ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದಾಗಿ 80.79 ಕೋಟಿ ರೂ ನಷ್ಟ

ಸಿರಿನಾಡ ಸುದ್ದಿ, ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಬಾರಿ ಮಳೆಯಿಂದ ಹಾಗೂ ಮಹಾರಾಷ್ಟç, ನಾರಾಯಣಪೂರು ಜಲಾಶಯ ಪ್ರವಾಹದಿಂದಾಗಿ ಬೆಳೆ, ಮನೆ, ರಸ್ತೆ ಸೇರಿದಂತೆ ಒಟ್ಟು 80.79 ಕೋಟಿ ರೂಗಳು ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ 745.89 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿ, 90.95 ಲಕ್ಷ ರೂಗಳು ನಷ್ಡವಾಗಿದೆ. ತೋಟಗಾರಿಕೆ ಬೆಳೆ 325 ಹೆಕ್ಟರ್ ಬೆಳೆ ಹಾನಿಯಾಗಿ 39.16 ಲಕ್ಷ ರೂಗಳು ನಷ್ಟ, ಮಳೆಯಿಂದಾಗಿ 252 ಪ್ರಮಾಣ ಹಾನಿಯಾಗಿ 1.30 ಕೋಟಿ ರೂಗಳು ನಷ್ಟ, ರಾಜ್ಯ ಮತ್ತು ಜಿಲ್ಲಾ ಪ್ರಮುಖ ರಸ್ತೆಗಳು 923 ಕಿ.ಮೀ ಹಾನಿಯಾಗಿ 33.95 ಕೋಟಿ ರೂಗಳು ನಷ್ಟ, ಗ್ರಾಮಗಳ ರಸ್ತೆ 270 ಕಿ.ಮೀ ಹಾನಿಯಾಗಿ 5.71 ಕೋಟಿ ರೂಗಳು ನಷ್ಟ, ನಗರ, ಪಟ್ಟಣಗಳ ರಸ್ತೆ 269 ಕಿ.ಮೀ ಹಾನಿಯಾಗಿ, 27.89 ಕೋಟಿ ರೂಗಳು ನಷ್ಟವಾಗಿದೆ. ಸೇತುವೆಗಳು 80 ಹಾನಿಯಾಗಿ 6.90 ಕೋಟಿ ರೂಗಳಿ ನಷ್ಟವಾಗಿದೆ. ಕುಡಿಯುವ ನೀರಿನ ಕಾಮಗಾರಿಗಳು 41 ಹಾನಿಯಾಗಿ 2.27 ಕೋಟಿ ರೂಗಳು ನಷ್ಟ ಹಾಗೂ ಬೃಹತ್ ನೀರಾವರಿ ಯೋಜನೆಗಳು 11 ಹಾನಿಯಾಗಿ 1.46 ಕೋಟಿ ರೂಗಳು ನಷ್ಟವಾಗಿದೆಂದು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap