ನಿವೃತ್ತ ಮುಖ್ಯಾಧಿಕಾರಿಗೆ ಬೀಳ್ಕೊಡುಗೆ

ಸಿರಿನಾಡ ಸುದ್ದಿ, ಕೊಟ್ಟೂರು: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ಎಫ್.ಬಿದರಿ ಸೇವಾ ನಿವೃತ್ತಿಗೊಂಡ ಹಿನ್ನಲೆಯಲ್ಲಿ ಸಿಬ್ಬಂದಿಯವರು ಮಂಗಳವಾರ ಸನ್ಮಾನಿಸಿ ಬೀಳ್ಕೊಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ.ಪಂ. ಮುಖ್ಯಾಧಿಕಾರಿ ಹಾಗೂ ತಹಸೀಲಾರ ಅನಿಲ್‌ಕುಮಾರ್ ಜಿ. ಮಾತನಾಡಿ, ಸರಕಾರಿ ನೌಕರರಿಗೆ ಸೇವಾ ನಿವೃತ್ತಿ ಕಡ್ಡಾಯ. ಸೇವೆಯಲ್ಲಿದ್ದವರು ಎಷ್ಟು ವರ್ಷ ಸೇವೆ ಸಲ್ಲಿಸಿದ್ದರು ಎನ್ನುವುದಕ್ಕಿಂತ ಎಷ್ಟು ಜನರ ಸೇವೆ ಮಾಡಿದ್ದಾರೆಂಬುದು ಮುಖ್ಯ. ಮುಖ್ಯಾಧಿಕಾರಿಗಳಾಗಿದ್ದ ಬಿದರಿಯವರು, ಉತ್ತಮ ಕಾರ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಹತ್ತಿರವಾಗಿದ್ದರು ಎಂದರು.
ಮುಖ್ಯಾಧಿಕಾರಿ ಎಚ್.ಎಫ್.ಬಿದರಿ ಮಾತನಾಡಿ, ತನ್ನ ವೃತ್ತಿಯುದ್ದಕ್ಕೂ ಸಿಬ್ಬಂದಿಗಳ ಸಹಕಾರದಿಂದ ಉತ್ತಮ ಕಾರ್ಯ ಮಾಡಲು ಸಾಧ್ಯವಾಯಿತು ಎಂದರು.
ಸಿಬ್ಬಂದಿ ರಾಜಾಭಕ್ಷಿ, ಚಂದ್ರಶೇಖರ ಮಾತನಾಡಿದರು.
ಪ್ರಭಾರಿ ಮುಖ್ಯಾಧಿಕಾರಿ ಪೃಕ್ಕುದ್ದೀನ್, ಆರೋಗ್ಯ ನೀರಿಕ್ಷಕಿ ಅನುಷಾ, ಸಿಬ್ಬಂದಿಗಳಾದ ಅಗಡಿ ಮಂಜುನಾಥ, ಮುತ್ತುರಾಜು, ತಿಮ್ಮಣ್ಣ, ಅಶೋಕ, ಕೇಶವ, ಕೊಟ್ರೇಶ ಸೇರಿ ಇತರರಿದ್ದರು. ಕಚೇರಿ ಸಿಬ್ಬಂದಿ, ತಾಲೂಕು ಆಡಳಿತ ಇತರರು ಸನ್ಮಾನಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap