ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲವು ಆಹಾರಗಳು

ಬೆಂಗಳೂರು: ಕೋವಿಡ್ -19 ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡಿದೆ.
ದ್ರಾಕ್ಷಿ ಹಣ್ಣು, ಕಿತ್ತಳೆ ಹಣ್ಣು,ಮೋಸಂಬಿ ಹಣ್ಣು, ನಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ ಎಂದು ಸಲಹೆ ನೀಡಲಾಗಿದೆ. ಕೆಂಪು ದೊಣ್ಣೆ ಮೆಣಸಿನ ಕಾಯಿ, ಗೆಡ್ಡೆ ಕೋಸು, ಬೆಳ್ಳುಳ್ಳಿ, ಶುಂಠಿ ಕೂಡಾ ಆರೋಗ್ಯದಾಯಕ ಆಹಾರಗಳಾಗಿವೆ.
ಅದೇ ರೀತಿಯಲ್ಲಿ ಮೊಸರು, ಬಾದಾಮಿ, ಸೂರ್ಯಕಾಂತಿ ಬೀಜ, ನಿಂಬೆ ಕಾಯಿ, ಅರಿಶಿಣ, ಗ್ರೀನ್ ಟೀ, ಪಪ್ಪಾಯಿ ಮತ್ತು ಕಿವಿಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap