ತಾಲೂಕಿನಲ್ಲಿ 50ರ ಗಡಿ ದಾಟಿದ ಕರೋನಾ ಸೋಂಕಿತರ ಸಂಖ್ಯೆ. ಬುಧವಾರ 6, ಗುರುವಾರ 4, ಒಟ್ಟು ಸೋಂಕಿತರು 51, ಗುಣಮುಖ 7

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಕರೋನಾ ರಣಕೇಕೆ ದಿನದಿಂದ ದಿನಕ್ಕೆ ಸಾರ್ವಜನಿಕರನ್ನು ಬೆಚ್ಚಿ ಬಿಳಿಸುವಂತೆ ಮಾಡಿದೆ. ಮೊದಲಿಗೆ ಕೇವಲ ಗ್ರಾಮೀಣ ಪ್ರದೇಶದ ಹೊಸಳ್ಳಿ ಮತ್ತು ಗೋಸಬಾಳು ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕರೋನಾ ಇದೀಗಾ ಸಿರುಗುಪ್ಪ, ತೆಕ್ಕಲಕೋಟೆಯಲ್ಲಿ ತನ್ನ ಪ್ರಭವ ಹೆಚ್ಚಿಸಿದೆ. ಇನ್ನೂ ಗ್ರಾಮೀಣ ಪ್ರದೇಶವನ್ನು ಸಹ ಬೆಂಬಿಡದೆ ಕಾಡುತ್ತಿರುವುದು ಜನರಿಗೆ ದಿಕ್ಕು ತೋಚದಂತಾಗಿದೆ.
ಪ್ರಾರಂಭದಿAದಲು ಇಲ್ಲಿಯವರಗೆ ಮಂಗಳವಾರದ ವರೆಗೆ 41 ಪ್ರಕರಣಗಳು ಪತ್ತೆಯಾಗಿದ್ದವು, ಬುಧವಾರ ಮತ್ತು ಗುರುವಾರ ಬಂದ ವರದಿಯಲ್ಲಿ ಒಟ್ಟು 10 ಪ್ರಕರಣಗಳು ಪತ್ತೆಯಾಗಿವೆ. ಬುಧವಾರ ಪತ್ತೆಯಾದ ಪ್ರಕರಣಗಳಲ್ಲಿ ಸಿರುಗುಪ್ಪದ 28ನೇ ವಾರ್ಡ್ನ (16 ಮತ್ತು 17 ವರ್ಷದ ಸೊಂಕಿತ ಬಾಲಕಿಯರÀ) ಸಂಪರ್ಕದಲ್ಲಿದ್ದ 61 ವರ್ಷದ ತಂದೆ ಮತ್ತು 12 ವರ್ಷದ ಮಗನಿಗೆ ಕರೋನಾ ಧೃಡಪಟ್ಟಿದೆ, ತೆಕ್ಕಲಕೋಟೆಯ ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಪರ್ಕದಲ್ಲಿದ್ದ 50ವರ್ಷದ ವ್ಯಕ್ತಿಯೊರ್ವನಿಗೆ ಸೊಂಕು ಧೃಡಪಟ್ಟಿದೆ. ದೇವಲಾಪುರದ 41 ವರ್ಷದ ವ್ಯಕ್ತಿ, ಕಚೇರಿ ದಿಗ್ಬಂದನದಲ್ಲಿದ್ದ ಮೈಲಾಪುರ ಗ್ರಾಮದ 28 ವರ್ಷದ ಮಹಿಳೆಗೆ ಸೊಂಕು ಧೃಡಪಟ್ಟಿದೆ. (ಗ್ರಾಮದಲ್ಲಿ ಈ ಹಿಂದೆ ಸೊಂಕು ಧೃಡಪಟ್ಟ 31 ವರ್ಷ ವ್ಯಕ್ತಿಯ ಪತ್ನಿ), ಜತೆಗೆ ನಿತ್ಯೂ ಕರೋನಾ ವಿರುದ್ಧ ಹೋರಾಟ ಮಾಡುತ್ತಿದ್ದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ 30 ವರ್ಷದ ಲ್ಯಾಬ್ ಟೆಕ್ನಿಷಿಯನ್‌ಗೂ ಸಹ ಕರೋನಾ ಸೊಂಕು ಧೃಪಟ್ಟಿರುವುದು ಆತಂಕಕ್ಕೆ ಗುರಿ ಮಾಡಿದೆ.
ಇನ್ನೂ ಗುರುವಾರ ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಸಿರುಗುಪ್ಪದ 9ನೇ ವಾರ್ಡನ 5ವರ್ಷದ ಗಂಡು ಮಗು, ತೆಕ್ಕಲಕೋಟೆಯ 13ವರ್ಷದ ಬಾಲಕಿ, ಹಾಗಲೂರು ಹೊಸಳ್ಳಿ ಗ್ರಾಮದ 41ವರ್ಷದ ವ್ಯಕ್ತಿಗೆ ಸೊಂಕು ಧೃಡಪಟ್ಟಿದೆ. ತಾಲೂಕಿನ ತಾಳೂರು ಗ್ರಾಮದ 61ವರ್ಷದ ವ್ಯಕ್ತಿ ಬಳ್ಳಾರಿಯ ಫಿವರ್ ಕ್ಲಿನಿಕ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಟ್ಟು 6ಜನರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ, ಇದರೊಂದಿಗೆ ತಾಲೂಕಿನಲ್ಲಿ ಒಟ್ಟು ಸೊಂಕಿತರ ಸಂಖ್ಯೆ 51ಕ್ಕೆ ಏರಿಕೆ. ಈ ಪೈಕಿ ಗ್ರಾಮೀಣ ಭಾಗದ 3 ಹಾಗೂ ನಗರದ 4 ಜನರು ಗುಣಮುಖರಾಗಿ ವಾಪಾಸ್ ಆಗಮಿಸಿರುವುದು ಸಂತಸದ ಸಂಗತಿ. ಈ ಪೈಕಿ ಇಬ್ಬರು ಸಾವನ್ನಾಪ್ಪಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap