ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಳಗೊಳ್ಳುತ್ತಿರುವ ಕರೋನಾ ಜನರಲ್ಲಿ ಮತ್ತಷ್ಠು ಆತಂಕ.

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಕರೋನಾ ತನ್ನ ಪ್ರಭಾವವನ್ನು ಕೊಂಚ ಕಡಿಮೆಗೊಂಡಿರುವುದು ಒಂದು ಕಡೆ ಸಮಾಧನ ಸಂಗತಿಯಾದರೆ ಮತ್ತೊಂದಡೆ ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಗೊಳ್ಳುತ್ತಿರುವುದು ಗ್ರಾಮೀಣ ಜನರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ತಾಲೂಕಿನಲ್ಲಿ ಕರೋನಾ ಕಳೆದ ಎರೆಡು ಮೂರು ದಿನಗಳಿಂದ ತನ್ನ ಪ್ರಭಾವ ಕಡಿಮೆಗೊಳಿಸಿದ್ದು ನಿತ್ಯವೂ ಕೇವಲ ಪತ್ತೆಯಾಗುತ್ತಿದ್ದ 50 ಪ್ರಕರಣಗಳ ಪೈಕಿ ಇದೀಗಾ ಕೇವಲ 20-30 ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿರುವುದು ಜನರಲ್ಲಿ ಕೊಂಚ ಸಮಾಧನ ಮೂಡಿಸಿದೆ.
ಮಂಗಳವಾರದ ವರದಿಯಲ್ಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ 12 ಜನರಿಗೆ ಕರೋನ ಪತ್ತೆಯಾದರೆ ನಗರದಲ್ಲಿ ಕೇವಲ 10 ಪ್ರಕರಣಗಳು ಪತ್ತೆಯಾಗಿರುವ ವರದಿಯಾಗಿದೆ.
ತಾಲೂಕಿನ ಗ್ರಾಮೀಣ ಭಾಗದ ಕರೂರು ಗ್ರಾಮ ಒಂದರಲ್ಲಿಯೇ 5 ಜನರಿಗೆ ಕರೋನಾ ಪತ್ತೆಯಾದರೆ, ಇಬ್ರಾಂಪುರ, ಹಳೆ ಹೆರಕಲ್ಲು, ಹಳೇಕೋಟೆ, ಚಿಕ್ಕಬಳ್ಳಾರಿ, ಕೆ.ಬೆಳಗಲ್ಲು, ಮುದ್ದಟ್ಟನೂರು ಗ್ರಾಮದಲ್ಲಿ ತಲಾ ಒಬ್ಬರಿಗೆ ವಕ್ಕರಿಸುವ ಮೂಲಕ ಒಟ್ಟು 12 ಜನರಿಗೆ ಸೋಂಕು ಧೃಡಪಟ್ಟಿದೆ.
ಜತೆಗೆ ನಗರದ 21, 18 ಹಾಗೂ ಸಿರುಗುಪ್ಪ ಇತರೆ ವಾರ್ಡ್ಗಳಲ್ಲಿ ತಲಾ ಇಬ್ಬರಿಗೆ ಕರೋನಾ ವಕ್ಕರಿಸಿದರೆ, ಇನ್ನೂಳಿದಂತೆ 22, 12, 13, 14ನೇ ವಾರ್ಡ್ಗಳಲ್ಲಿ ತಲಾ ಒಬ್ಬರಿಗೆ ಕರೋನಾ ಸೋಂಕು ಧೃಡಪಟ್ಟಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap