ಪಟ್ಟಣ ಪಂಚಾಯ್ತಿ ಅಧ್ಯಕ್ಷೆಯಾಗಿ ಕೆ.ಲಕ್ಷಿö್ಮಮಾರುತಿ ಅಧಿಕಾರ ಸ್ವೀಕಾರ.

ಸಿರಿನಾಡ ಸುದ್ದಿ, ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತ್ ಕಾರ್ಯಾಲಯದ ನೂತನ ಅಧ್ಯಕ್ಷೆಯಾಗಿ ಕೆ.ಲಕ್ಷಿö್ಮ ಮಾರುತಿ ಪೌರ ಕಾರ್ಮಿಕರಿಗೆ ಹೊಸಬಟ್ಟೆಗಳನ್ನು ಹಂಚುವ ಮೂಲಕ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ನೂತನ ಅಧ್ಯಕ್ಷರು, ಪಟ್ಟಣದ ವ್ಯಾಪ್ತಿಯಲ್ಲಿನ 20 ವಾರ್ಡಗಳಲ್ಲಿರುವ ನಾನಾ ಸಮಸ್ಯೆಗಳನ್ನು ಶಾಸಕ ಎಂ.ಎಸ್.ಸೋಮಲಿ0ಗಪ್ಪ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಪರಿಹಾರಿಸಿ ಅಭಿವೃದ್ದಿಪಡಿಸಲಾಗುತ್ತದೆ, ಕುಡಿವ ನೀರಿನ ಸಮಸ್ಯೆ, ಕಸ ನಿರ್ವಹಣೆ ಸಮಸ್ಯೆ, ಚರಂಡಿ ತ್ಯಾಜ್ಯ ವಿಲೆವಾರು ಸಮಸ್ಯೆಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಿ ಅಭಿವೃದ್ದಿ ಪಡಿಸಲಾಗುವುದು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಪ.ಪಂ.ಪ್ರಭಾರಿ ಮುಖ್ಯಾಧಿಕಾರಿ ಬಿ.ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ವಡ್ಡರ್ ಮಂಜುನಾಥ ಸೇರಿದಂತೆ , ಸದಸ್ಯರು ಪ.ಪಂ.ಸಿಬ್ಬ0ದಿ ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap