ಡೊನೇಶನ್ ಹಾವಳಿ ನಿಯಂತ್ರಣಕ್ಕೆ ಮನವಿ

ಸಿರಿನಾಡ ಸುದ್ದಿ, ಕೊಟ್ಟೂರು: ತಾಲೂಕಿನ ಎಐಎಸ್‌ಎಫ್ ಪದಾಧಿಕಾರಿಗಳು, ಖಾಸಗಿ ಶಾಲೆಗಳ ಡೊನೇಶನ್ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿದರು.
ಡೊನೇಶನ್ ಕಡಿವಾಣಕ್ಕೆ ಹಿಂದಿನಿAದಲೂ ಮನಲಿ ಸಲ್ಲಿಸುತ್ತಿದ್ದರೂ ಪ್ರಯೋಜವಾಗಿಲ್ಲ. ಕೊರೊನಾ ವೈರಸ್ ಹಾವಳಿ ಇದ್ದರೂ ಅದನ್ನು ಲೆಕ್ಕಿಸದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಶನ್‌ಗೆ ದಂಬಾಲು ಬಿದ್ದಿವೆ. ಇದು ಬಡ ಹಾಗೂ ಮಧ್ಯಮ ವರ್ಗದವರ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ತಾಲೂಕಿನ ಎಲ್ಲ ಶಾಲೆ, ಪಿಯು ಕಾಲೇಜುಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕು. ಸರಕಾರದ ನಿಯಮ ಉಲ್ಲಂಘಿಸಿ ಡೊನೇಶನ್ ವಸೂಲಿ ಮಾಡುತ್ತಿರುವ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಾಲೂಕಿನ ಎಲ್ಲ ಶಿಕ್ಷಣ ಸಂಸ್ಥೆಗಳ, ಪೋಷಕರ ಮತ್ತು ವಿದ್ಯಾರ್ಥಿ ಮತ್ತು ಸಂಘಟಕರ ಸಭೆಯನ್ನು ಕರೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಐಎಸ್‌ಎಫ್ ರಾಜ್ಯ ಸಹ ಕಾರ್ಯದರ್ಶಿ ಕೊಟ್ರೇಶ್ ಮುಂಡ್ರಗಿ ಹಿರೇಮಠ, ತಾಲೂಕು ಮುಖಂಡರಾದ ನಾಗರಾಜ, ಅನಿತಾ, ಶಿವಶಂಕರಗೌಡ, ಜಿ.ರಾಜ, ಶ್ವೇತ, ಲಕ್ಷಿö್ಮÃ, ಕನಕ ಸೇರಿ ಅನೇಕರಿದ್ದರು. ಸಂಘಟಕರು ಸಲ್ಲಿಸಿದ ಮನವಿ ಪತ್ರವನ್ನು ತಹಸೀಲ್ದಾರ ಅನಿಲ್‌ಕುಮಾರ್ ಜಿ. ಸ್ವೀಕರಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap