ಪಟ್ಟಣದಲ್ಲಿ ಮೊದಲ ಕೊರೋನಾ ಪ್ರಕರಣ ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣದ 7ನೇ ವಾರ್ಡಿನ ನಿವಾಸಿ 56 ವರ್ಷದ ಮಹಿಳೆಗೆ ಕೊರೋನಾ ಸೋಂಕು ಮಂಗಳವಾರ ದೃಢಪಟ್ಟಿದೆ. ಪಟ್ಟಣದಲ್ಲಿ ಮೊದಲನೇ ಪ್ರಕರಣ ದೃಢಪಟ್ಟಿರುವದರಿಂದ ಕುರುಗೋಡಿನ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ.
ಈ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದು ನಾಲ್ಕು ದಿನದ ಹಿಂದೆ ಚಿಕಿತ್ಸೆ ಪಡೆಯಲು ಬಳ್ಳಾರಿ ಇಂದ್ರ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು. ಅಲ್ಲಿ ಕೊವೀಡ್ ಪರೀಕ್ಷೆ ಮಾಡಲಾಗಿದ್ದು, ಪಾಜೀಟಿವ್ ಎಂದು ದೃಢಪಟ್ಟಿದೆ. ರೋಗ ನಿರೋಧಕ ಶಕ್ತಿ ಕಡಿಮೆಯ ವರ್ಗದಿಂದ ಸೋಂಕು ಬಂದಿದೆ ಎಂದು ಪತ್ತೆ ಮಾಡಲಾಗಿದೆ ಎಂದು ಡಾ|| ಮಂಜುನಾಥ ಜವಳಿ ತಿಳಿಸಿದರು.
ಕೊರೋನಾ ಸೋಂಕಿತ ಮಹಿಳೆಯು ಪಟ್ಟಣದ ಬಸ್ ಡೀಪೋದ ಹಿಂದುಗಡೆಯಲ್ಲಿರುವ ತೋಟದ ಮನೆಯಿಂದ ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಲಾಯಿತು. ಸೋಂಕಿತ ಮಹಿಳೆಯ ಮನೆಯಲ್ಲಿರುವ 10 ಜನರನ್ನು ಕ್ವಾರಟೈನ್ ಮಾಡಲಾಗಿದೆ.
ತಾಲೂಕು ಆಡಳಿತ 7ನೇ ವಾರ್ಡ್ನ್ನು ಕಂಟೈನ್‌ಮೆAಟ್ ಜೋನ್ ಆಗಿ ಪರಿವರ್ತಿಸಿ, ಬ್ಯಾರಿಕೇಡ್ ಅಳವಡಿಸಿ ಸ್ಯಾನಿಟೈಜರ್ ಸಿಂಪರಣೆ ಮಾಡಿ ಹಾಗೂ ವೈರಸ್ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ರಾಘವೇಂದ್ರ ರಾವ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್2 ತಹಶೀಲ್ದಾರ್ ಮಲ್ಲೇಶಪ್ಪ, ಹಿರಿಯ ಆರೋಗ್ಯ ಸಹಾಯಕ ಕೆ.ಮಂಜುನಾಥ, ಕಂದಾಯ ನಿರೀಕ್ಷಕ ಬಸಲಿಂಗಪ್ಪ, ಆರ್.ಆರ್.ಟಿ ತಂಡ ಆರೋಗ್ಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap