ತಹಸೀಲ್ ಕಚೇರಿ ಸಿಬ್ಬಂದಿಗೆ ಆಯುಷ್ ಕಿಟ್ ವಿತರಣೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ : ಡಾ.ಗುರುಬಸವರಾಜ

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಮತ್ತು ಸೂಕ್ತ ಮುಂಜಾಗ್ರತೆ ಕ್ರಮಗಳಿಂದ ಕೊರೊನಾ ಹಿಮ್ಮೆಟ್ಟಿಸಬಹುದಾಗಿದೆ ಎಂದು ಆಯುಷ್ ಇಲಾಖೆ ಹಂಪಾಪಟ್ಟಣ ವೈದ್ಯಾಧಿಕಾರಿ ಡಾ.ಗುರುಬಸವರಾಜ ಅಭಿಪ್ರಾಯಪಟ್ಟರು.
ಪಟ್ಟಣದ ತಹಸೀಲ್ ಕಚೇರಿ ಸಿಬ್ಬಂAದಿಗೆ ಆಯುಷ್ ಇಲಾಖೆಯಿಂದ ಜೀವನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಆರೋಗ್ಯ ಕಿಟ್ ವಿತರಿಸಿ ಮಾತನಾಡಿದರು. ಆಯುರ್ವೇದ ಚಿಕಿತ್ಸೆ ವಿಧಾನದಿಂದ ಸಮುದಾಯದ ಜೀವನಿರೋಧಕ ಶಕ್ತಿ ಹೆಚ್ಚಿಸಬಹುದಾಗಿದೆ. ಇಲಾಖೆಯಿಂದ ಈಗಾಗಲೆ ಕೊರೊನಾ ವಾರಿರ‍್ಸ್ಗಳಿಗೆ ಆಯುಷ್ ಕಿಟ್ ವಿತರಿಸಲಾಗಿದೆ. ಇಲಾಖೆಯಲ್ಲಿನ 116 ಸಿಬ್ಬಂದಿ ಪೈಕಿ 20 ಜನರಿಗೆ ಸಾಂಕೇತಿಕವಾಗಿ ವಿತರಿಸಲಾಗಿದೆ. ಆಯುರ್ವೇದ ಔಷಧಗಳಾದ ಸಂಶಮನ ವಟಿ, ಹೋಮಿಯೋಪತಿ ಔಷಧಿ ಆರ್ಸೆನಿಕ್ ಆಲ್ಬಂ, ಯುನಾನಿ ಔಷಧಿ, ಅರಕ್ ಅಜೀಬ್ ಔಷಧಿಗಳು ಆರೋಗ್ಯ ಕಿಟ್‌ನಲ್ಲಿವೆ. ಕೊರೊನಾ ವಿರುದ್ಧ ಜೀವದ ಹಂಗು ತೊರೆದು ಸೇವೆಯಲ್ಲಿ ತೊಡಗಿಸಿಕೊಳ್ಳುವ ಆಶಾ ಕಾರ್ಯಕರ್ತೆಯರು ಸೇರಿ ಹಲವರಿಗೆ ಔಷಧಿ ವಿತರಿಸಲಾಗಿದೆ ಎಂದರು.
ತಹಸೀಲ್ದಾರ್ ಆಶಪ್ಪ ಪೂಜಾರ್ ಮಾತನಾಡಿ, ಆಯುರ್ವೇದ ಪದ್ಧತಿ ಪರಿಣಾಮಕಾರಿಯಾಗಿದೆ. ಗಿಡಮೂಲಿಕೆಗಳಿಂದ ಸಿದ್ಧಪಡಿಸಲಾದ ಔಷಧಿಗಳ ಸೇವನೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ಆಯುಷ್ ಇಲಾಖೆ ಉತ್ತಮ ಕಾರ್ಯದಲ್ಲಿ ತೊಡಗಿದೆ ಎಂದರು. ತಾ.ಪಂ.ಇಒ ಹಾಲಸಿದ್ದಪ್ಪ ಪೂಜೆರಿ, ಆಯುಷ್ ವೈದ್ಯಾಧಿಕಾರಿಗಳಾದ ಡಾ.ಭೀಮನಗೌಡ, ಡಾ.ಹಾಲಮ್ಮ, ಡಾ.ಉಮಾಪಾಟೀಲ್, ಉಪತಹಸೀಲ್ದಾರ್ ಶಿವಕುಮಾರಗೌಡ, ಸಿಬ್ಬಂದಿ ಮಂಜುನಾಥ, ಕಡಲಬಾಳು ಗೋಪಾಲಶೆಟ್ಟಿ ಇತರರಿದ್ದರು.

1 thought on “ತಹಸೀಲ್ ಕಚೇರಿ ಸಿಬ್ಬಂದಿಗೆ ಆಯುಷ್ ಕಿಟ್ ವಿತರಣೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ : ಡಾ.ಗುರುಬಸವರಾಜ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap