ಗ್ರಾಮೀಣ ಭಾಗವನ್ನು ಬೆಂಬಿಡದೆ ಕಾಡುತ್ತಿರುವ ಕರೋನ ಅಟ್ಟಹಾಸ. ಇಂದು 3 ಹೊಸ ಪ್ರಕರಣಗಳು ಪತ್ತೆ.

ಸಿರಿನಾಡ ಸುದ್ದಿ ಸಿರುಗುಪ್ಪ : ತಾಲ್ಲೂಕಿನಲ್ಲಿ ಕರೋನ ಅಟ್ಟಹಾಸ ಮುಂದುವರಿದಿದ್ದು ಗ್ರಾಮೀಣ ಭಾಗದಲ್ಲಿ ಪತ್ತೆಯಾಗುತ್ತಿರುವುದು ಗ್ರಾಮೀಣ ಭಾಗದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅದರಲ್ಲಿಯೂ ವಿಶೇಷವಾಗಿ ಚಿಕ್ಕ ಚಿಕ್ಕ ಮಕ್ಕಳಿಗೆ ಕರೋನ ಕಣಿಸಿಕೊಳ್ಳುತ್ತಿರುವುದು ಪೋಷಕರಿಗೆ ನುಂಗಲಾರದ ತುತ್ತಾಗಿದೆ.
ಶುಕ್ರವಾರ ಬಂದ ವರದಿಯಲ್ಲಿ ಗ್ರಾಮೀಣ ಭಾಗದ ತಾಲ್ಲೂಕಿನ ರಾರಾವಿ ಗ್ರಾಮದ 24 ವರ್ಷದ ವ್ಯಕ್ತಿಯೋರ್ವ ಸೋಂಕಿನ ಲಕ್ಷಣಗಳ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾನೆ ನಂತರ ಆತನ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ ಇಂದು ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಐದು ದಿವಸಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿಯೇ ಇದ್ದ ಈ ವ್ಯಕ್ತಿಯಿಂದ ಎಷ್ಟು ಜನರಿಗೆ ಹಬ್ಬಿರಬಹುದು ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.
ಮತ್ತೊಂದು ಪ್ರಕರಣದಲ್ಲಿ ಆಗಸನೂರಿನ 6 ವರ್ಷದ ಮಗುವೊಂದಕ್ಕೆ ಸೋಂಕು ದೃಢಪಟ್ಟಿದ್ದು. ತೆಕ್ಕಲಕೋಟೆಯ 54 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಇಂದು ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು ತಾಲ್ಲೂಕಿನಲ್ಲಿ ಒಟ್ಟು ಸೋಂಕಿತ ಸಂಖ್ಯೆ 54 ಏರಿದೆ ಈ ಪೈಕಿ 7 ಜನರು ಗುಣಮುಖರಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.
ಇಲ್ಲಿಯವರೆಗೆ ತಾಲ್ಲೂಕಿನ ಎಚ್ ಹೊಸಹಳ್ಳಿ ಗೋಸಬಾಳು. ಕೆ. ಬೆಳಗಲ್ ಗ್ರಾಮಗಳಲ್ಲಿ ವ್ಯಕ್ತಿಗಳಿಗೆ ತಗುಲಿದ ಸಾಕು ಗುಣಮುಖರಾಗುವ ಮುನ್ನವೇ ಕರೋನಾ ವೈರಸ್ ಗುರುವಾರದಿಂದ ಹೆಚ್ ಹೊಸಳ್ಳಿ. ದೇವಲಾಪುರ ಅಗಸನೂರು. ರಾರಾವಿ. ಕೆಂಚನಗುಡ್ಡ ತಾಂಡಾ. ಹಚ್ಚೊಳ್ಳಿ. ತಾಳೂರು. ಹೇರಕಲ್ಲು. ತೊಂಡೆಹಾಳು ಮೈಲಾಪುರ ಹಾಗೂ ತೆಕ್ಕಲಕೋಟೆ ಪಟ್ಟಣ ಸೇರಿದಂತೆ ಇತರೆ ಗ್ರಾಮಗಳಿಗೂ ಹಬ್ಬುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಮನೆ ಮಾಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap