು ತಿಳಿಸಿದರು.
ಪರೀಕ್ಷಾ ಕೇಂದ್ರದ ಹೊರಗಡೆ ಪೊಲೀಸ್ ಬಂದೋಬಸ್ತ್, ಪರೀಕ್ಷಾರ್ಥಿಗಳಿಗೆ ಕುಡಿವ ನೀರಿನ ಸೌಲಭ್ಯ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಚಿಕಿತ್ಸೆ ಸೌಲಭ್ಯ ಸೇರಿದಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಸಿ.ಸಿ.ಕ್ಯಾಮರದಲ್ಲಿ ಕೊಠಡಿಗಳಲ್ಲಿ ನಡೆಯುತ್ತಿರುವ ಪರೀಕ್ಷೆ ಕುರಿತು ಡಾ.ಕೆ.ಶಿವಪ್ಪ ಮುಖ್ಯ ಪರೀಕ್ಷಾ ಅಧೀಕ್ಷಕರು ವೀಕ್ಷಿಸುವ ಮೂಲಕ ನಿಘವಹಿಸಿದರು.
ಬಿಎಲ್‌ವೈ೪ಎಸ್‌ಜಿಪಿ೪: ಸಿರುಗುಪ್ಪದಲ್ಲಿ ಬುಧವಾರ ಪ್ರಾರಂಭಗೊAಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಮ್ಮ ಕೊಠಡಿಗಳನ್ನು ಹುಡುಕುವಲ್ಲಿ ನಿರತರಾಗಿರುವ ವಿದ್ಯಾರ್ಥಿಗಳು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap