ನಿಲ್ಲದ ಕರೋನಾ ಓಟ ಆತಂಕದಲ್ಲಿ ಜನತೆ.

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣದ 23ನೇ ವಾರ್ಡಿನ 36 ವರ್ಷದ ವ್ಯಕ್ತಿಗೆ, ಸಮೀಪದ ಹೊಸ ಗೆಣಿಕೆಹಾಳ್ ಗ್ರಾಮದ 54 ವರ್ಷದ ವ್ಯಕ್ತಿ ಹಾಗೂ 49 ವರ್ಷದ ಮಹಿಳೆ ಮತ್ತು ಬೈಲೂರು ಗ್ರಾಮದ 54 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಶನಿವಾರ ದೃಢಪಟ್ಟಿದೆ. ಸಾರ್ವಜನಿಕರಲ್ಲಿ ಭಯದ ಬೀತಿ ಹೆಚ್ಚಿದೆ.
ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿದ್ದು, ಕೊರೋನಾ ಪಾಜಿಟಿವ್ ದೃಢಪಟ್ಟಿದ್ದು, ಸೋಂಕಿತರನ್ನು ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವೈದ್ಯಾಧಿಕಾರಿ ಮಂಜುನಾಥ ಜವಳಿ ತಿಳಿಸಿದರು.
ಸೋಂಕಿತ ವ್ಯಕ್ತಿಗಳ ಮನೆಯಲ್ಲಿರುವ ಜನರನ್ನು ಮನೆ ಕ್ವಾರಟೈನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಗಳು ವಾಸಿಸುವ ಪ್ರದೇಶವನ್ನು ಕಂಟೈನ್‌ಮೆ0ಟ್ ಜೋನ್ ಆಗಿ ಪರಿವರ್ತಿಸಿ, ಬ್ಯಾರಿಕೇಡ್ ಅಳವಡಿಸಿ ಸ್ಯಾನಿಟೈಜರ್ ಸಿಂಪರಣೆ ಮಾಡಿ ಹಾಗೂ ವೈರಸ್ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ರಾಘವೇಂದ್ರ ರಾವ್ ತಿಳಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap