ಜಿಲ್ಲಾದ್ಯಕ್ಷ ವಿಎಸ್.ಶಿವಶಂಕರ್ :ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ/ ಇತರೆ ಕೇಂದ್ರ ಸರ್ಕಾರದ ಕ್ರಮವನ್ನು ವಿರೋದಿಸಿ ಮನವಿ

ಸಿರಿನಾಡ ಸುದ್ದಿ, ಕುರುಗೋಡು: ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋದಿಸಿ ವಿವಿಧ ಕಾರ್ಮಿಕ ಸಂಘಟನೆಗಳ ಬೆಂಬಲದೊ0ದಿದೆ ಸಮೀಪದ ಎಮ್ಮಿಗನೂರಿನ ಗ್ರಾಪಂ ಕಛೇರಿ ಮುಂದೆ ಸೋಮವಾರ ಮನವಿ ಪತ್ರವನ್ನು ಗ್ರಾಪಂ ಬಿಲ್ಲ ಕಲೆಟ್ಟರ್ ಸಾಯಿಬಣ್ಣ ಮನವಿಯನ್ನು ಪ್ರಾಂತ ರೈತಸಂಘದ ಜಿಲ್ಲಾದ್ಯಕ್ಷ ವಿಎಸ್.ಶಿವಶಂಕರ್ ನೀಡಿದರು
ನಂತರ ಮಾತನಾಡಿ, “ಉಳುವನೇ ಹೊಲದೊಡಯ” ಎಂಬ ಘೋಷಣೆಯನ್ನು ಗಾಳಿಗೆ ತೂರಿ ಉಳ್ಳವನೇ ಹೊಲದೊಡೆಯ ಎಂಬ ಸಿದ್ದಾಂತವನ್ನು ಜಾರಿಗೆ ತರಲು ಬಲಾಢ್ಯರು, ಕಾರ್ಪೋರೇಟ್ ಕಂಪೆನಿಗಳು ಮಿತಿಇಲ್ಲದೇ ರೈತರ ಭೂಮಿಯನ್ನು ಖರೀದಿ ಮಾಡಲು ಅವಕಾಶ ನೀಡುವ ಪ್ರತಿಗಾಮಿ ಭೂ ಸುಸಾರಣೆ ಕಾಯ್ದೆ ತಿದ್ದುಪಡಿ ವಿಚಾರವನ್ನು ಕೈಬೀಡಬೇಕು.ಕೇಂದ್ರ ಸರಕಾರಜಾರಿಗೆ ತಂದಿರುವ ಅಕ್ರಮ ದಾಸ್ತಾನುಗಾರರರಿಗೆ ವಾಪಸ್ ಪೆಡಯುವಂತೆ ಹಾಗೂ ಬೀಜೋದ್ದಿಮೆಯನ್ನು ಕಂಪೆನಿಗಳಿಗೆ ಒಪ್ಪಿಸುವ ಉದ್ದೇಶದಿಂದ ತರಲಾದ ಬೀಜ ಕಾಯ್ದೆ 2010 ನ್ನು ಇತರೆ ಹಿಂಪಡೆಯಬೇಕು ಎಂದರು
ವಿದ್ಯುಚ್ಚಕ್ತಿ ತಿದ್ದುಪಡಿ ಮಸೂದೆ-2020ನ್ನು ರಾಜ್ಯದಲ್ಲಿ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು. ಒಂದುವೇಳೆ ಜಾರಿಯಾದರೆ ಭಾಗ್ಯಜ್ಯೋತಿ, ಕುಟೀರಜ್ಯೋತಿ, ವಿದ್ಯುತ್ ಉತ್ಪಾದನೆ ಸರಬರಾಜು ಲಕ್ಷಾಂತರ ಕೋಟಿ ಆಸ್ತಿ-ಪಾಸ್ತಿಗಳು ಖಾಸಗೀ ಲೂಟಿಕೋರರ ಕಾರ್ಪೋರೇಟರ್ ಕಂಪನಿಗಳ ಕೈವಶವಾಗಲಿವೆ ಎಂದು ಆರೋಪಿಸಿದರು. ಅಲ್ಲದೆ ಪಂಪಸೆಟ್‌ರೈತರಿಗೆ, ಜೆಸ್ಕಾಂ ನೌಕರರಿಗೆ ಬಾರೀಪೆಟ್ಟುಬಿದ್ದಂತಾಗುತ್ತಿದೆ ಎಂದರು.
ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವುದುರಿಂದ ವಿದ್ಯುತ್ ಕ್ಷೇತ್ರದಲ್ಲಿ ಕೆಲಸಮಾಡುವ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗುತ್ತಿದೆ. ಆದ್ದರಿಂದ ಹಳೇ ಪಿಂಚಣಿಯೋಜನೆಯನ್ನು ಜಾರಿಗೊಳಿಸಬೇಕು. ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರದ ಕ್ರಮ ಸರಿಯಲ್ಲ. ಇದನ್ನು ಕೂಡಲೇ ಕೈಬಿಟ್ಟು ಕಾರ್ಮಿಕರಿಗೆ ಆಸರೆಯಾಗಬೇಕೆಂದು ಒತ್ತಾಯಿಸಿದರು.
ಹಾಗೂ ರ‍್ವಾವಿ. ನೆಲ್ಲುಡಿ. ವೀರಾಪುರ,ಕಲ್ಲಕಂಭ ಗ್ರಾಪಂ ವಿವಿಧ ಕಡೆ ಸಂಘದ ಪದಾಧಿಕಾರಿಗಳು ಮನವಿಸಲ್ಲಿಸಲಾಗಿತು
ಈ ವೇಳೆ ಸಂಘದ ಪದಾಧಿಕಾರಿಗಳಾದ ನಾಗರಾಜ,ಎನ್.ಹುಲಿಯಪ್ಪ, ರೈತರಾದ ಚನ್ನವೀರಪ್ಪ,ರಾಮಾಂಜಿನಿ, ಮುರುಂಡೆ ಜಡೇಪ್ಪ, ಹಂಪಿ ಪ್ರಧೀಪ್ ಕುಮಾರ್, ಜಯಪ್ರಕಾಸ್, ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap