ಕೋವಿಡ್ 19 ಫಿವರ್ ಕ್ಲಿನಿಕ್ ಬಸ್ ಸಂಚಾರಿನಿ0ದ ಜನರ ತಪಾಸಣೆ.

ಸಿರಿನಾಡ ಸುದ್ದಿ, ಕುರುಗೋಡು: ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್ ಆಸ್ಪತ್ರೆ ಬಳ್ಳಾರಿ ಇವರ ನೇತೃತ್ವದಲ್ಲಿ ಕೋವಿಡ್ -19 ಫಿವರ್ ಕ್ಲೀನಿಕ್ ಸಂಚಾರಿ ಬಸ್ ಸಮೀಪದ ಎಮ್ಮಿಗನೂರು ಗ್ರಾಮದ ವಾರ್ಡಿಗಳಿಗೆ ಸಂಚರಿಸಿ ಜ್ವರ, ಶೀತ ಕಾಯಿಲೆಗಳ ಕುರಿತು ಜನರನ್ನು ಸ್ಕಿçÃನಿಂಗ್ ಮಾಡಿದರು.
ಇದೇ ವೇಳೆ ವೈದ್ಯಾಧಿಕಾರಿ ಕೆ.ಪ್ರಹ್ಲಾದ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಜ್ವರ,ಗಂಟಲು ನೋವು,ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡುಬAದಲ್ಲಿ ಸ್ಥಳೀಯ ವೈದ್ಯರ ಬಳಿ ತೆರಳಿ ಸ್ವಯಂ ವರದಿ ಪಡೆದುಕೊಳ್ಳಿ ಇದರಿಂದ ಭಯ ಪಡುವ ಅಗತ್ಯವಿರುವುದಿಲ್ಲ. ಯಾವುದೇ ಕಾರಣಕ್ಕೂ ಸ್ವಯಂ ನಿರ್ಧರ ಮಾಡಿ ಔಷಧಿಗಳನ್ನು ತೆಗೆದುಕೊಳ್ಳಬೇಡಿ. ಕೂಡಲೇ ಜ್ವರ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಳ್ಳಿ. ಕೊರೊನಾ ದೃಢ ಪಟ್ಟಣಲ್ಲಿ ಅಂತವರನ್ನು ಗುಣಮುಖರನ್ನಾಗಿ ಮಾಡಲು ಜಿಲ್ಲಾಡಳಿ ಎಲ್ಲ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಎಲ್ಲರ ಸಹಕರ ಅಗತ್ಯವಾಗಿದೆ ಎಂದರು.
ಸುಮಾರು 180 ಕ್ಕೂ ಹೆಚ್ಚು ಜನರನ್ನು ತಪಾಸಣಾ ಮಾಡಿದರು.
ಈ ಸಂದರ್ಭದಲ್ಲಿ ಬಸವನಗೌಡ, ವಿಘ್ನೇಶ್, ಕೃಷ್ಣ ಮೂರ್ತಿ, ಶಿಕ್ಷಕ ಎಸ್.ರಾಮು, ಎಚ್.ಮಲ್ಲೇಶ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap