ಜನಪರ ಕಾರ್ಯಗಳನ್ನು ಮಾಡುವ ಪಕ್ಷ ಕಾಂಗ್ರೆಸ್, ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿಜ್ಞಾವಿಧಿ ಕಾರ್ಯಕ್ರಮ ಯಶಸ್ವಿಗೊಳಿಸೋಣ.

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಿರಿನಾಡ ಸುದ್ದಿ, ಕುರುಗೋಡು: ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರ ಪ್ರತಿಜ್ಞಾ ದಿನದ ಅಂಗವಾಗಿ ಕಂಪ್ಲಿ ಕ್ಷೇತ್ರದ ಶಾಸಕ ಜೆಎನ್.ಗಣೇಶ್ ಪಟ್ಟಣದ ವಿದ್ಯಾ ವಸತಿ ಶಾಲೆಯ ಪ್ರಾಂಗಣದಲ್ಲಿ ಕಾರ್ಯಕರ್ತರೊಂದಿಗೆ ಮಂಗಳವಾರ ಪೂರ್ವಭಾವಿ ಸಭೆ ನಡೆಸಿದರು.
ಸಭೆಯಲ್ಲಿ ಕಂಪ್ಲಿ ಕ್ಷೇತ್ರದ ಶಾಸಕ ಜೆಎನ್.ಗಣೇಶ್ ಮಾತನಾಡಿ, ಜುಲೈ 2 ರಂದು ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಡಿಕೆ.ಶಿವಕುಮಾರ ಅಧಿಕಾರ ಪ್ರತಿಜ್ಞಾ ದಿನದಂದು ಕೊರೋನಾ ವೈರಸ್ ಬೀತಿ ಇರುವದರಿಂದ ಸ್ಥಳಿಯದಲ್ಲೇ ಇದ್ದು ಎಲ್ಲಾ ಕಾರ್ಯಕರ್ತರು ಪರದೆ ಮೇಲೆ ವೀಕ್ಷಣೆಗೆ ಸಲಹೆ ಸೂಚನೆಗಳನ್ನು ನೀಡಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಪ್ರತಿಯೊಬ್ಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಂದಾಗಬೇಕು ಎಂದು ತಿಳಿಸಿದರು.
ಬಹಳ ವರ್ಷ ಕಾಂಗ್ರೆಸ್ ಪಕ್ಷ ಅಡಳಿತದಲ್ಲಿತ್ತು. ರಾಜ್ಯದ ಅಭಿವೃದ್ಧಿಗಾಗಿ ಪ್ರತಿಯೊಬ್ಬ ಹಿರಿಯ ಧುರಿಣರು ನಾನಾ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸುಳ್ಳು ಭರವಸೆ ನೀಡಿ ಅಧಿಕಾರ ಸ್ವೀಕಾರ ಮಾಡುವ ಪಕ್ಷ ಕಾಂಗ್ರೆಸ್ ಅಲ್ಲ ಎಂದಿಗೂ ಜನಪರ ಕಾರ್ಯಗಳನ್ನು ಮಾಡುವ ಪಕ್ಷ ಕಾಂಗ್ರೆಸ್. ಆಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಒಗ್ಗಟ್ಟಿನಿಂದ ಕೈಜೋಡಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಇನ್ನೂ ಹೆಚ್ಚಿನ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದರು.
ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ದೇಶದ ಅಭಿವೃದ್ಧಿ ಕಾಣಲು ಸಾಧ್ಯ, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಮುಖ್ಯವಲ್ಲ ಮಾನವೀಯತೆ ಹಾಗೂ ಜನಪರ ಅಭಿವೃದ್ಧಿ ಕಾರ್ಯಗಳ ಮುಖ್ಯ ಆಗಾಗಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವಂತೆ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯಬೇಕು ಎಂದರು.
ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಜೆ.ದೊಡ್ಡಬಸಪ್ಪ, ಡಿ.ನಾಗೇಶ್ವರರಾವ್, ಖಾಸಿಂ ಸಾಬ್, ಹೊನ್ನೂರು ಸಾಬ್, ವದ್ದಟ್ಟಿ ಸುಧಕಾರಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಹಮ್ಮದ್ ಗೌಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಂಗಿಮಲ್ಲಯ್ಯ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಗಾದಿಲಿಂಗಪ್ಪ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಹುಲಗಪ್ಪ, ಪುರಸಭೆ ಸದಸ್ಯರಾದ ಮಹೇಶ್, ಸುಂಕಪ್ಪ, ಕೆ.ಪಂಪಣ್ಣ, ಚೆನ್ನನಗೌಡ, ವಿಎಸ್.ಚಕ್ರವರ್ತಿ, ಪಟ್ಟಣದ 23 ವಾರ್ಡಿನ ಕಾಂಗ್ರಸ್ ಕಾರ್ಯಕರ್ತರು ಹಾಗೂ ಇನ್ನಿತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap