ದ್ರುಷ್ಟಿದೋಷ ಇರುವ ವಿದ್ಯಾರ್ಥಿಗಳಿಗೆ ಕನ್ನಡಕ ಸಹಕಾರಿ- ಡಾ.ಸುರೇಶ್

ಸಿರಿನಾಡ ಸುದ್ದಿ, ಕುರುಗೋಡು : ದ್ರಷ್ಟಿದೋಷ ಇರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ನೀಡುವ ಕನ್ನಡಕ ಸಹಕಾರಿಯಾಗಿದೆ ಎಂದು ಸಮುದಾಯ ಆರೋಗ್ಯಕೇಂದ್ರದ ನೇತ್ರಾಧಿಖಾರಿ ಸುರೇಶ್ ಹೇಳಿದರು.
ಮಂಗಳವಾರ ಪಟ್ಟಣದ ಸರ್ಕಾರಿ ಬಾಲಕಿಯರ ಫೌಢಶಾಲೆಯಲ್ಲಿ ಜಿಲ್ಲಾ ಅಂದತ್ವ ನಿವಾರಣಾ ಸಂಸ್ಥೆ ಬಳ್ಳಾರಿ, ಸಮುದಾಯ ಆರೋಗ್ಯಕೇಂದ್ರ ಕುರುಗೋಡು, ಆರ್‌ಬಿಎಸ್‌ಕೆ ಕುರುಗೋಡು ಇವರ ಸಂಯುಕ್ತಾಶ್ರಯದಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಕನ್ನಡಕ ವಿತರಿಸಿ ಮಾತನಾಡಿದ ಅವರು, ದ್ರಷ್ಟಿದೋಷ ಇರುವ ವಿದ್ಯಾರ್ಥೀನಿಯರು ಕನ್ನಡPಗಳನ್ನು ಉಪಯೋಗಿಸುವುದರಿಂದ ಶೈಕ್ಷಣಿಕ ಮಟ್ಟ ಹೆಚ್ಚಾಗಲು ಸಾದ್ಯ ಎಂದರು.
ಬಾಲಕಿಯರ ಫೌಢಶಾಲೆಯ ಹಿರಿಯ ಶಿಕ್ಷಕಿ ಟಿ. ಮಲ್ಲಮ್ಮ ಮಾತಾನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸಕ್ರಿಯವಾಗಿ ಉಪಯೋಗಿಸಿಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಬೇಕೆಂದು ಸಲಹೆ ನೀಡಿದರು. ನಂತರ ಶಾಲೆಯ ಒಟ್ಟು ೧೭ ಮಂದಿ ವಿದ್ಯಾರ್ಥಿನಿಯರಿಗೆ ಉಚಿತ ಕನ್ನಡಕಗಳನ್ನು ವಿತಿರಿಸಲಾಯಿತು. ಆರೋಗ್ಯ ಹಿರಿಯ ಸಹಾಯಕ ಮಂಜುನಾಥ, ಬಸವರಾಜಸ್ವಾಮಿ, ಶಿಕ್ಷಕ ಎ.ರವಿ, ಚಿನ್ನಬೋರಾನಾಯಕ್, ಹೊನ್ನೂರಪ್ಪ, ಕ್ರುಷ್ಣಯ್ಯ, ಪರ್ವಿನ್‌ಬಾನು, ಬಿ.ಶ್ರೀಕಾಂತ್, ಜಿ.ಆನಂದ್, ಮಾರೆಪ್ಪ, ಆರೋಗ್ಯಮಿತ್ರ ಶರಣಬಸವ, ಮೌನೇಶ್, ಮಹೆಬೂಬ್‌ಭಾಷ, ಸೇರಿದಂತೆ ಇತರೆ ವಿದ್ಯಾರ್ಥಿಗಳು ಇದ್ದರು.
ಉಚಿತ ರಕ್ತಗುಂಪು ಪರೀಕ್ಷೆ
ಆರ್‌ಬಿಎಸ್‌ಕೆ ಕಾರ್ಯಕ್ರಮದ ಶಾಲಾ ಆರೋಗ್ಯ ಚಟುವಟಿಕೆಯಡಿ ಆರ್‌ಬಿಎಸ್‌ಕೆ. ವೈದ್ಯಾಧಿಕಾರಿ ಶಿವಶಾಂತಲಾ ನೇತ್ರುತ್ವದಲ್ಲಿ ೧೦ ರಿಂದ ೧೯ ವರ್ಷದ ಹದಿಹರೆಯದ ಸರ್ಕಾರಿ ಬಾಲಕಿಯರ ಫೌಢಶಾಲೆಯಲ್ಲಿ ೮,೯, ಮತ್ತು ೧೦ನೇ ತರಗತಿಯ ವಿದ್ಯಾರ್ಥಿನಿಯರಿಗೆ ಉಚಿತ ರಕ್ತದ ಗುಂಪು ತಪಾಸಣಾ ಶಿಬಿರವನ್ನು ಏರ್ಪಡಿಸಿ, ಅವರಿಗೆ ರಕ್ತದ ಗುಂಪು ಚೀಟಿಯನ್ನು ವಿತರಿಸಿದರು. ಒಟ್ಟು ೩೩೬ ಮಂದಿ ವಿದ್ಯಾರ್ಥಿನಿಯರಿಗೆ ರಕ್ತದ ಗುಂಪು ಪರೀಕ್ಷೆಕಮಾಡಲಾಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap