ಟಿಎಚ್‌ಒ ಡಾ.ಸುಲೋಚನಾಗೆ ಬೀಳ್ಕೊಡುಗೆ. ವೈದ್ಯರಾಗಿ ಕರ್ತವ್ಯನಿರ್ವಹಣೆ ತೃಪ್ತಿ ಇದೆ : ಡಾ.ಸುಲೋಚನಾ

????????????????????????????????????

ಸಿರಿನಾಡ ಸುದ್ದಿ ಹಗರಿಬೊಮ್ಮನಹಳ್ಳಿ: ಕಳೆದ ಹಲವು ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಟಿಎಚ್‌ಒ, ಸಿಎಂಒ ಮತ್ತು ವೈದ್ಯಾಧಿಕಾರಿಯಾಗಿ ಸಲ್ಲಿಸಿದ ಸೇವೆ ಕುರಿತಂತೆ ಆತ್ಮತೃಪ್ತಿ ಇದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸುಲೋಚನಾ ತಿಳಿಸಿದರು.
ಪಟ್ಟಣದ ವಾಸವಿಕಲ್ಯಾಣಮಂಟಪದಲ್ಲಿ ನಡೆದ ತ್ರೆöÊಮಾಸಿಕ ಕೆಡಿಪಿ ಸಭೆಯಲ್ಲಿ ನಿವೃತ್ತಿ ಹಿನ್ನೆಲೆಯಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದರು. ಸರಕಾರಿ ಸೇವೆಯಲ್ಲಿರುವವರು ಸುಗಮವಾಗಿ ನಿವೃತ್ತರಾಗುವುದೇ ವಿರಳ. ಈ ಹಿನ್ನೆಲೆಯಲ್ಲಿ ರೋಗಿಗಳ ಸೇವೆ ಮಾಡುವ ಭಾಗ್ಯ ಒದಗಿರುವುದು ಸಂತಸದಾಯಕವಾಗಿದೆ. ಆಸ್ಪತ್ರೆ ಮೇಲ್ದರ್ಜೆ, ಉತ್ತಮ ಆಸ್ಪತ್ರೆ ಗೌರವಕ್ಕೆ ಜನಪ್ರತಿನಿಧಿಗಳು ಮತ್ತು ಇಲಾಖೆ ಸಹೊದ್ಯೋಗಿಗಳ ಸಹಕಾರ ಕಾರಣವಾಗಿದೆ. ವೈದ್ಯಾಧಿಕಾರಿಗಳ ಕೊರತೆ ನಿವಾರಣೆ, ತುರ್ತುವಾಹನಗಳ ಸೌಲಭ್ಯ ಕಲ್ಪಿಸುವಲ್ಲಿ ಶಾಸಕರ ಸಹಕಾರ ಪೂರಕವಾಗಿದೆ ಎಂದರು.
ಶಾಸಕ ಎಸ್.ಭೀಮನಾಯ್ಕ ಸನ್ಮಾನಿಸಿ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬ ಉಕ್ತಿ ಕೊರೊನಾ ವೇಳೆಯಲ್ಲಿ ವೈದ್ಯರ ಸೇವೆಯಿಂದ ನಿಜವಾಗಿದೆ. ವೈದ್ಯರು ಹಲವು ಸವಾಲುಗಳ ನಡುವೆಯೂ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಡೈಯಲೈಸಿಸ್, ಐಸಿಯು ಮತ್ತು ಆಸ್ಪತ್ರೆ ಮೇಲ್ದರ್ಜೆಗೆ ಈ ಹಿಂದಿನ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಅನುದಾನ ಒದಗಿದೆ ಎಂದರು.

ತಹಸೀಲ್ದಾರ್ ಆಶಪ್ಪ ಪೂಜಾರ್, ತಾ.ಪಂ.ಇಒ ಹಾಲಸಿದ್ದಪ್ಪ, ತಾ.ಪಂ.ಉಪಾಧ್ಯಕ್ಷೆ ಬಿಕ್ಯಾಮುನಿಬಾಯಿ, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಬುಡ್ಡಿಬಸವರಾಜ, ಸಿಪಿಐ ಎಂ.ಎ0.ಡಪ್ಪಿನ್ ಇದ್ದರು. ತಾ.ಪಂ.ವ್ಯವಸ್ಥಾಪಕ ಮಲ್ಲನಗೌಡ ಸ್ವಾಗತಿಸಿದರು, ತಾಲೂಕು ಯೋಜನಾಧಿಕಾರಿ ಉಮೇಶ್‌ಗೌಡ ನಿರೂಪಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap