ಕೋವಿಡ್-19 ಸಂಕಷ್ಟದಲ್ಲಿ ಜೆಎಸ್‌ಡಬ್ಲೂö್ಯ ಪೇಂಟ್ಸ್ ಸಹಾಯ ಹಸ್ತ!

ಬಳ್ಳಾರಿ: ಕೊರೊನಾ ವೈರಸ್ ಹರಡುವಿಕೆಯ ಪರಿಣಾಮ ವ್ಯಾಪಾರ ಸೇರಿದಂತೆ ಜನತೆಯು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ಜೆಎಸ್‌ಡಬ್ಲೂö್ಯ ಪೇಂಟ್ಸ್ ಕಾಂಟ್ರಕ್ಟರ್‌ಗಳಿಗೆ ನೆರವು ಒದಗಿಸಲು ಮುಂದಾಗಿದೆ.
ಜೆಎಸ್‌ಡಬ್ಲೂö್ಯ ಕಂಪನಿಯ ಅಂಗಸAಸ್ಥೆ ಈ ಜೆಎಸ್‌ಡಬ್ಲೂö್ಯ ಪೇಂಟ್ಸ್ ನಿಂದ ‘ಸ್ಟಾರ್ ಕಾಂಟ್ರಕ್ಟರ್ ಪಾರ್ಟರ್’ ಕಾರ್ಯಕ್ರಮದ ಅಡಿಯಲ್ಲಿ ಪೇಂಟಿ0ಗ್ ಕಾಂಟ್ರಕ್ಟರ್‌ಗಳಿಗೆ ತಾವು ಗಳಿಸಿದ ಲಾಯಲ್ಟಿ ಪಾಯಿಂಟ್ ಹಾಗು ಇನ್ಸೆಂಟಿವ್ ಅನ್ನು ನಗದು ರೂಪದಲ್ಲಿ ಪರಿವರ್ತಿಸುವ ಅವಕಾಶವನ್ನು ಸಂಸ್ಥೆಯು ಒದಗಿಸಿದೆ. ಗುತ್ತಿಗೆದಾರರು ಈ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕೂಡ ಅವಕಾಶ ಕಲ್ಪಿಸಿದೆ.
ಈ ಯೋಜನೆಯಿಂದ ಸುಮಾರು 4000 ಕ್ಕೂ ಹೆಚ್ಚು ಪೇಂಟಿ0ಗ್ ಕಾಂಟ್ರಕ್ಟರ್‌ಗಳಿಗೆ ಪ್ರಯೋಜನವಾಗಲಿದೆ. ಪ್ರತಿ ಬಾರಿ ಲಾಯಲ್ಟಿ ಮೊಬೈಲ್ ಆ್ಯಪ್ ಬಳಸಿದಾಗ ಎಂಗೆಜ್‌ಮೆ0ಟ್ ಆಧಾರಿತ ಲಾಯಲ್ಟಿ ಪಾಂಟ್‌ಗಳು ಗುತ್ತಿಗೆದಾರರಿಗೆ ದೊರೆಯುತ್ತವೆ ಜತೆಗೆ ಸ್ಟಾರ್ ಪಾಯಿಂಟ್ ಕೂಡ ಗಳಿಸಿರುತ್ತಾರೆ. ಇವುಗಳನ್ನು ಈಗ ಹಣದ ರೂಪದಲ್ಲಿ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಹಿಸಿಕೊಳ್ಳಬಹುದು.
ಗುತ್ತಿಗೆದಾರರಿಗೆ ಮಾಹಿತಿ ಒದಗಿಸಿ ಈ ಪಾಯಿಂಟ್‌ಗಳನ್ನು ತಮ್ಮ ಖಾತೆಗೆ ವರ್ಗಾಹಿಸಿಕೊಳ್ಳಲು ಗ್ರಾಹಕ ಸೇವೆ ಅಧಿಕಾರಿಗಳನ್ನು ಸಹ ಸಂಸ್ಥೆ ನೇಮಿಸಿದೆ. ಇದರಿಂದ ಮತ್ತಷ್ಟು ಪ್ರೋತ್ಸಾಹ ಕಾಂಟ್ರಕ್ಟರ್‌ಗಳಿಗೆ ಸಿಗಲಿದೆ. ಸಂಸ್ಥೆಯು 2019 ರಲ್ಲಿ ಪ್ರಾರಂಭವಾಗಿದ್ದು ಇಷ್ಟು ಕಡಿಮೆ ಅವಧಿಯಲ್ಲಿ ಸಾಕಷ್ಟು ಗುತ್ತಿಗೆದಾರರನ್ನು ಮತ್ತು ಗ್ರಾಹಕರನ್ನು ಗಳಿಸಿದೆ.
ಜೆಎಸ್‌ಡಬ್ಲೂö್ಯ ಪೇಂಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎ ಎಸ್ ಸುಂದರೇಸನ್ ಮಾತನಾಡಿ, “ವ್ಯಾಪಾರದ ಮೇಲೆ ಕೋವಿಡ್-19 ಬಹಳಷ್ಟು ಪರಿಣಾಮ ಬೀರಿದೆ. ಪೇಂಟಿ0ಗ್ ಕಾರ್ಯವು ಗುತ್ತಿಗೆದಾರರಿಗೆ ಬಹುದೊಡ್ಡ ಆದಾಯದ ಮೂಲವಾಗಿತ್ತು. ಕೊರೊನಾದ ಪರಿಣಾಮ ಇವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಕಾರ್ಮಿಕರಿಗೆ ಸಂಬಳ ನೀಡಲು ಆಗುತ್ತಿಲ್ಲ ಜತೆಗೆ ತಮ್ಮ ದಿನ ನಿತ್ಯದ ಖರ್ಚನ್ನು ಸಹ ನಿಭಾಯಿಸಲು ಒದ್ದಾಡುತ್ತಿದ್ದಾರೆ. ‘ಸ್ಟಾರ್ ಕಾಂಟ್ರಕ್ಟರ್ ಪಾರ್ಟರ್’ ಕಾರ್ಯಕ್ರಮದ ಅಡಿಯಲ್ಲಿ ಇವರಿಗೆ ಸಹಾಯ ಒದಗಿಸಲು ಸಂಸ್ಥೆಯು ಮುಂದಾಗಿದೆ. ಗ್ರಾಹಕ ಸೇವೆ ಅಧಿಕಾರಿಗಳನ್ನು ನೇಮಿಸುವುದರ ಮೂಲಕ ಲಾಯಲ್ಟಿ ಹಾಗು ಇನ್ಸೆಂಟಿವ್ ಪಾಯಿಂಟ್‌ಗಳನ್ನು ನಗದು ರೂಪಾದಲ್ಲಿ ಪರಿವರ್ತಿಸಲು ಕಾಂಟ್ರಕ್ಟರ್‌ಗಳಿಗೆ ಮತ್ತಷ್ಟು ಸುಲಭವಾಗಿಸಿದೆ” ಎಂದು ಹೇಳಿದರು.
‘ಸ್ಟಾರ್ ಕಾಂಟ್ರಕ್ಟರ್ ಪಾರ್ಟರ್’ ಕಾರ್ಯಕ್ರಮವು 3 ಮುಖ್ಯವಾದ ಅಂಶಗಳನ್ನು ಹೊಂದಿದೆ. ತಮ್ಮ ಗ್ರಾಹಕರ ಜೊತೆಯಲ್ಲಿ ವ್ಯವಹಾರ ನಡೆಸಲು ಗುತ್ತಿಗೆದಾರರಿಗೆ ವೃತ್ತಿಪರತೆಯ ಬೆಂಬಲ ಒದಗಿಸುವುದು. ‘ಜೆಎಸ್‌ಡಬ್ಲೂö್ಯ ಬಡ್ಡಿ ಅಸಿಸ್ಟ್’ ಮೂಲಕ ಕಾಂಟ್ರಕ್ಟರ್ ಸಂಬ0ಧ ನಿರ್ವಹಣೆ ಮಾಡುವುದು. ಕೊನೆಯದಾಗಿ, ಲಾಯಲ್ಟಿ ಕಾರ್ಯಕ್ರಮದ ಅಡಿಯಲ್ಲಿ ಪಾಯಿಂಟ್‌ಗಳನ್ನು ಗಳಿಸಲು ಕಾಂಟ್ರಕ್ಟರ್‌ಗಳಿಗೆ ಅವಕಾಶ ಒದಗಿಸಿ ತಮಗೆ ಅವಶ್ಯಕತೆ ಇದ್ದಾಗ ಅವುಗಳನ್ನು ಹಣದ ರೂಪಾದಲ್ಲಿ ತಮ್ಮ ಖಾತೆಗಳಿಗೆ ವರ್ಗಾಹಿಸಿಕೊಳ್ಳಲು ಅವರಿಕೆ ಅವಕಾಶ ಕಲ್ಪಿಸುವುದು ಎಂದು ವಿವರಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap