ತಾಲೂಕಿನಲ್ಲಿ ಒಂದೇ ದಿನ 6 ಜನರಿಗೆ ಕರೋನಾ ಸೋಂಕು ಧೃಡ. ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆ. ಮೂವರು ಗುಣಮುಖ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಮವಾರ ಒಂದೇ ದಿನ 6 ಪ್ರಕರಣಗಳು ಬೆಳಕಿಗೆ ಬಂದಿವೆ.
ನಗರದಲ್ಲಿ ಕ್ವಾರಂಟೈನ್‌ನಲ್ಲಿದ್ದ 46ವರ್ಷದ ಮಹಿಳೆ, ತಾಲೂಕಿನ ತೆಕ್ಕಲಕೋಟೆಯ 36ವರ್ಷದ ವ್ಯಕ್ತಿ ಮತ್ತು 13ವರ್ಷದ ಮಗ, ಹಾಗೂ ಹಾಗಲೂರು ಗ್ರಾಮದ 56ವರ್ಷದ ಮಹಿಳೆ ಹಾಗೂ ಉಪ್ಪಾರುಹೊಸಳ್ಳಿ ಸಿಂಡಿಕೆಟ್ ಬ್ಯಾಂಕ್ ವ್ಯವಸ್ಥಾಪಕನಿಗೂ ಕರೋನಾ ಕರೊನಾ ಸೋಂಕು ಇರುವುದು ದೃಢಪಟ್ಟಿರುವುದು ಜನರಲ್ಲಿ ಮತ್ತು ಗ್ರಾಹಕರಲ್ಲಿ ಆತಂಕ ಸೃಷ್ಠಿಸಿದೆ.
ಈ ಬಗ್ಗೆ ಮಾತನಾಡಿದ ತಹಸೀಲ್ದಾರ್ ಎಸ್.ಬಿ.ಕೂಡಲಗಿ, ನಗರ ಹಾಗೂ ತಾಲೂಕಿನಲ್ಲಿ ಸೋಮವಾರ ಬಂದ ವರದಿಯಲ್ಲಿನ ಸೋಂಕಿತರನ್ನು ಬಳ್ಳಾರಿಯ ಕೊವಿಡ್-19 ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚಿ ನಗರದ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗುವುದು. ಅಲ್ಲದೆ ಸೋಂಕಿತ ವ್ಯಕ್ತಿಗಳ ಮನೆಯ ಸುತ್ತಮುತ್ತ ಸೀಲ್‌ಡೌನ್ ಮತ್ತು ಬಫರ್‌ಜೋನ್ ಎಂದು ಗುರುತಿಸಿ ಬ್ಯಾರಿಕೇಡ್ ಹಾಕಲಾಗುವುದು ಎಂದು ತಹಸೀಲ್ದಾರ್ ಎಸ್.ಬಿ.ಕೂಡಲಗಿ ತಿಳಿಸಿದ್ದಾರೆ.
ಸ್ಥಳದಲ್ಲಿ ಟಿ.ಎಚ್.ಒ. ಸುರೇಶಗೌಡ, ಗ್ರೇಡ್-2ತಹಸೀಲ್ದಾರ್ ವಿಶ್ವನಾಥ, ಫೀವರ್‌ಕ್ಲೀನಿಕ್ ನೋಡಲ್ ಅಧಿಕಾರಿ ಡಾ.ಕೋಟ್ರೇಶ್.ಎಸ್.ಎಂ. ಹಿರಿಯ ಆರೋಗ್ಯ ಸಹಾಯಕ ಗಿರೀಶ ಹಾಗೂ ನಗರಸಭೆ ಮತ್ತು ಕಂದಾಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸಿಬ್ಬಂಧಿ, ಆಶಾ, ಅಂಗನವಾಡಿ ಕಾರ್ಯಕರ್ತರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap