ನಾನು ಮನಸ್ಸು ಮಾಡಿದ್ದಡಿರೇ, ಇದೇ ಸರಕಾರದಲ್ಲಿ ಸಚಿವನಾಗುತ್ತಿದ್ದೆ! – ಶಾಸಕ ಜಿ.ಎನ್.ಗಣೇಶ್.

ಸಿರಿನಾಡ ಸುದ್ದಿ ಕಂಪ್ಲಿ: ನಾನು ಮನಸ್ಸು ಮಾಡಿದ್ದಡಿರೇ, ಇದೇ ಸರಕಾರದಲ್ಲಿ ಸಚಿವನಾಗುತ್ತಿದ್ದೆ. ಕಷ್ಟಕಾಲದಲ್ಲಿ ನನಗೆ ಟಿಕೆಟ್ ನೀಡಿದ ಕಾಂಗ್ರೆಸ್ ಪಕ್ಷಕ್ಕೆ, ನನ್ನನ್ನು ಗೆಲ್ಲಿಸಿದ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡಬಾರದೆಂದು ಬದಲಾವಣೆ ಬಯಸಲಿಲ್ಲ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ತಾಲೂಕಿನ ಮೆಟ್ರಿ ಗ್ರಾಮದಲ್ಲಿ, ಡಿಕೆಸಿ ಅಧಿಕಾರ ಸ್ವೀಕಾರದ ಪ್ರತಿಜ್ಞಾ ದಿನದ ನಿಮಿತ್ತ ಎರ್ಪಡಿಸಿದ ಪೂರ್ವಭಾವಿ ಸಭೆಯಲ್ಲಿ ಸೋಮವಾರ ಮಾತನಾಡಿದರು, ಪಕ್ಷಕ್ಕೆ ದ್ರೋಹ ಬಗೆಯುವುದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ. ಸಮ್ಮಿಶ್ರ ಸರಕಾರದ ಆಡಳಿತ ಅವಧಿಯಲ್ಲಿಯೇ ಕಂಪ್ಲಿ ಕ್ಷೇತ್ರ ಅಭಿವೃದ್ದಿಯಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ದಬ್ಬಾಳಿಕೆ ಆಡಳಿತ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು, ಪ್ರತಿಪಕ್ಷದವರು ಪೊಲೀಸರ ಮೂಲಕ ಬೆದರಿಕೆಸುತ್ತಿದ್ದಾರೆ ಎಂದು ದೂರಿದರು. ಪಕ್ಷದ ಕಾರ್ಯಕರ್ತರು ಸದಾ ಕ್ರಿಯಶೀಲರಾಗಿದ್ದು, ಪಕ್ಷವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಮುಂದೆ ಬರುವ ಗ್ರಾ.ಪಂ, ತಾ.ಪಂ. ಮತ್ತು ಜಿ.ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಪಡಿಸಲಾಗುವುದು. ಜು.2ರಂದು ಜರುಗುವ ಡಿಕೆಸಿಯವರ ಪ್ರತಿಜ್ಞಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು. ಕೆಪಿಸಿಸಿ ಸದಸ್ಯರಾದ ಕಲ್ಲುಕಂಬ ಪಂಪಾಪತಿ, ಎಚ್.ಮಹ್ಮದ್‌ಗೌಸ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಸುಧೀರ್, ಮುಖಂಡರಾದ ಹೊನ್ನಳ್ಳಿ ಗಂಗಾಧರ, ನೇಣ್ಕಿ ಗಿರೀಶ, ಹೊಸಕೋಟೆ ಜಗದೀಶ್, ಜನಾರ್ಧನ, ಎಚ್.ಶಂಕ್ರಪ್ಪ, ರ‍್ರಿಸ್ವಾಮಿ, ಜಗದೀಶ್, ಎಚ್.ಜಗದೀಶ್, ಮಹೇಶ್, ಗಂಗಾಧರ ಇತರಿದ್ದರು. ಇದಕ್ಕೂ ಮುಂಚೆೆ ದೇವಲಾಪುರ, ಸುಗ್ಗೇನಹಳ್ಳಿ, ಜವುಕು, ದೇವಸಮುದ್ರ, ರಾಮಸಾಗರ, ನಂ.10ಮುದ್ದಾಪುರ, ಸಣಾಪುರ ಗ್ರಾಮಗಳಲ್ಲಿ ಪೂರ್ವ ಭಾವಿ ಸಭೆ ಜರುಗಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap