ಕೊರೋನಾ ವಿರುದ್ಧ ಹೋರಾಟದಲ್ಲಿ ವಾಲೇಂಟರ‍್ಸ್ ಪಾತ್ರ ಬಹುದೊಡ್ಡದು.

ಸಿರಿನಾಡ ಸುದ್ದಿ, ಕುರುಗೋಡು: ಮಾರಣಾಂತಿಕ ಕೊರೋನಾ ವೈರಸ್‌ನಿಂದ ಇಡಿ ಜಗತ್ತೇ ತಲ್ಲಣಗೊಂಡಿದೆ. ಇಂತಹ ಹೆಮ್ಮಾರಿ ಸೋಂಕುವನ್ನು ನಿಯಂತ್ರಿಸುವಲ್ಲಿ ಕೊರೋನಾ ವಾಲೇಂಟರ‍್ಸ್ರವರ ಪಾತ್ರ ಬಹುದೊಡ್ಡದು ಎಂದು ಕುಡಿತಿನಿ ಪಿಎಸ್‌ಐ ಮಹಮ್ಮದ್ ರಫಿಕ್ ಹೇಳಿದರು.
ಅವರು ಪಟ್ಟಣ ಸಮೀಪದ ಕುಡಿತಿನಿ ಪಟ್ಟಣ ಪಂಚಾಯಿತಿ ಕಚೇರಿ ಪ್ರಾಂಗಣದಲ್ಲಿ ಕೊರೋನಾ ವೈರಸ್ ಸೊಂಕನ್ನು ನಿಯಂತ್ರಿಸುವಲ್ಲಿ ಸೇವೆ ಸಲ್ಲಿಸಿದ ವಾಲೇಂಟರ‍್ಸ್ಗೆ ಮಾಸ್ಕ್ ವಿತರಿಸಿ ಮಾತನಾಡಿದರು.
ಜಿಂದಲ್‌ನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರು, ಕುಡಿತಿನಿಯಲ್ಲಿ ಮಾತ್ರ ಇಂದಿಗೂ ಕೊರೋನಾ ಸೋಂಕು ಹರಡದಂತೆ ಮುಂಜಾಗೃತಿಯಿAದ ವಾಲೇಂಟರ‍್ಸ್ ಅಮೋಘವಾದ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ವಾಲೇಂಟರ‍್ಸ್ ತಂಡದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳು ಎಂದರು. ಮುಂದಿನ ದಿನಗಳಲ್ಲಿ ಕೊರೋನಾ ಸೋಂಕು ನಿಯಂತ್ರಿಸಲು ವಾಲೇಂಟರ‍್ಸ್ಗಳು ಸ್ಯಾನಿಟೈಜರ್, ಮಾಸ್ಕ್ ಬಳಕೆ, ಸಾಮಾಜಿಕ ಅಂತರ, ಸ್ವಚ್ಚತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಕೊರೋನಾ ಮುಕ್ತ ಮಾಡಲು ಹೆಚ್ಚಿನ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಪ.ಪಂ. ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಮಾತನಾಡಿ, ಕೊರೋನಾ ವಾಲೇಂಟರ‍್ಸ್ರವರ ಸೇವೆ ಗುರಿತಿಸಿ ಪಿಎಸ್‌ಐ ಮಹಮ್ಮದ್‌ರಫಿಕ್‌ರವರು ನೂರಕ್ಕಿಂತ ಹೆಚ್ಚಿನ ಅತ್ಯಾದುನಿಕ ಮಾಸ್ಕ್ ವಿತರಿಸಿರುವುದು ನಿಜಕ್ಕೂ ಶ್ಲಾಘನೀಯ. ಇದರಿಂದ ವಾಲೇಂಟರ‍್ಸಗಳು ಇನ್ನೋಷ್ಟು ಹೆಚ್ಚಿನ ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡಿದ್ದಾರೆ ಎಂದರು.
ನಂತರ ವಾಲೇಂಟರ‍್ಸ್ಗಳಾದ ನಾಗಲಿಂಗ, ಪ್ರಕಾಶ್, ಮೌನೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಚಂದ್ರಾಯಿ ದೊಡ್ಡಬಸಪ್ಪ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಐ.ಲೋಕೇಶ್, ಗ್ರಾಮಲೆಕ್ಕಾಧಿಕಾರಿ ದೊಡ್ಡಬಸಪ್ಪ, ಪಪಂ. ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಮುಖಂಡರು, ವಾಲೇಂಟರ‍್ಸ್ಗಳು ಇದ್ದರು.
ಕೊನೆಯಲ್ಲಿ ಅಧಿಕಾರಿಗಳು, ಕೊರೋನಾ ವಾಲೇಂಟರ‍್ಸ್ಗಳು ಸಮೂಹವಾಗಿ ಮಾಸ್ಕ್ ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾಸ್ಕ್ ಕುರಿತು ಜಾಗೃತಿ ಮೂಡಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap