ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಅಪಾಯ..

ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ಕೂಡಲೇ ಎಲ್ಲರೂ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಇದರಿಂದ ಹೊಸ ಉಲ್ಲಾಸದೊಂದಿಗೆ ದಿನಚರಿ ಆರಂಭವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಹೀಗಾಗಿಯೇ ಭಾರತ ಸೇರಿದಂತೆ ಹಲವು ದೇಶಗಳ ಮುಖ್ಯ ಪೇಯವಾಗಿ ಇಂದು ಚಹಾ ಗುರುತಿಸಿಕೊಂಡಿದೆ.

ಭಾರತ ಸೇರಿದಂತೆ ಹಲವು ದೇಶಗಳ ಮುಖ್ಯ ಪೇಯವಾಗಿ ಇಂದು ಚಹಾ ಗುರುತಿಸಿಕೊಂಡಿದೆ. ಆದರೆ ಫ್ರೆಶ್ ನೆಸ್ ಗಾಗಿ ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಕೂಡ ಅಪಾಯಕಾರಿ ಎನ್ನುತ್ತದೆ ಒಂದು ಅಧ್ಯಯನ.

ಚಹಾಗಳಂತಹ ಪಾನೀಯಗಳು ಅನೇಕ ರೀತಿಯ ಆಮ್ಲಗಳನ್ನು ಒಳಗೊಂಡಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿದಾಗ ಇದು ನೇರವಾಗಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮುಖ್ಯವಾಗಿ ಹೊಟ್ಟೆ ಹುಣ್ಣು ಅಥವಾ ಗ್ಯಾಸ್ ಸಮಸ್ಯೆಗಳಿಗೆ ಬರೀ ಹೊಟ್ಟೆಯಲ್ಲಿ ಚಹಾ ಕುಡಿಯುವುದು ಕಾರಣವಾಗಬಹುದು ಎನ್ನುತ್ತಾರೆ ಸಂಶೋಧಕರು.

ಇನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಜೀರ್ಣರಸಗಳ ಪ್ರಭಾವ ಏರುಪೇರಾಗುತ್ತದೆ. ಈ ಏರುಪೇರು ವಾಕರಿಕೆ ಬರಿಸುತ್ತದೆ.ಅಷ್ಟೇ ಅಲ್ಲದೇ ಕಡಿಮೆ ಹಾಲು ಬಳಸಿ ಸ್ಟ್ರಾಂಗ್ ಟೀ ಕುಡಿಯುವುದು ಕೂಡ ಹಾನಿಕಾರಕ ಎನ್ನುತ್ತದೆ ಅಧ್ಯಯನ ತಂಡ. ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಸ್ಟ್ರಾಂಗ್ ಟೀ ಕುಡಿಯುವುದರಿಂದ ಜೀರ್ಣ ಕ್ರಿಯೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಅಲ್ಲದೆ ಅನೇಕ ರೀತಿ ಹೊಟ್ಟೆ ಸಂಬAಧಿ ಸಮಸ್ಯೆಗಳು ಕಾಣಿಸಿಕೊಳ್ಳಲು ಇದು ಕೂಡ ಕಾರಣ. ಹೀಗಾಗಿ ಚಹಾ ಸೇವನೆ ಬಿಡುವುದು ಅಥವಾ ಕಡಿಮೆ ಮಾಡುವುದು ಕಡಿಮೆ ಮಾಡಬೇಕು ಇಲ್ಲವೇ ಯಾವಾಗ ಯಾವ ರೀತಿಯಲ್ಲಿ ಕುಡಿಯಬೇಕು ಎಂಬುದರ ಬಗ್ಗೆಯೂ ತಿಳಿದಿರಲಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap