ಕೋವಿಡ್ ಆರೋಗ್ಯ ಸುರಕ್ಷಾ ಅಭಿಯಾನ* ಮೊದಲಿಗೆ ಸಂಡೂರಿನಲ್ಲಿ ಆರಂಭ ಸAಶಯಾಸ್ಪದ ಕೋವಿಡ್ ಲಕ್ಷಣ, ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವವರ ಪತ್ತೆಗೆ ಮನೆ-ಮನೆ ಭೇಟಿ ಸಮೀಕ್ಷೆ

????????????????????????????????????

ಸಿರಿನಾಡ ಸುದ್ದಿ, ಬಳ್ಳಾರಿ: ಕೊರೊನಾ ವೈರಸ್ ನಿಯಂತ್ರಣಕ್ಕೆ ಬಳ್ಳಾರಿ ಜಿಲ್ಲಾಡಳಿತವು ವಿವಿಧ ರೀತಿಯ ಸಿದ್ಧತೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುತ್ತಿದೆ. ಕೋವಿಡ್-19 ಆರೋಗ್ಯ ಸುರಕ್ಷಾ ಅಭಿಯಾನದ ಹೆಸರಿನಲ್ಲಿ ಸಂಶಯಾಸ್ಪದ ಕೋವಿಡ್ ರೋಗಲಕ್ಷಣಗಳುಳ್ಳ ಹಾಗೂ ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಿ ಅವರಿಗೆ ಚಿಕಿತ್ಸೆ ನೀಡುವುದರ ಮೂಲಕ ಈ ಕೊರೊನಾ ಮಾರಿ ವ್ಯಾಪಕವಾಗಿ ಹರಡವುದನ್ನು ತಡೆಗಟ್ಟಲು ಮುಂದಾಗಿದೆ.
ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಅಜೀಂಫ್ರೇಮ್‌ಜೀ ಫೌಂಡೇಶನ್ ಸಹಯೋಗದೊಂದಿಗೆ ಈ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೊದಲಿಗೆ ಸಂಡೂರು ತಾಲೂಕಿನಲ್ಲಿ ಆರಂಭಿಸಲಾಗುತ್ತಿದೆ.
*ಯಾರಿಗೆಲ್ಲ ಸಮೀಕ್ಷೆ& ಪರೀಕ್ಷೆ: 15 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟವರು, ಗರ್ಭೀಣಿ ಮಹಿಳೆಯರು, ಮಧುಮೇಹ,ರಕ್ತದೊತ್ತಡ, ಹೃದಯತೊಂದರೆ,ಕಿಡ್ನಿ,ಕ್ಯಾನ್ಸರ್,ಮೂತ್ರಪಿAಡ ತೊಂದರೆ,ಎಚ್‌ಐವಿ,ಟಿಬಿ ಅಥವಾ ಯಾವುದಾದರೂ ಧೀರ್ಘಾವಧಿ ಆರೋಗ್ಯ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಕೆಮ್ಮು, ಶೀತ, ಉಸಿರಾಟದ ತೊಂದರೆ, ಗಂಟಲುನೋವು, ನೆಗಡಿಯ ತೊಂದರೆಯಿAದ ಬಳಲುತ್ತಿದ್ದಲ್ಲಿ ಅವರಿಗೆ ಆಂಟಿಜೇನ್ ಟೆಸ್ಟ್ ಮಾಡಿಸಿ ವರದಿ ಅನ್ವಯ ಚಿಕಿತ್ಸೆಗೆ ಕ್ರಮವಹಿಸಲು ಜಿಲ್ಲಾಡಳಿತ ಮುಂದಾಗಿದೆ.
*ಮನೆ-ಮನೆ ಭೇಟಿ ಸಮೀಕ್ಷೆಗೆ ಆಶಾಗಳ ಬಳಕೆ: ಈ ಎಲ್ಲ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ಮನೆ-ಮನೆ ಭೇಟಿ ನಡೆಸಿ ಸಮೀಕ್ಷೆ ಕೈಗೆತ್ತಿಕೊಳ್ಳಲು ಆಶಾಕಾರ್ಯಕರ್ತೆಯರು ಹಾಗೂ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರನ್ನು ಬಳಸಿಕೊಳ್ಳಲಾಗುತ್ತಿದೆ.
ಈ ಆಶಾ ಕಾರ್ಯಕರ್ತೆಯರು ಹಾಗೂ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರಿಗೆ ಪಲ್ಸ್ ಅಪ್ಟಿಮೀಟರ್ ಮಶೀನ್ ನೀಡಲಾಗುತ್ತಿದ್ದು, ಅವರು ಸಮೀಕ್ಷೆ ಸಂದರ್ಭದಲ್ಲಿ ಗರ್ಭೀಣಿ,ಮಕ್ಕಳು, 60 ವರ್ಷ ಮೇಲ್ಪಟ್ಟವರು ಮತ್ತು ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಪಲ್ಸ್ ಅಕ್ಸಿಮೀಟರ್ ಮೂಲಕ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುತ್ತಿದೆ ಎಂಬುದು ಪರಿಶೀಲಿಸಲಾಗುತ್ತದೆ. ಶೇ.94ಕ್ಕಿಂತಲೂ ಕಡಿಮೆ ಆಕ್ಸಿಜನ್ ಪೂರೈಕೆಯಾಗುತ್ತಿದ್ದಲ್ಲಿ ಅಂತವರ ಸ್ವಾö್ಯಬ್ ಅನ್ನು ಎಸ್‌ಒಪಿ ನಿಯಮಾನುಸಾರ ಆಂಟಿಜೆನ್ ಕಿಟ್ ಮೂಲಕ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತದೆ.
ಈಗಾಗಲೇ ಸಂಡೂರು ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ಹಾಗೂ ಕಿರಿಯ ಆರೋಗ್ಯ ಮಹಿಳಾ ಸಹಾಯಕರಿಗೆ ತರಬೇತಿ ನೀಡಲಾಗುತ್ತಿದೆ.ಇನ್ನೂ ಎರಡ್ಮೂರು ದಿನಗಳಲ್ಲಿ ಈ ಸಮೀಕ್ಷೆ ಶುರು ಆಗಲಿದ್ದು,ಒಂದು ವಾರದಲ್ಲಿ ಇದು ಕಂಪ್ಲಿಟ್ ಆಗಲಿದೆ.
ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಜಿಪಂ ಸಿಇಒ ಕೆ.ನಿತೀಶ್ ಅವರ ಅಧ್ಯಕ್ಷತೆಯಲ್ಲಿ ಸಿದ್ಧತಾ ಸಭೆ ಜರುಗಿದ್ದು,ಸಕಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
*ಪಲ್ಸ್ ಅಕ್ಸಿಮೀಟರ್‌ಗಳ ಪೂರೈಕೆ: ಅಜೀಂಫ್ರೇಮ್‌ಜೀ ಫೌಂಡೇಶನ್ ಈಗಾಗಲೇ ಪಲ್ಸ್ ಅಕ್ಸಿಮೀಟರ್‌ಗಳನ್ನು ಪೂರೈಕೆ ಮಾಡಿದ್ದು,ಸಮೀಕ್ಷೆ ನಡೆಸುವ ಪ್ರತಿಯೊಬ್ಬರಿಗೂ ಸುರಕ್ಷತೆ ದೃಷ್ಟಿಯಿಂದ ಫೇಸ್ ಮಾಸ್ಕ್, ಗ್ಲೌಸ್,ಸ್ಯಾನಿಟೈಸರ್‌ಗಳನ್ನು ವಿತರಿಸಿದೆ. ಸಂಡೂರು ತಾಲೂಕಿನಲ್ಲಿರುವ 228 ಆಶಾಕಾರ್ಯಕರ್ತೆಯರಿಗೆ ಪಲ್ಸ್ ಅಕ್ಸಿಮೀಟರ್ ವಿತರಿಸಲಾಗಿದೆ.35 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ತಾಲೂಕಿನಲ್ಲಿರುವ 35 ಉಪಕೇಂದ್ರಗಳಲ್ಲಿ ಮೇಲ್ವಿಚಾರಣೆ ಮಾಡಲಿದ್ದಾರೆ.
ಇದು ಆರೋಗ್ಯದ ಹಿತದೃಷ್ಟಿಯಿಂದ ಕೈಗೆತ್ತಿಕೊಳ್ಳುತ್ತಿರುವ ಕಾರ್ಯವಾಗಿದ್ದು, ಯಾರು ಭಯಪಡದೇ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮನವಿ ಮಾಡುತ್ತಾರೆ.
ಏನಾದರೂ ಗೊಂದಲಗಳಿದ್ದಲ್ಲಿ ಮತ್ತು ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ 104 ಅಥವಾ 08392-277100 ಅಥವಾ ವಾಟ್ಸ್ ಆಪ್ ಸಂಖ್ಯೆ 8277888866 ಸಂಪರ್ಕಿಸಬಹುದಾಗಿದೆ.
ತೋರಣಗಲ್ಲುವಿನಲ್ಲಿ ತರಬೇತಿ: ಕೋವಿಡ್-19 ಆರೋಗ್ಯ ಸುರಕ್ಷಾ ಅಭಿಯಾನಕ್ಕೆ ಸಂಬAಧಿಸಿದAತೆ ಆಶಾ ಕಾರ್ಯಕರ್ತೆಯರಿಗೆ ಹಾಗೂ ಕಿರಿಯ ಆರೋಗ್ಯ ಮಹಿಳಾ ಸಹಾಯಕರಿಗೆ ತರಬೇತಿಯು ತೋರಣಗಲ್ಲುವಿನಲ್ಲಿ ಸೋಮವಾರ ಜರುಗಿತು.
ಜಿಲ್ಲಾ ಆರ್‌ಸಿಎಚ್ ಡಾ.ಅನಿಲಕುಮಾರ್ ಅವರು ಈ ತರಬೇತಿಗೆ ಚಾಲನೆ ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಗೋಪಾಲಕೃಷ್ಣ, ಅಜೀಂಫ್ರೇಮ್‌ಜೀ ಫೌಂಡೇಶನ್‌ನ ಕೋ-ಅರ್ಡಿನೇಟರ್ ಉದಯ್ ಬೆಕಲ್,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಅಜೀಂಫ್ರೇಮ್‌ಜೀ ಫೌಂಡೇಶನ್‌ನ ಸಿ.ಎಂ.ಅಖೀಲಾ, ನೇತ್ರಾ, ಶಿವಪ್ಪ, ರೀಟಾ, ರೇಣುಕಾ ಸೇರಿದಂತೆ ಆಶಾ ಮತ್ತು ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap