‘ಪತ್ರಕರ್ತ ರವಿಬೆಳೆಗೆರೆ ನಿಧನ ಶ್ರದ್ಧಾಂಜಲಿ’

ಸಿರಿನಾಡ ಸುದ್ದಿ, ಸಿರಿಗೇರಿ: ಶನಿವಾರ ಗ್ರಾಮದ ನಡವಿ ರಸ್ತೆಯಲ್ಲಿರುವ ಷಾದಿಮಹಲ್‌ನ ಭನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಸಿರಿಗೇರಿ ವಲಯದಿಂದ ಖ್ಯಾತ ಪತ್ರಕರ್ತ ರವಿಬೆಳೆಗೆರೆ ರವರ ನಿಧನಕ್ಕಾಗಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಕೆಲವೇ ಮುಖಂಡರಿ0ದ ಸಂಕ್ಷಿಪ್ತವಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ದಿವಂಗತ ರವಿಬೆಳೆಗೆರೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು, ನಂತರ ಅವರ ಆತ್ಮಕ್ಕೆ ಶಾಂತಿಕೋರಿ ಕೆಲನಿಮಿಷ ಮೌನಾಚರಣೆ ಕೈಗೊಂಡು ನಂತರ ಪುಷ್ಟಾರ್ಚನೆ ಮಾಡಿ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊAಡರು.
ಪ್ರಾರಂಭದಲ್ಲಿ ಕಸಾಪ ತಾ.ಅಧ್ಯಕ್ಷ ಎಸ್.ಎಂ.ನಾಗರಜಸ್ವಾಮಿ ಮಾತನಾಡಿ, ರವಿಬೆಳೆಗೆರೆ ಒಬ್ಬ ದಿಟ್ಟ ಬರಹಗಾರರು, ಎಷ್ಟೋ ನಿಗೂಢ ವಿಷಯಗಳನ್ನು ಬಯಲಿಗೆಳೆದು ಸುದ್ದಿಮಾಡಿ ಅನ್ಯಾಯವಾದವರಿಗೆ ನ್ಯಾಯ ಒದಗಿಸಿದವರು. ಖ್ಯಾತ ಪತ್ರಕರ್ತರ, ಬರಹಗಾರರ ಸಾಲಿನಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಿದವರು. ಹಾಯ್‌ಬೆಂಗಳೂರು, ಓ ಮನೆಸೇ, ಯುವಕರಿಗಾಗಿ ಯಶಸ್ಸಿನ ಗುಟ್ಟು ನಂತಹ ಪತ್ರಿಕೆಗಳನ್ನು ವಾರಪತ್ರಿಕೆಗಳನ್ನು ಹೊರತಂದು ಯುವಕರಿಗೆ ಸಾಧನೆಯ ಹಾದಿ ತೋರಿದವರು. ಕತೆ, ಕಾದಂಬರಿ, ಅನುವಾದ, ಜೀವನಚರಿತ್ರೆಗಳನ್ನು ಬರೆದು ಖ್ಯಾತಿ ಬರಹಗಾರರಾಗಿದ್ದರಂದು ತಿಳಿಸಿ, ಬೆಳೆಗೆರೆ ರವರು ಸಿರಿಗೇರಿ ಗ್ರಾಮಕ್ಕೆ ೨ಸಲ ಭೇಟಿನೀಡಿ ಯುವ ಬರಹಗಾರರ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದನ್ನು ಸ್ಮರಿಸಿದರು.
ನಂತರ ಎನ್.ಕುಮಾರ, ಎಪಿಎಂಸಿ ತಾಲೂಕು ಅಧ್ಯಕ್ಷ ಹಾಗಲೂರು ಮಲ್ಲನಗೌಡ, ಎಚ್.ಲಕ್ಷö್ಮಣ ಇತರರು ಮಾತನಾಡಿ ರವಿಬೆಳೆಗೆರೆ ಪತ್ರಿಕಾ ಮಾಧ್ಯಮದ ಒಂದು ಯಶಸ್ಸಿನ ಮೈಲಿಗಲ್ಲು, ಯುವ ಬರಹಗಾರರಿಗೆ, ಪತ್ರಕರ್ತರಿಗೆ ಒಂದು ಪ್ರೇರಣಾಶಕ್ತಿ, ಸಾಮಾಜಿಕ ಕಾರ್ಯಕರ್ತರಿಗೆ ದಾರಿದೀಪ, ಯುವಮನಸ್ಸುಗಳ ಓದುವ ತುಡಿತವಾಗಿದ್ದರು, ಇವರ ಕಾರ್ಯಸಾಧನೆ ಇತರರಿಗೊಂದು ಮಾದರಿ, ಇವರು ನಮ್ಮ ಜಿಲ್ಲೆಯವರೆಂಬುದೊ0ದು ನಮ್ಮ ಹೆಮ್ಮೆ, ಇವರ ನಿಧನದಿಂದ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊAಡರು.
ಮುಖಂಡರಾದ ಎಸ್.ಎಂ.ಅಡಿವೆಯ್ಯಸ್ವಾಮಿ, ಬಕಾಡೆ ಈರಯ್ಯ, ತಾ.ಪಂ.ಸದಸ್ಯ ವಿ.ರೇಣುಕಪ್ಪ, ಉರ್ದುಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಬಿ.ಅನ್ವರ್‌ಬಾಷ, ಮುಸ್ಲಿಂ ಕಮಿಟಿಯ ಎಸ್.ಶೆಕ್ಷಾವಲಿ, ಸದ್ದಾಮ್, ಎಚ್.ಈರಣ್ಣ, ಎಪಿ.ಪುನಿತ್, ಕೆ.ಶಿವಾಜಿ, ಇತರರು ಪಾಲ್ಗೊಂಡಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap