ನಾಗತಿಬಸಾಪುರ : ನಾಡಪ್ರಭು ಕೆಂಪೇಗೌಡ ಜಯಂತಿ

ಸಿರಿನಾಡ ಸುದ್ದಿ, ಹೂವಿನಹಡಗಲಿ: ತಾಲೂಕಿನ ನಾಗತಿಬಸಾಪುರದಲ್ಲಿ ಶ್ರೀ ಕೆಂಪೇಗೌಡ ಯುವಕ ಮಿತ್ರ ಮಂಡಳಿಯಿ0ದ ನಾಡಪ್ರಭು ಕೆಂಪೇಗೌಡರ 511ನೇ ಜಯಂತಿಯನ್ನು ಆಚರಿಸಲಾಯಿತು.
ಗ್ರಾಮದ ಬಸವವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಕೆಂಪೇಗೌಡ ಯುವಕ ಮಿತ್ರ ಮಂಡಳಿ ಹಾಗೂ ಶ್ರೀಗುರು ಚಂದ್ರಜ್ಜ ಗ್ರಾಮೀಣಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 511ನೇ ಜಯಂತಿಯ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಹಮ್ಮದ್‌ಗೌಸ್ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಸದ್ಗುರು ಶಿವಯೋಗಿ ಡಾ.ಎಂ.ಪಿ.ಎA.ಮAಜುನಾಥ ಮಾತನಾಡಿ, ಜಗತ್ತಿನಾದ್ಯಂತ ಆವರಿಸಿರುವ ಮಹಾಮಾರಿ ಕೊರೋನಾ ರೋಗದ ಕುರಿತು ಜನರಲ್ಲಿ ಗಂಭೀರತೆಯಿಲ್ಲ ಎಂದರು. ಜೀವನಕ್ಕಿಂತ ಮೊದಲು ಜೀವ ಎಂಬುದನ್ನು ಜನರು ತಿಳಿಯಬೇಕಿದೆ. ನಿರ್ಲಕ್ಷದ ಮನೋಭಾವನೆ ತೊರೆದು ಜಾಗೃತರಾಗಿ ಸರ್ಕಾರ ಏರಿರುವ ನಿಯಮಗಳನ್ನು ಎಲ್ಲರೂ ಪಾಲಿಸಬೇಕಾಗಿರುವುದು ಅತ್ಯಂತ ಅವಶ್ಯ ಎಂದು ಹೇಳಿದರು. ನಾಡಪ್ರಭು ಕೆಂಪೇಗೌಡರ 511ನೇ ಜಯಂತಿಯ ನೆಪದಲ್ಲಿ ಆಶಾಕಾರ್ಯಕರ್ತೆಯರನ್ನೊಳಗೊಂಡAತೆ ಬಡತನದ ರೇಖೆಯ ಕೆಳಗಿರುವವರಿಗೆ 30 ಜನರಿಗೆ ಆಹಾರದ ಕಿಟ್ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಕನ್ನಡ ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ, ರಾಷ್ಟಿçÃಯ ಸ್ವಯಂ ಸೇವಾ ಯೋಜನೆಯ ಕಾರ್ಯಕರ್ತ ದೊಡ್ಮನೆ ಪುನೀತ್ ಮಾತನಾಡಿದರು.
ಶ್ರೀ ಕೆಂಪೇಗೌಡ ಯುವಕ ಮಿತ್ರ ಮಂಡಳಿಯ ಅಧ್ಯಕ್ಷ ಎನ್.ಚಂದ್ರಶೇಖರ್, ಶ್ರೀಗುರು ಚಂದ್ರಜ್ಜ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಎನ್.ದೊರೆಯಪ್ಪ ನಾಯಕ, ದಾಕ್ಷಾಯಣಮ್ಮ ಮಲ್ಲಪ್ಪ ಉಪಸ್ಥಿತರಿದ್ದರು. ಪದಾಧಿಕಾರಿಗಳಾದ ನಾಗರಾಜ, ಮೈಲಾರ ಷಡಕ್ಷರಿ, ಮಾಗಳದ ಪ್ರಸನ್ನ, ಮಾಗಳದ ವಿನಾಯಕ ಮೈಲಾರ ಸಚಿನ್, ಪಿ.ಸೌದ್‌ಸಾಬ್, ಕಿರಣ್‌ಕುಮಾರ್ ಇತರರು ಇದ್ದರು.
ಆರಂಭದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪಿ.ಸೌದ್‌ಸಾಬ್ ಸ್ವಾಗತಿಸಿದರು. ಮಾಗಳದ ವಿನಾಯಕ ನಿರ್ವಹಿಸಿದರು. ಮೈಲಾರ ಸಚಿನ್ ವಂದಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap