ತಾಲೂಕಿನಲ್ಲಿ ಒಂದೇ ದಿನ 4 ಕರೋನಾ ಪ್ರಕರಣಗಳು ಪತ್ತೆ ಬಿಚ್ಚಿ ಬಿದ್ದ ಜನತೆ. ನಗರದಲ್ಲಿ 3 ಗ್ರಾಮೀಣ ಭಾಗದಲ್ಲಿ 1 ಪ್ರಕರಣ. ತಾಲೂಕಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10ಕ್ಕೆ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಆಗಾಗ್ಗೆ ಒಂದೇರೆಡು ಕರೋನಾ ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿದ್ದರೆ, ಶನಿವಾರ ಒಂದೇ ದಿನ ನಗರದ 11, 27, 7ನೇ ವಾರ್ಡ್ಗಳಲ್ಲಿ ತಲಾ ಒಂದು ಕರೋನಾ ಪ್ರಕರಣಗಳು ಧೃಡಪಡುವ ಮೂಲಕ ನಗರದ ಜನರನ್ನು ಬೆಚ್ಚಿ ಬಿಳಿಸುವಂತೆ ಮಾಡಿದ್ದರೆ, ಗ್ರಾಮೀಣ ಭಾಗಕ್ಕೂ ಕಾಲಿಟ್ಟ ಕರೋನಾ ತಾಲೂಕಿನ ಕೆ.ಬೆಳಗಲ್ಲು ಗ್ರಾಮದ ವ್ಯಕ್ತಿಯೊರ್ವನಿಗೆ ಸೋಂಕು ತಗಲುವ ಮೂಲಕ ಒಂದೇ ದಿನ 4 ಪ್ರಕರಣಗಳು ಪತ್ತೆಯಾಗಿವೆ.
ನಗರದ 11ನೇ ವಾರ್ಡ್ನ ನಿವಾಸಿ ಹಾಗೂ ಮೋಟರ್ ರೀಪೆರಿ ಮಾಡುವ 29 ವರ್ಷದ ವ್ಯಕ್ತಿಯೊರ್ವನಿಗೆ ಸೊಂಕು ಧೃಡಪಟ್ಟಿರುವುದು ಆತಂಕ ಮನೆ ಮಾಡಿದ ಸುದ್ದಿ ಹೊರ ಬರುತ್ತಿದ್ದಂತೆ, ತಾಲೂಕಿನ ಕೆ.ಬೆಳಗಲ್ಲು ಗ್ರಾಮದ 32 ವರ್ಷದ ವ್ಯಕ್ತಿಯೊರ್ವನಿಗೆ ಸೊಂಕು ಧೃಡಪಟ್ಟಿದೆ. ಈ ಇಬ್ಬರು ಸೊಂಕಿನ ಲಕ್ಷಣದಿಂದ ಮಂಗಳವಾರ ನಗರದ ಫೀವರ್ ಕ್ಲೀನಿಕ್‌ನಲ್ಲಿ ಗಂಟಲು ದ್ರವ ಪರೀಕ್ಷೆಗೆ ನೀಡಿದ್ದರು. ಶನಿವಾರ ಸೊಂಕು ಇರುವುದು ದೃಡಪಟ್ಟಿದೆ.
ಸಂಜೆಯಾಗುತ್ತಿದ್ದAತೆ ನಗರದ 27ನೇ ವಾರ್ಡ್ನಲ್ಲಿ 16 ವರ್ಷದ ಬಾಲಕಿಯೊಬ್ಬಳಿಗೆ ಕರೋನಾ ಧೃಡಪಟ್ಟಿದ್ದು ನೆರೆಯ ಅಂದ್ರದೊAದಿಗೆ ಸಂಪರ್ಕ ಇರಬಹುದು ಎನ್ನಲಾಗಿದೆ. ನಂತರ 7ನೇ ವಾರ್ಡ್ನ 25 ವರ್ಷದ ಯುವಕನೊರ್ವನಿಗೆ ಸೊಂಕು ಧೃಡಪಟ್ಟಿದ್ದು, ನಗರದ ಜನರನ್ನು ಮತ್ತೊಮ್ಮೆ ಬೆಚ್ಚಿಬಿಳುಸುವಂತೆ ಮಾಡಿದೆ.
ತಾಲೂಕಿನ ಮೊದಲ ಪ್ರಕರಣವಾಗಿದ್ದ ನಂಜನಗೂಡಿನ ನಂಜಿನಿAದ ಪ್ರಾರಂಭಗೊAಡ ತಾಲೂಕಿನ ಎಚ್.ಹೊಸಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡ ಪ್ರಕರಣ, ನಂತರ ತಾಲೂಕಿನ ಗೋಸಬಾಳು ಯುವತಿಯ ನಂತರ ತಣ್ಣಗೆ ಇದ್ದ ತಾಲೂಕು ಇದೀಗಾ ಗ್ರಾಮೀಣ ಭಾಗದಲ್ಲಿ ಒಂದು ಸೇರಿದಂತೆ ನಗರದಲ್ಲಿಯೇ 7 ಪ್ರಕರಣಗಳು ಬೆಳಕಿಗೆ ಬಂದಿರುವುದು ಆಘಾತ ಮೂಡಿಸಿದೆ.
ಇದರೊಂದಿಗೆ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ 10ಕ್ಕೆ ತಲುಪಿದ್ದು, ಈ ಪೈಕಿ ಮೂವರನ್ನು ಬಿಡುಗಡೆಯಾಗಿದ್ದು, 7 ಪ್ರಕರಣಗಳು ಸಕ್ರೀಯೆಯಾಗಿವೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap