ನರೇಗಾ: ರಾಯಚೂರು ತಾಲೂಕಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಕಟ್ಟಡ ನಿರ್ಮಾಣ

ಸಿರಿನಾಡ ಸುದ್ದಿ, ರಾಯಚೂರು: ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸಮಸ್ಯೆ ನಿವಾರಣೆಗೆ ಮಹಾತ್ಮ ಗಾಂಧಿ ರಾಷ್ಟಿçಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನೆರವಾಗಿದ್ದು, ರಾಯಚೂರು ತಾಲೂಕಿನ ಪೂರ್ವ ಪ್ರಾಥಮಿಕ ಶಾಲೆಗಳು ಸರಿಯಾದ, ಸುಸಜ್ಜಿತ ಮತ್ತು ಸ್ವಂತ ಕಟ್ಟಡಗಳು ಇಲ್ಲದೇ ಮಕ್ಕಳಿಗೆ ಪೂರ್ವ ಶಿಕ್ಷಣ ನಡೆಯತ್ತಿತ್ತು.
ಇಂತಹ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟಿçಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ಕೆರೆ ಕುಂಟೆ ಹೊಳೆತ್ತುವುದು, ಕೃಷಿ ಹೊಂಡ, ಬದು ನಿರ್ಮಾಣ, ಗೊಕಟ್ಟೆ ನಿರ್ಮಾಣ, ಕಲ್ಯಾಣಿಗಳ ನಿರ್ಮಾಣದಿಂದ ಜಲ ಮೂಲಗಳ ಜೀವ ಪಡೆಯುವುದರೊಂದಿಗೆ, ಗ್ರಾಮಭಿವೃದ್ಧಿ ಕಲ್ಪನೆಯಲ್ಲಿ ಪೂರ್ವ ಶಾಲಾ ಶಿಕ್ಷಣಕ್ಕೆ ಬೇಕಾಗುವ ಕಟ್ಟಡ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ.ಲಕ್ಷಿö್ಮಕಾಂತ ರೆಡ್ಡಿ ಅವರು ಒತ್ತು ನೀಡಿ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು, ಗ್ರಾಮಸ್ಥರಿಂದ 0-6 ವರ್ಷದ ಶಾಲಾ ಪೂರ್ವ ತರಬೇತಿ ಕೇಂದ್ರ ಅಂಗನವಾಡಿಗಳನ್ನು ಗುರುತಿಸಲಾಗಿದೆ.
ಮಹಾತ್ಮ ಗಾಂಧಿ ರಾಷ್ಟಿçಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2020-21 ನೇ ಸಾಲಿನಲ್ಲಿ ರಾಯಚೂರು ತಾಲೂಕಿನಲ್ಲಿ 30 ಅಂಗನವಾಡಿ ಕೇಂದ್ರಗಳ ಪೈಕಿ 19 ಅಂಗನವಾಡಿ ಕೇಂದ್ರಗಳು ಪ್ರಗತಿಯಲ್ಲಿವೆ.
ಯಾಪಲದಿನ್ನಿ 01, ಜಂಬಲದಿನ್ನಿ 01, ಕಮಲಾಪೂರು 01, ಎಲ್.ಕೆ..ದೊಡ್ಡಿ 02, ಗುಂಜಳ್ಳಿ 02, ತಲಮಾರಿ 01, ಯರಗೇರಾ 04, ಹಿರಾಪೂರು 01, ಪೂರತಿಪ್ಲಿ 01, ಜೇಗರಕಲ್ 01, ಜಾ.ವೆಂಕಟಪೂರು 01, ಕಾಡ್ಲೂರು 02, ದೇವಸೂಗುರು 01 ಪ್ರತಿ ಅಂಗನವಾಡಿಗೆ ರೂ 10.80 ಲಕ್ಷ ನಿಗದಿಪಡಿಸಿದ್ದು, ಮಾನವ ದಿನಗಳು ಸೃಜನೆ ಮಾಡವುದರೊಂದಿಗೆ ಅಸ್ತಿಗಳ ಸೃಜನೆಯಾಗುತ್ತಿವೆ.
ಕೋವಿಡ್-19 ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಯೋಜನೆಯಡಿ ಕೆಲಸ ಒದಗಿಸುವುದರೊಂದಿಗೆ ಗ್ರಾಮೀಣ ಜನರ ಮಕ್ಕಳಿಗೆ ಪೂರ್ವ ಶಿಕ್ಷಣ ಕಲ್ಪಿಸಲು ಸುಸಜ್ಜಿತ ಅಂಗನವಾಡಿ ಕಟ್ಟಡಗಳು ನಿರ್ಮಾಣ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದಂತೆ ಪ್ರಗತಿ ಸಾಧಿಸುವತ್ತ ಕಾರ್ಯನಿರ್ವಾಹಕ ಅಧಿಕಾರಿಗಳು ಮುಂದಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap