ನಗರದಲ್ಲಿ ಐವರು ಹಾಗೂ ಗ್ರಾಮೀಣ ಭಾಗದಲ್ಲಿ ಮೂವರಿಗೆ ಒಟ್ಟು 8 ಜನರಿಗೆ ಕರೋನಾ ಸೋಂಕು ಧೃಡ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಕರೋನಾ ಆರ್ಭಟ ನಿತ್ಯವೂ ನಿರಂತರವಾರಿ ಮುಂದುವರೆದಿದೆ. ಸೋಮವಾರ ನಗರದಲ್ಲಿ 5 ಜನರಿಗೆ ಹಾಗೂ ತಾಲೂಕಿನ ದೇಶನೂರು ಇಬ್ಬರಿಗೆ ಮತ್ತು ಕರೂರು ಗ್ರಾಮದಲ್ಲಿ ಓರ್ವ ಮಹಿಳೆ ಒಟ್ಟು 8 ಜನರಿಗೆ ಕರೋನಾ ಸೋಂಕು ಧೃಡಪಟ್ಟಿವೆ.
ನಗರದ 21ನೇ ವಾರ್ಡ್ನ 35 ವರ್ಷದ ಮಹಿಳೆ ಹಾಗೂ 17 ವರ್ಷದ ಯುವಕರಿಬ್ಬರಿಗೆ ಸೋಂಕು ತಗುಲಿದರೆ, 24ನೇ ವಾರ್ಡ್ನ 50 ವರ್ಷದ 75 ವರ್ಷದ ಪುರುಷರಿಬ್ಬರಿಗೆ, ಜತೆಗೆ ವಿವಿ ನಗರದ 44 ವರ್ಷದ ಪುರುಷನಿಗೆ ಸೋಂಕು ಧೃಡಪಟ್ಟಿದ್ದರೆ,
ಇನ್ನೂ ತಾಲೂಕಿನ ದೇಶನೂರು ಗ್ರಾಮದ 78 ವರ್ಷದ ಪುರುಷ ಹಾಗೂ 70 ವರ್ಷದ ಮಹಿಳೆ ಸೇರಿ ಇಬ್ಬರಿಗೆ ಹಾಗೂ ತಾಲೂಕಿನ ಕರೂರು ಗ್ರಾಮದ 65 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ಧೃಡಪಟ್ಟಿದೆ. ಇದರೊಂದಿಗೆ ತಾಲೂಕಿನಲ್ಲಿ ಒಟ್ಟು 8 ಜನರಿಗೆ ಸೋಂಕು ಧೃಡಪಟ್ಟಿದೆ.
ಸೋಂಕಿತರನ್ನು ತಾಲೂಕಿನ ಕೆಂಚನಗುಡ್ಡದ ಬಳಿಯ ಕೋವಿಡ್ ಕೇರ್ ಆಸ್ಪತ್ರೆಗೆ ದಾಖಲಿಸುವ ಮತ್ತು ಸೋಂಕಿತರ ಪ್ರದೇಶದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಗತ್ಯ ಸೋಂಕು ನಿವಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap