ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎನ್.ಕೇಶವರೆಡ್ಡಿ ಅಧಿಕಾರ ಸ್ವೀಕಾರ

ಸಿರಿನಾಡ ಸುದ್ದಿ, ರಾಯಚೂರು: ರಾಯಚೂರು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಚಂದ್ರಬ0ಡಾ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಕೇಶವರೆಡ್ಡಿ ಅಧಿಕಾರ ಸ್ವೀಕರಿಸಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮೀಸಲಿಟ್ಟಿರುವ ಕೊಣಿಯಲ್ಲಿ ನಡೆದ ಅಧಿಕಾರ ಸಮಾರಭಂದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆದಿಮನಿ ವೀರಲಕ್ಷಿö್ಮ, ಮಾಜಿ ಶಾಸಕರಾದ ಎ.ಪಾಪಾರೆಡ್ಡಿ, ಎನ್.ಶಂಕ್ರಪ್ಪ, ಆರ್.ಡಿ.ಎ ಮಾಜಿ ಅಧ್ಯಕ್ಷ ರಾಜಕುಮಾರ್, ಎಪಿಎಂಸಿ ನಿರ್ದೇಶಕ ಜಗದೀಶ ವಕೀಲ, ಮುಖಂಡರಾದ ಪರಮೇಶಪ್ಪ, ಯು.ರಾಘವೇಂದ್ರ, ಶ್ರೀನಿವಾಸರೆಡ್ಡಿ, ನರಸಿಂಹನಾಯಕ, ಜಿ.ಭೀಮಣ್ಣ, ಕೆ.ರವಿ, ಮುನಿಯಪ್ಪ ತಾತಾ, ಎಸ್.ಸುದರ್ಶನರೆಡ್ಡಿ ಇತರರು ಉಪಸ್ಥಿತರಿದ್ದರು.