ಕೋವಿಡ್: ತಿವ್ರ ಸಂಕಷ್ಟದಲ್ಲಿ ಶಿಲ್ಪ ಕಲಾವಿದರು

ಸಿರಿನಾಡ ಸುದ್ದಿ, ಮಾನವಿ: ತಾಲೂಕಿನ ಸಂಗಾಪೂರು ಗ್ರಾಮದಲ್ಲಿನ ಶ್ರೀ ಗಾಯಿತ್ರಿ ಶಿಲ್ಪಕಲಾ ಕೇಂದ್ರದಲ್ಲಿ ಶಿಲ್ಪಿಗಳು ವಿವಿಧ ದೇವತ ಮೂರ್ತಿಗಳನ್ನು ಕೆತ್ತನೆ ಮಾಡಿದ್ದು ಸರ್ಕಾರವು ಕೊರೋನ ವೈರಾಣು ಹರಡದಂತೆ ಮುಂಜಾಗ್ರಾತೆಯಾಗಿ ಧಾರ್ಮಿಕ ಸಭೆ ಸಮಾರಂಭಗಳನ್ನು ನಡೆಸದೆಂತೆ ನಿರ್ಭಂದ ವಿಧಿಸಿರುವುದರಿಂದ ಭಕ್ತರು ಮೂರ್ತಿಗಳನ್ನು ತೆಗೆದುಕೊಂಡು ಹೊಗದೆ ಇರುವುದರಿಂದ ಕೇಂದ್ರದಲ್ಲಿನ ಶಿಲ್ಪಿಗಳು ತಿವ್ರ ಸಂಕಷ್ಟ ಎದುರಿಸುವಂತಾಗಿದೆ.
ಇಲ್ಲಿನ ಶಿಲ್ಪಿಗಳ ಕೈಚಳಕದಿಂದ ರೂಪಗೊಳ್ಳುವ ವಿವಿಧ ದೇವತಾ ಶಿಲ್ಪಗಳಿಗೆ ಮಹಾರಾಷ್ಟçದ ಪುಣೆ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ಬೇಡಿಕೆ ಇದೆ. ಆಂಧ್ರದ ಹೈದ್ರಾಬಾದ ಸೇರಿದಂತೆ. ರಾಜ್ಯದ ವಿವಿಧ ಭಾಗಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಲ್ಲಿನ ದೇವಾಸ್ಥನಗಳಲ್ಲಿ ಮೂರ್ತಿಗಳನ್ನು ಪ್ರತಿಷ್ಟಾಪಿಸಲು ಭಕ್ತರು ತಮ್ಮ ಇಷ್ಟದೇವತೆಗಳ ಮೂರ್ತಿಗಳಿಗೆ.ಇಲ್ಲಿನ ಶಿಲ್ಪಿಗಳ ಮೋರೆ ಹೊಗುವುದು ಸಮಾನ್ಯವಾಗಿದೆ.
ಇಲ್ಲಿ ಹುಲ್ಲಿಗೆಮ್ಮ, ಮಾರೆಮ್ಮ, ಮಾರಿಕಾಂಭ, ಮಹಿಷಾಸುರ ಮರ್ಧಿನಿ, ಕಾಳಿಕಾಂಭ, ದುರ್ಗದೇವಿ, ಅಮ್ಮನವರ ಪಾದಗಳು ಶಿವಲಿಂಗ, ನಂದಿ, ಅಂಜಿನೇಯ, ದೇವಿ ಮೂರ್ತಿಗಳು 1 ಅಡಿಯಿಂದ 10 ಅಡಿ ವರೆಗೆ ನಿರ್ಮಾಣವಾಗುತ್ತವೆ. 4 ಜನ ಸಹೊದರರು ಒಂದೇ ಮನೆಯಲ್ಲಿ ವಾಸವಿರುವ ಅವಿಭಕ್ತ ಕುಟುಂಬವಾಗಿದ್ದು ಇಂದಿಗೂ ಮೂರು ಪೀಳಿಗೆಯವರು ಇಲ್ಲಿನ ಶಿಲ್ಪಕಲಾ ಕೇಂದ್ರದಲ್ಲಿ ಶಿಲ್ಪಕಲೆಯನ್ನು ತಮ್ಮ ಜೀವನವಾಗಿಸಿಕೊಂಡಿದ್ದು ತಮ್ಮ ಕೆತ್ತನೆಯಲ್ಲಿ ಹೊಯ್ಸಳ ಶೈಲಿಯೊಂದಿಗೆ ಆಧುನಿಕ ಶೈಲಿಯನ್ನು ತಮ್ಮ ಶಿಲ್ಪಕಲೆಯಲ್ಲಿ ಅಳವಡಿಸಿಕೊಡಿರುವ ಇವರು ನಿರ್ಮಿಸಿದ ದೇವತ ಮೂರ್ತಿಗಳಲ್ಲಿ ದೈವತ್ವದ ಕಳೆೆಯನ್ನು ಕಾಣಬಹುದಾಗಿದೆ.
6 ಸಹೋದರರಲ್ಲಿ ಶೇಖರಪ್ಪ ಆಚಾರಿ, ವೆಂಕಣ್ಣ ಆಚಾರಿ, ಬ್ರಹ್ಮಯ್ಯ ಆಚಾರಿ, ಸುರೇಶ ಆಚಾರಿ, ದೇವರಾಜ ಆಚಾರಿ, ಮುಂದಿನ ತಲೆಮಾರಿನ ಸದಸ್ಯರಾದ ದೇವರಾಜ ಆಚಾರಿ ಕಬ್ಬಿಣ, ಸಿಮೇಂಟ್, ಕಲ್ಲಿನಿಂದ ಮೂರ್ತಿಗಳನ್ನು ತಯಾರಿಸುವಲ್ಲಿ ಸಿದ್ದಹಸ್ತರಾಗಿದ್ದು.ಇವರಲ್ಲಿ ಸುರೇಶ ಶಿಲ್ಪಿ ಸಿಮೇಂಟಿನಿ0ದ ವಾಲ್ಮಿಕಿ ಮಹಾರ್ಷಿಗಳ, ಹಾಲುಣಿಸುತ್ತಿರುವ ತಾಯಿ, ಸಿಂಹದ ಮೂರ್ತಿಗಳು, ಅಕಳು ಮತ್ತು ಕರು ಮೂರ್ತಿಗಳು ಮಹಾನಗರಗಳಲ್ಲಿನ ಉದ್ಯಾನಗಳಲ್ಲಿ ಸ್ಥಾಪನೆಯಾಗಿವೆ.
ವಿವಿಧ ಧಾರ್ಮಿಕ ಪುರುಷರ ಭಾವಚಿತ್ರವನ್ನು ನೀಡಿದಲ್ಲಿ ಭಾವಚಿತ್ರದಲ್ಲಿ ಇರುವಂತೆ ಮೂರ್ತಿಗಳನ್ನು ತಯಾರಿಸಿ ಕೊಡುತ್ತಾರೆÉ ಇವರ ಕೈಯಲ್ಲಿ ಅಂಬೆಡ್ಕರ್, ವಿವೇಕನಂದ, ಸಿದ್ದಗಂಗ ಶ್ರೀಗಳು, ಬುದ್ದ, ಬಸವ ಅಂಬಿಗರ ಚೌಡಯ್ಯ ಕನಕದಾಸ, ವಿಜಯದಾಸರು, ರೂಪುಗೊಂಡಿದ್ದಾರೆ. ಶಿಲ್ಪಿ ದೇವರಾಜರವರು ಪ್ರಮುಖ ಗಾಯಕ ದಿ||ಬಾಲಸುಬ್ರಹ್ಮಣ್ಯಂರವರಿಗೆ ಶ್ರೀ ರಾಘವೆಂದ್ರಸ್ವಾಮಿಗಳ ಮೂರ್ತಿಯನ್ನು ಹಾಗೂ ಸಾಬೂನಿನಲ್ಲಿ ಬಾಲಸುಬ್ರಹ್ಮಣ್ಯಂರವರ ಮೂರ್ತಿಯನ್ನು ಜೀ ಕನ್ನಡ ಕಿರುತೆರೆ ಕಾರ್ಯಕ್ರಮದಲ್ಲಿ ನೀಡಿರುವುದನ್ನು ಮರೆಯಲಾಗದು ಎನ್ನುತ್ತಾರೆ ಇವರು ಸಾಬೂನಿನಲ್ಲಿ 100 ಕ್ಕೂ ಹೆಚ್ಚು ಕಲಾಕೃತಿಗಳನ್ನು ಕೆತ್ತಿದ್ದಾರೆ ಪೆನ್ಸಿಲ್‌ನಲ್ಲಿ ವ್ಯಕ್ತಿ ಚಿತ್ರಗಳನ್ನು ಬಿಡಿಸುವುದರಲ್ಲಿಯೂ ಇವರು ಸಿದ್ಧಹಸ್ತರು
ಇಲ್ಲಿನ ಶಿಲ್ಪಕಲಾ ಕೇಂದ್ರದ ಹಿರಿಯರಾದ ದಿ|| ಪಂಪಣ್ಣ ಆಚಾರಿಯವರಿಗೆ ರಾಜ್ಯ ಸರ್ಕಾರವು ಇವರ ಶಿಲ್ಪಕಲಾ ಪ್ರತಿಭೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದ್ದು ಕುಟುಂಬದ ಸದಸ್ಯರಿಗೆ ಹೆಮ್ಮೆಯ ವಿಷಯವಾಗಿದೆ.
ಮೂರ್ತಿಗಳನ್ನು ಕೆತ್ತೆನೆನಂತರ ಬಿಳಿಬಣ್ಣದ ಕೃಷ್ಣ ಶಿಲೆಯ ಮೂರ್ತಿಗಳನ್ನು ಕಪ್ಪಾಗಿಸಲು ಕೊಬ್ಬರಿ ಎಣ್ಣೆ,ಕೇರು ಬಳಸಲಾಗುತ್ತದೆ ಮೂರ್ತಿಗಳನ್ನು ಮತಷ್ಟು ಅಕರ್ಷವಾಗಿಸಲು ಮಿರರ್ ಪಾಲಿಸ್ಸ್ ಮಾಡಲಾಗುತ್ತದೆ
ಶಿಲ್ಪಿ ಸುರೇಶ ಆಚಾರಿ ಮಾತನಾಡಿ, ನಮ್ಮ ಶಿಲ್ಪಕಲಾ ಕೇಂದ್ರದಲ್ಲಿ. ಮೈಸೂರು ಜಿಲ್ಲ್ಲೆಯಲ್ಲಿ ದೊರೆಯುವ ಕೃಷ್ಣಶಿಲೆಯ ಕಲ್ಲು ಶಿಲ್ಪಕಲೆಗೆ ಯೋಗ್ಯವಾಗಿದ್ದು ಪ್ರತಿ ವರ್ಷ ನಮ್ಮ ಶಿಲ್ಪಿಗಳ ತಂಡವು ಒಳ್ಳೆಯ ಗುಣಲಕ್ಷಣಗಳು ಇರುವ ಕೆತ್ತನೆಗೆ ಯೋಗ್ಯವಾಗಿರುವ ಕಲ್ಲುಗಳನ್ನು ಆಯ್ಕೆ ಮಾಡಿ. ಅವುಗಳನ್ನು ಕೇಂದ್ರಕ್ಕೆ ತರಲಾಗುತ್ತದೆ 1 ಲೋಡ ಬೃಹತ್ ಗಾತ್ರದ ಕಲ್ಲುಗಳು ವರ್ಷದಲ್ಲಿ 50 ಮೂರ್ತಿಗಳ ಕೆತ್ತನೆಗೆ ಸಾಕÀಗುತ್ತದೆ ಕಲ್ಲುಗಳನ್ನು ತಂದು ಭಕ್ತರು ಬೇಡಿಕೆ ಇಟ್ಟ ಅಕಾರಕ್ಕೆ ಅನುಗುಣವಾಗಿ ಮೂರ್ತಿಗಳ ಆಕಾರ ಗಾತ್ರಕ್ಕೆ ಅನುಗುಣವಾಗಿ ಕತ್ತರಿಸಿಕೊಂಡು ಮಾರ್ತಿಗಳನ್ನು ಕೆತ್ತನೆ ಮಾಡಲಾಗುತ್ತದೆ ಒಂದು ಮೂರ್ತಿ ಕೆತ್ತನೆಗೆ 3 ತಿಂಗಳ ಅವಧಿ ಬೇಕಾಗುತ್ತದೆ ನಮ್ಮ ತಂದೆ ದಿ|| ಪಂಪಣ್ಣ ಆಚಾರಿ ಶಿಲ್ಪಿರವರು ವಿಶ್ವಕರ್ಮ ಸಮಾಜದ ಕುಲಕಸುಭಿನಂತೆ ಪಂಚ ಲೋಹಗಳಿಂದ ಮೂರ್ತಿ ಕೆತ್ತನೆಯನ್ನು ಕರಗತ ಮಾಡಿಕೊಂಡಿದ್ದು ಅವರಿಂದ ಈ ಕಲೆಯು ನಮಗೆ ಬಳುವಳಿಯಾಗಿ ದೊರೆತ್ತಿದೆ.
ಅದರಂತೆ ನಾವು 6 ಸಹೋದರರು ಮೂರ್ತಿ ಕೆತ್ತನೆಗೆ ನಮ್ಮ ಜೀವನವನ್ನು ಮುಡುಪಿಟ್ಟಿದ್ದೇವೆ. ಕರೊನ ಹಿನ್ನಲೆಯಲ್ಲಿ ಸರ್ಕಾರವು ಧಾರ್ಮಿಕ ಸಮಾರಂಭಗಳಿಗೆ ಅವಕಾಶ ನೀಡದೆ ಇರುವುದರಿಂದ ನಮ್ಮಲ್ಲಿ ಭಕ್ತರ ಬೇಡಿಕೆಯಂತೆ ನಿರ್ಮಿಸಿದ ಮೂರ್ತಿಗಳು ವಿಲೆವಾರಿಯಾಗದೆ ಇರುವುದರಿಂದ ಹಾಕಿದ ಬಂಡವಾಳವು ಬರದಂತಾಗಿದ್ದು ಜೀವನ ನಿರ್ವಹಿಸುವುದೆ ಕಷ್ಟವಾಗಿದೆ. ವಿಶ್ವಕರ್ಮ ಅಭಿವೃದ್ದಿ ಮಂಡಳಿಯಿAದ ಆರ್ಥಿಕ ಸೌಲಭ್ಯ ಸೇರಿದಂತೆ ಕೈಗಾರಿಕೆ ಇಲಾಖೆಯಿಂದ ಸರ್ಕಾರದಿಂದ ನಮ್ಮಗೆ ಯಾವುದೆ ಸೌಲಭ್ಯ ದೊರೆಯದೆ ಇರುವುದು ಸೇರಿದಂತೆ ನಮ್ಮ ಕುಟುಂಬ ನಿರ್ವಹಣೆಗೆ ಸರ್ಕಾರ ಪ್ರೊತ್ಸಾಹಧನ ನೀಡದೆ ಇರುವುದರಿಂದ ರಾಜ್ಯ ಸರ್ಕಾರದಿಂದ 2 ತಿಂಗಳ ಕಾಲ ಜಾರಿಯಿಂದಾಗಿ ಕಳೆದ 6 ತಿಂಗಳಿ0ದ ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎನ್ನುತ್ತಾರೆ
ಇವರು ಹಂಪಿಯಲ್ಲಿ ಪ್ರತಿ ವರ್ಷ ರಾಜ್ಯ ಸರ್ಕಾರದಿಂದ ನಡೆಯುವ ಉತ್ಸವದಲ್ಲಿನ ಶಿಲ್ಪಕಲಾ ರಚನೆ ಹಾಗೂ ಪ್ರದರ್ಶನ ವಿಭಾಗದಲ್ಲಿ ಮೂರ್ತಿಗಳನ್ನು ಕೆತ್ತನೆ ನಡೆಸಿ ಸೈ ಎನಿಸಿಕೊಂಡಿದ್ದ ರಾಯಚೂರಿನಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮೇಳನ,ಮತ್ತು ಮಾನವಿಯಲ್ಲಿ ನಡೆದ ತಾಲೂಕು ಕ.ಸಾ.ಪ. ವಾರ್ಷಿಕ ಸಾಹಿತ್ಯ ಸಮ್ಮೇಳನಗಳಲ್ಲಿ ಇವರ ಶಿಲ್ಪಗಳು ಪ್ರದರ್ಶನ ಕಂಡು ಜನರ ಮೇಚ್ಚುಗೆ ಗಳಿಸಿವೆ. ಮಾಹಿತಿಗೆ ಸಂಪರ್ಕಸಿ ವೆಂಕಣ್ಣ ಆಚಾರಿ 9880798277

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap