ತಂತ್ರಜ್ಞರ ಹುದ್ದೆಗೆ ಅರ್ಜಿ ಆಹ್ವಾನ
ರಾಯಚೂರು: ರಾಷ್ಟಿçಯ ಆರೋಗ್ಯ ಅಭಿಯಾನದಡಿ ಕ್ಷಯ ರೋಗ ನಿರ್ಮೂಲನೆ (ಎನ್ಟಿಇಪಿ) ಕಾರ್ಯಕ್ರಮದಡಿ 2020-21ನೇ ಸಾಲಿಗೆ ಗುತ್ತಿಗೆ ಆಧಾರದ ಮೇಲೆ ಪ್ರಯೋಗಶಾಲ ತಂತ್ರಜ್ಞರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ವ-ಹಸ್ತಾಕ್ಷರದಿಂದ ಭರ್ತಿ ಮಾಡಿದ ಅರ್ಜಿಯನ್ನು ಹುದ್ದೆಗೆ ಸಂಬAಧಿಸಿ ಎಲ್ಲ ದೃಢೀಕೃತ ದಾಖಲಾತಿಗಳು ಹಾಗೂ ಭಾವಚಿತ್ರದೊಂದಿಗೆ ಸೆ.30ರೊಗೆ ಜಿಲ್ಲಾ ಕ್ಷಯ ರೋಗ ನಿರ್ಮೂಲನೆ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಕ್ಷಯ ರೋಗ ವಿಭಾಗಕ್ಕೆ ಸಲ್ಲಿಸಬೇಕು ಹಾಗೂ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಆನ್ಲೈನ್ ಮೂಲಕ ಜಣoಞಚಿಡಿಛಿಡಿ@ಡಿಟಿಣಛಿಠಿ.oಡಿg ಗೆ ಸಲ್ಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.