ಕೋವಿಡ್​​-19 ವಿರುದ್ಧ ಹೋರಾಡಲು ಯೋಗ ಪ್ರಮುಖ ಅಸ್ತ್ರ – ನರೇಂದ್ರ ಮೋದಿ

ನವದೆಹಲಿ: ಮಾರಕ ಕೊರೋನಾ ವೈರಸ್​ ವಿರುದ್ಧ ಹೋರಾಡಲು ಯೋಗ ಒಂದು ಪ್ರಮುಖ ಅಸ್ತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಂದು ಭಾನುವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಭಾಗವಾಗಿ ಮಾತಾಡಿದ ನರೇಂದ್ರ ಮೋದಿ, ಸಾಮೂಹಿಕ ಕಾರ್ಯಕ್ರಮಗಳಿಂದ ದೂರವಿರಿ. ಸಾಧ್ಯವಾದಷ್ಟು ಮನೆಯಲ್ಲೇ ಕುಟುಂಬದೊಂದಿಗೆ ಯೋಗ ದಿನಾಚರಣೆ ಆಚರಿಸಿ. ಯಾವುದೇ ಕಾರಣಕ್ಕೂ ಸಾಮಾಜಿಕ ಅಂತ ಕಾಯ್ದುಕೊಳ್ಳುವುದು ಮಾತ್ರ ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ.
ಭಾಷಣದ ಆರಂಭದಲ್ಲೇ ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು ಕೋರಿದ ನರೇಂದ್ರ ಮೋದಿ, ಇದು ಏಕತೆಯನ್ನು ಆಚರಿಸುವ ದಿನ. ಈ ದಿನ ಸಾರ್ವತ್ರಿಕ ಭ್ರಾತೃತ್ವ ಸಂದೇಶ ಸಾರುವ ದಿನ. ಹೀಗಾಗಿ ನಿತ್ಯವೂ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದರು. ಯೋಗ ಆರೋಗ್ಯಕರ ವಾತಾವರಣ ಸೃಷ್ಟಿಸಲಿದೆ. ಇದು ಏಕತೆಯ ಶಕ್ತಿ ಎಂದು ಸಾಬೀತಾಗಿದೆ. ಮಾನವೀಯ ಬಂಧಗಳನ್ನು ಮತ್ತಷ್ಟು ಗಾಢವಾಗಿಸುತ್ತದೆ. ಯೋಗಕ್ಕೆ ಯಾವುದೇ ಜಾತಿ, ಧರ್ಮ, ಬಣ್ಣ, ಲಿಂಗ ತಾರತಮ್ಯ ಇಲ್ಲ, ಬದಲಿಗೆ ಎಲ್ಲವನ್ನೂ ಮೀರಿಸುವ ಶಕ್ತಿ ಇದಕ್ಕಿದೆ. ಆದ್ದರಿಂದ ಯಾರು ಬೇಕಾದರೂ ಯೋಗ ಅಭ್ಯಾಸ ಮಾಡಬಹುದು ಎಂದು ತಿಳಿಸಿದರು.
ನಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ರೂಢಿಸಿಕೊಳ್ಳಬೇಕು. ಸಂತೋಷಕರ ದಿನಗಳು ಬರಲು ದೂರವೇನಿಲ್ಲ. ಸದ್ಯದಲ್ಲೇ ಯಶಸ್ಸಿಗೆ ಜಗತ್ತು ಸಾಕ್ಷಿಯಾಗುವ ದಿನಗಳು ಬರಲಿವೆ. ಇದಕ್ಕೆ ಯೋಗ ನೆರವಾಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊರೋನಾ ನಾವೈರಸ್‌ ನಿರ್ದಿಷ್ಟವಾಗಿ ನಮ್ಮ ಉಸಿರಾಟದ ವ್ಯವಸ್ಥೆಯನ್ನೇ ಆಕ್ರಮಿಸುತ್ತದೆ. ಉಸಿರಾಟದ ವ್ಯವಸ್ಥೆಯು ಪ್ರಾಣಾಯಾಮದಿಂದಲೇ ಬಲಗೊಳ್ಳುತ್ತದೆ. ಯೋಗವು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಿಕೊಳ್ಳಲು ನೆರವಾಗುತ್ತದೆ. ಆಸನಗಳು ನಮ್ಮ ದೇಹದ ಶಕ್ತಿ ಮತ್ತು ಚಯಾಪಚಯ ಕ್ರಿಯೆಗಳಿಗೆ ಸಹಾಯ ಮಾಡುತ್ತದೆ’ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap