ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ನನಸಾಗದ ತಾಲ್ಲೂಕು ರಚನೆ ಕನಸು.

ವರದಿ: ಲಲಿತ ಸಾಲಿಮಠ ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಜನರು ಹಲವು ಬಾರಿ ಮನವಿ ಮಾಡಿದ್ಧಾರೆ. ಇನ್ನೂ ಮಾಡುತ್ತಿದ್ಧಾರೆ. ಆದರೆ ಸರ್ಕಾರ ಮಾತ್ರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ…….
ಲಿಂಗಸುಗೂರು ತಾಲ್ಲೂಕಿನಲ್ಲಿಯೇ ಮುದಗಲ್ ದೊಡ್ಡ ಹೋಬಳಿ ಕೇಂದ್ರ. ತಾಲ್ಲೂಕು ಕೇಂದ್ರದ ಎಲ್ಲ ಅರ್ಹತೆಗಳೂ ಇದಕ್ಕಿವೆ. ಈ ಹಿಂದೆಯೂ ಹೋರಾಟ ನಡೆದಿದೆ. ಆದರೂ ಯಾವ ಸರ್ಕಾರಗಳಿಂದಲೂ ಜನರ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿಲ್ಲ. ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಪರಿಶೀಲನೆ ಹಂತದಲ್ಲಿ ಅದನ್ನು ಕೈಬಿಡಲಾಯಿತು…..
ಮುದಗಲ್, ಲಿಂಗಸುಗೂರಿನಿ0ದ 20 ಹಾಗೂ ಮಸ್ಕಿಯಿಂದ 27 ಕಿ.ಮೀ ದೂರದಲ್ಲಿದೆ. ಶೈಕ್ಷಣಿಕ, ಆರ್ಥಿಕ ಹಾಗೂ ಭೌಗೋಳಿಕವಾಗಿ ಸಾಕಷ್ಟು ವಿಶಾಲವಾಗಿದೆ. ಆದರೂ ಚುನಾಯಿತ ಜನಪ್ರತಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ತಾಲ್ಲೂಕು ಕೇಂದ್ರವಾಗದೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತ ಬಂದಿದೆ ಎನ್ನುತ್ತಾರೆ ಜನ.
ವಾಸುದೇವರಾಜ್, ಹುಂಡೇಕಾರ್ ಹಾಗೂ ಗೌದ್ದಿಗೌಡ ಅವರ ತಾಲ್ಲೂಕು ರಚನಾ ಸಮಿತಿಯು ಮುದಗಲ್ ತಾಲ್ಲೂಕು ಕೇಂದ್ರವಾಗಲು ಅರ್ಹವಾಗಿದೆ ಎಂದು ಹೇಳಿದೆ. ಜತೆಗೆ ಮಾಜಿ ಶಾಸಕ ದಿವಂಗತ ಎಂ.ಗ0ಗಣ್ಣ ಮುದಗಲ್ ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡಬೇಕು ಎಂಬುವ ಕನಸು ಹೊತ್ತು 10 ವರ್ಷ ಹೋರಾಟ ಮಾಡಿದ್ದರು. ಅವರ ಕನಸು ನನಸಾಗಲಿಲ್ಲ. ಪಟ್ಟಣದ ಜನತೆ ಎರಡು ದಶಕಗಳಿಂದ ಮುದಗಲ್ ಪಟ್ಟಣವನ್ನು ಬಂದ್ ಮಾಡಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತ ಬಂದಿದ್ದಾರೆ.
ಸಂಬ0ಧಿಸಿದ ಸಚಿವರು ಮುದಗಲ್ ಅನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ಆಶ್ವಾಸನೆ ನೀಡುತ್ತ ಬಂದಿದ್ದಾರೆ. ಅದು ಜಾರಿಗೆ ಬರುತ್ತಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.
ಇದೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮತ್ತು ದಲಿತ ಪ್ಯಾಂಥರ್ ಘಟಕ ಅಧ್ಯಕ್ಷ ಕೃಷ್ಣ ಚಲುವಾದಿ ಹೋರಾಟದ ಬಗ್ಗೆ ಮಾಹಿತಿ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap