ಕೊರೊನ ಮತ್ತು ಆರ್ಥಿಕ ವ್ಯವಸ್ಥೆ. .ತೇಜಸ್ವಿನಿ, ಸಹಾಯಕ ಪ್ರಾದ್ಯಾಪಕರು, ತೆಕ್ಕಲಕೋಟೆ

ಪ್ರಪಂಚದಾದ್ಯಂತ ಕೋರನ ವೈರಸ್ ಹರಡುತ್ತಿದ್ದು ಮಾರಕ ಸೋಂಕಿಗೆ ವಿಶ್ವದ ಬಹುತೇಕ ಮಂದಿ ಬಲಿಯಾಗಿದ್ದಾರ.ೆ ಚೀನಾದಲ್ಲಿ ಮೊದಲು ಪತ್ತೆಯಾದ ಕೊರೊನ ವೈರಸ್ ಭಾರತದಲ್ಲಿಯೂ ನಿಧಾನವಾಗಿ ಹರಡುತ್ತಿದೆ. ಹೀಗಾಗಿ ದೇಶದಾದ್ಯಂತ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿಶ್ವ ಇಂದು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿ ಸಾಗುತ್ತಿದ್ದು ಪ್ರಾಕೃತಿಕ ವಿಕೋಪ ಎದುರಾದಾಗ ಅದು ಕೆಲವು ದೇಶದ ಅಥವಾ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ ಆದರೆ ಈ ಬಾರಿಯ ಕೊರೊನ ವೈರಸ್ ಇಡೀ ವಿಶ್ವದಲ್ಲಿನ ಮಾನವಕುಲವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜಾಗತಿಕ ಸಾಂಕ್ರಾಮಿಕ ರೋಗ ವಾಗಿರುವ ಕೋರೋಣ ವೈರಸ್ ಪ್ರಪಂಚದ ಆರ್ಥಿಕ ವ್ಯವಸ್ಥಿತದ ಮೇಲೆ ನಿದಾನವಾಗಿ ಪರಿಣಾಮ ಬೀರತ್ತಿದೆ. ಪ್ರಪಂಚದ ಪ್ರಥಮ ಮತ್ತು ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲೂ ವಿಶ್ವದ ಬಹುತೇಕ ರಾಷ್ಟ್ರಗಳು ಈ ರೀತಿ ಆತಂಕಕ್ಕೆ ಒಳಗಾಗಿರಲಿಲ್ಲ ಆದರೆ ಕೊರೊನ ವೈರಸ್ ನಿಂದ ಬಹಳ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಕೋರೋಣ ವೈರಸ್ ತೀವ್ರ ಉಸಿರಾಟದ ಸಿಂಡ್ರೋಮ್ ಆಗಿದ್ದು ವಿಶ್ವ ಆರೋಗ್ಯ ಸಂಸ್ಥೆ 2019 -NCOV ಎಂದು ನಾಮಕರಣ ಮಾಡಿದೆ ಈ ವೈರಸ್ ದೇಹಕ್ಕೆ ಸೇರಿದರೆ ನ್ಯೂಮೋನಿಯಾ ಮತ್ತಿತರ ಉಸಿರಾಟದ ತೊಂದರೆಗಳು ಉಂಟಾಗುತ್ತದೆ ಪ್ರಪಂಚದಾದ್ಯಂತ ಈ ವೈರಸ್ ಸೋಂಕಿತರಲ್ಲಿ 35 %ರಷ್ಟು ಜನರು ಸಾವನ್ನಪ್ಪಿರುವುದು ತಿಳಿದುಬಂದಿದೆ.

ಹಾಗಾಗಿ ಮುಂಜಾಗ್ರತೆಯ ಕ್ರಮದಿಂದಾಗಿ ಭಾರತ ದೇಶದಾದ್ಯಂತ ಸೆಕ್ಸನ್ 144 ನಿಯಮದಂತೆ ಏಪ್ರಿಲ್ 14ರವರೆಗೆ ಲಾಕ್ ಡೌನ್ ನನ್ನುಜಾರಿಗೆ ತರಲು ಕೇಂದ್ರ ಸರ್ಕಾರ ಆದೇಶಿಸಿದೆ. ಈ ಸಂದರ್ಭದಲ್ಲಿ ದೇಶದ ಜನತೆಯು ಯಾವುದೇ ವ್ಯವಹಾರಗಳನ್ನು ನಿರ್ವಹಿಸದೆ ಮನೆಯಲ್ಲಿ ಇರಬೇಕು. ಸ್ಥಳೀಯ ರಾಜ್ಯ ಮತ್ತು ರಾಷ್ಟ್ರೀಯ ಎಲ್ಲಾ ಸಾರಿಗೆ ಸಂಚಾರ ಬಂದ್ ಆಗಿದೆ. ಮೂಲಭೂತ ಅವಶ್ಯಕತೆಗಳಾದ ಆಹಾರ, ದಿನಸಿ ಅಂಗಡಿಗಳು, ಚಿಲ್ಲರೆ ಮಾರುಕಟ್ಟೆ, ಪೆಟ್ರೋಲ್ ಬಂಕ್ ಗಳು, ಅಡುಗೆ ಅನಿಲ, ಹೌಷಧಿ ಉಪಕರಣಗಳು, ಬ್ಯಾಂಕ್, ಎಟಿಎಂ, ಅಗತ್ಯ ಸೇವೆಗಳನ್ನು ಒದಗಿಸುವ ವ್ಯವರಿಸುವ ಸರ್ಕಾರಿ ಕಚೇರಿಗಳನ್ನು ಮಾತ್ರ ತೆರೆದಿದ್ದು ಬಹುತೇಕ ಎಲ್ಲ ವ್ಯವಹಾರಗಳು ಬಂದ್ ಆಗಿವೆ.

ಕೊರೊನ ವೈರಸ್ ಸಾಂಕ್ರಾಮಿಕ ರೋಗವು ಪ್ರಪಂಚದ ಆರ್ಥಿಕತೆಗೆ ಹೊಸ ಸವಾಲುಗಳನ್ನು ತಂದಿದ್ದು ಬೇಡಿಕೆ ಮತ್ತು ಪೂರೈಕೆ ಎರಡು ಅಂಶಗಳ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿದೆ.

ಕೊರನ ವೈರಸ್ ಸೋಂಕಿನಿಂದ ವಿಶ್ವದ ಆರ್ಥಿಕತೆ ಮೇಲೆ ದುಷ್ಪರಿಣಾಮ 2009 ರ ಆರ್ಥಿಕ ಕುಸಿತ ಕಿಂತಲೂ ತೀವ್ರವಾಗಿದೆ ಎಂದು ಐಎಂಎಫ್ ಮುಖ್ಯಸ್ಥ ಹೇಳಿದ್ದಾರೆ.2020 ರ ಜಾಗತಿಕ ಬೆಳವಣಿಗೆ ಋಣಾತ್ಮಕ ವಾಗಿದೆ. ಇದು ಜಾಗತಿಕ ಹಣಕಾಸು ಬಿಕ್ಕಟ್ಟಿನ ಪರಿಣಾಮಕ್ಕಿಂತಲೂ ಭೀಕರವಾಗಲಿದೆ.

ಸರಕಿನ ರಫ್ತು ಮಾಡುತ್ತಿರುವ ರಾಷ್ಟ್ರಗಳ ವಿದೇಶಿ ಹೂಡಿಕೆಯಲ್ಲಿ ಇನ್ನು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 3 ಬಿಲಿಯನ್ ಡಾಲರ್ ನಷ್ಟ ಎದುರಿಸಬೇಕಾಗುತ್ತದೆ. ಈ ವೈರಸ್ ನಿಂದ ಜಾಗತಿಕ ಆದಾಯದಲ್ಲಿ ಟ್ರಿಲಿಯನ್ ಡಾಲರ್ ಗಟ್ಟಲೆ ನಷ್ಟ ಸಂಭವಿಸಲಿದೆ.

ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಕುರಿತು ಎಚ್ಚರಿಕೆ ನೀಡಿದ್ದು, ವಿಶ್ವದಾದ್ಯಂತ ಎರಡು 2. 5 ಕೋಟಿ ಜನರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ. ಜಾಗತಿಕ ಉತ್ಪಾದನೆಗೆ ಶೇಕಡಾ 25ರಷ್ಟನ್ನು ಕೊಡುಗೆ ನೀಡುವ ಚೀನಾದ ಆರ್ಥಿಕ ಹಿನ್ನಡೆ ಉಂಟಾಗಿ ವಿಶ್ವದ ಉಳಿದ ಭಾಗಗಳ ಮೇಲೆ ಬಹುದೊಡ್ಡ ಪರಿಣಾಮವನ್ನು ಬೀರಿತು.ಚೀನಾದಲ್ಲಿ ಕರೋನ ವೈರಸ್ ನಿಂದ ಉಂಟಾಗಿರುವ ಪರಿಣಾಮ ಏಷ್ಯಾದ ಮಾರುಕಟ್ಟೆಯನ್ನು ವ್ಯಾಪಕ ವ್ಯಾಪಾರ ಚಟುವಟಿಕೆಗಳಲ್ಲಿ ಬಿಕ್ಕಟ್ಟು ಉಂಟಾಗಿದ್ದರೂ ಭಾರತ ಜಪಾನ್ ಮತ್ತು ಕೊರಿಯಾ ದೇಶಗಳ ಸರಿದೂಗಿಸುವ ಸಾಮರ್ಥ್ಯ ಹೊಂದಿದೆ ಎಂದು IMF ಹೇಳಿದೆ ಹಾಗೂ ರಪ್ತು ಆಧಾರಿತ ಆರ್ಥಿಕತೆ ವ್ಯ ವಸ್ಥೆಗೆ ಜೋತುಬಿದ್ದಿರುವ ಚೀನಾ ದೇಶಕ್ಕೆ ಈಗ ಅಕ್ಷರಸ್ಥ ಆರ್ಥಿಕ ದಿಗ್ಬಂಧನ ಉಂಟಾಗಿದೆ.

ಕೊರೊನ ವೈರಸ್ ನಿಂದ ಜಗತ್ತಿನ ಎಲ್ಲಾ ರಾಷ್ಟ್ರಗಳು ತತ್ತರಿಸಿಹೋಗಿದ್ದು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವೆ. ಜಾಗತಿಕವಾಗಿ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ ಎಂದು ಆರ್ಥಿಕತೆ ಅಂದಾಜಿಸಿದೆ. ಈ ಪರಿಸ್ಥಿತಿ ಜಾಗತೀಕರಣದ ದುಷ್ಪರಿಣಾಮಗಳಲ್ಲಿ ಒಂದು ಎಂದು ಹೇಳಿದರೆ ತಪ್ಪಾಗಲಾರದು.

ಭಾರತದ ಆರ್ಥಿಕತೆಯು ಸ್ಥಳೀಯ ಸಮಾಜಗಳ ಆರ್ಥಿಕ ಸ್ಥಿತಿಯಾಗಿದ್ದು, ಅದು ವಿಶ್ವದ ಆರ್ಥಿಕತೆಯನ್ನು ರೂಪಿಸುವಂತಾಗಿರುತ್ತದೆ. ಭಾರತದ ಆರ್ಥಿಕತೆಯು ಕರೋನ ವೈರಸ್ ನಿಂದ ತೀವ್ರ ಗಂಭೀರ ಪರಿಸ್ಥಿತಿ ತಲುಪಬಹುದೆಂದು ಐಎಂಎಫ್ ಸಲಹೆ ನೀಡಿದೆ. ಸರ್ಕಾರ ತುರ್ತಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಐಎಂಎಫ್ ಸಲಹೆ ನೀಡಿದ್ದು ಆದಾಯ ಸಂಗ್ರಹಣೆಯಲ್ಲಿ ಇಳಿಕೆ, ವೆಚ್ಚಗಳ ಹೆಚ್ಚಳ, ಹೂಡಿಕೆ ಕುಸಿತ, ತೆರಿಗೆಯಲ್ಲಿ ಕುಸಿತ, ಈ ಎಲ್ಲಾ ಅಂಶಗಳು ವಿಶ್ವದಲ್ಲಿ ವೇಗವಾಗಿ ಹೋಗುತ್ತಿರುವ ಭಾರತದ ಆರ್ಥಿಕತೆ ತಡೆ ಒಡ್ಡಿದೆ ಎಂದು ಉಲ್ಲೇಖಿಸಿದೆ.

ದೇಶದ ತೆರಿಗೆಗಳ ಸಂಗ್ರಹದಲ್ಲಿ 5% ಇಳಿಯಬಹುದು ಕಾರ್ಪೊರೇಟ್ ತೆರಿಗೆ ದರಗಳು ಹೇಳಿಕೆ ತೀವ್ರಗತಿಯ ಆರ್ಥಿಕ ಕುಸಿತಕ್ಕೆ ಕಾರಣ, ಕೇಂದ್ರದ ಆಯವ್ಯಯ ಶೇಕಡ 80ರಷ್ಟು ವೆಚ್ಚಗಳು ತೆರಿಗೆಯನ್ನು ಆಧರಿಸಿರುವುದರಿಂದ ಈ ಇಳಿಕೆ ಕಳವಳಕ್ಕೆ ಕಾರಣವಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ಶೂನ್ಯ ಸಾಧನೆ, ಕೃಷಿ ಉತ್ಪಾದನೆ ಹಾಗೂ ಬೆಲೆಗಳಲ್ಲಿ ಏರುಪೇರು, ಅಗತ್ಯವಸ್ತುಗಳ ಬೆಲೆಗಳ ಹೇರಿಕೆಯಿಂದ ಹಣದುಬ್ಬರದ ಪರಿಸ್ಥಿತಿ, ಆಂತರಿಕ ಮತ್ತು ಬಾಹ್ಯ ಹೂಡಿಕೆ ಯಲ್ಲಿ ಕುಸಿತ, ಉದ್ಯಮ ವಲಯದಲ್ಲಿ ನಿರುತ್ಸಾಹ ಇವೆಲ್ಲ ಆರ್ಥಿಕ ಮಂದಗತಿಯ ದುಷ್ಫಲ.

ಭಾರತದಲ್ಲಿ ಕೋರೊನಾ ವೈರಸ್ ಮತ್ತಷ್ಟು ಆರ್ಥಿಕ ಹಿಂಜರಿತವನ್ನು ಉಂಟುಮಾಡಲಿದೆ 2020 ರಲ್ಲಿ ಭಾರತದ ಜಿಡಿಪಿ ಶೇಕಡ 6.6 ಇರಬಹುದೆಂದು ಭಾರತ ಸರ್ಕಾರ ಅಂದಾಜು ಮಾಡಿತ್ತು ಆದರೆ ಮೂಡಿಸ್ ಸಂಸ್ಥೆ GDP ಯು 5.4 %ಕ್ಕೆ ಇರಲಿದೆ ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ಎಷ್ಟೇ ಆರ್ಥಿಕ ಕೊರನ್ ವೈರಸ್ ಸುಧಾರಣೆಗಳನ್ನು ಕೈಗೊಂಡರು ಪರಿಣಾಮವು ಕೈಗೂಡುವುದಿಲ್ಲ ಎಂದು ಮೂಡೀಸ್ ಎಚ್ಚರಿಸಿದೆ. ಇದರ ಪ್ರಕಾರ 2020 ನೇ ವರ್ಷದಲ್ಲಿ ಜಿ-20 ದೇಶಗಳ ಆರ್ಥಿಕ ಬೆಳವಣಿಗೆ ಶೇಕಡ 2.4 ಅಭಿವೃದ್ಧಿಯಾಗುವುದು ಅನುಮಾನ. ಚೀನಾದ GDP ಯು ಈ ಸಾರಿ ಶೇಕಡ 5. 2 ಇರಲಿದೆ. 2021 ಕ್ಕೆ ಶೇಕಡ 2.4 ಸಿಗಲಿದೆ.
ಈ ಜಾಗತಿಕ ಮಹಾಮಾರಿಯು ಭಾರತದ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ದುಷ್ಪರಿಣಾಮವನ್ನು ಬೀರಿದೆ ಅವುಗಳೆಂದರೆ

  • ಭಾರತೀಯ ಷೇರು ಮತ್ತು ಇಕ್ವಿಟಿ ಮಾರುಕಟ್ಟೆಗಳಿಂದ ವಿದೇಶಿ ಹೂಡಿಕೆದಾರರು ಮಾರ್ಚನಿಂದ ಪ್ರಸ್ತುತ ವರೆಗೆ 35000 ಕೋಟಿ ರೂಗಳ ಮೌಲ್ಯದ ಹೂಡಿಕೆಯನ್ನು ತೆಗೆದುಕೊಂಡಿದ್ದಾರೆ. *ಕೊರೋನ ವೈರಸ್ ನಿಂದ ವಿಶ್ವದಾದ್ಯಂತ ಶೇರು ಮಾರುಕಟ್ಟೆಗಳ ಸೂಚ್ಯಂಕಗಳು ಕಳೆದ ಒಂದು ತಿಂಗಳಿನಲ್ಲಿ ಬಾರಿ ಕುಸಿದಿದೆ ಭಾರತದ ನಿಫ್ಟಿ ಸೆನ್ಸೆಕ್ಸ್ ಪಲ್ಟಿ ಹೊಡೆದಿದೆ. *ಹೋಟೆಲ್ ಮತ್ತು ರೆಸ್ಟೋರೆಂಟ್ ವಹಿವಾಟುಗಳು ಶೇಕಡ 35 ರಷ್ಟು ನಷ್ಟವಾಗಿದೆ. *ಭಾರತದಲ್ಲಿ ಏರ್ಲೈನ್, ಸ್ ಶಾಪಿಂಗ್ ಮಾಲ್, ಮಲ್ಟಿಫೆಕ್ಸ್ ಉದ್ಯಮಿಗಳು ವ್ಯವಹಾರಗಳಲ್ಲಿ ಕುಸಿತ ಉಂಟಾಗಿದ್ದು ಇದರಿಂದ ಸರ್ಕಾರದ GST ಸಂಗ್ರಹ ಕುಸಿಯುವ ಆತಂಕ ಸೃಷ್ಟಿಯಾಗಿದೆ. ವ್ಯಾಪಾರೋದ್ಯಮ ಗಳು ನೆಲಕಚ್ಚಿದೆ. *ಕೋರೋನ ಹಾವಳಿಯು ಭಾರತದ ಔಷಧಿ ಉತ್ಪಾದನೆ ಕ್ಷೇತ್ರಕ್ಕೂ ಅಡಚಣೆ ಉಂಟಾಗಿದೆ. ಭಾರತ ಔಷದ ತಯಾರಿಕೆಗೆ ಬೇಕಾಗುವ ಕಚ್ಚಾ ಪದಾರ್ಥಗಳನ್ನು ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿತ್ತು, ಕೋರೋನ ಭೀತಿಯಿಂದ ಚೀನಾದ ಉತ್ಪಾದನೆ ಮತ್ತು ರಫ್ತುನಲ್ಲೂ ಮಂದಗತಿಯಲ್ಲಿದೆ. ಚೀನಾದ ಬಿಕ್ಕಟ್ಟಿನ ಪರಿಣಾಮ ತೊಂದರೆಗಳಿಗೆ ಒಳಾಗಾಗಿರುವ ಆರ್ಥಿಕತೆಯಲ್ಲಿ ಭಾರತ ಕೂಡ ಒಂದು. *ಕೃಷಿ ಮತ್ತು ರಿಯಲ್ ಎಸ್ಟೇಟ್ ಬಳಿಕ ಅತಿ ಹೆಚ್ಚು ಉದ್ಯೋಗಗಳನ್ನು ಕೊಡುವುದು ವಾಹನ ಉದ್ಯಮ. ದೇಶದ ವಾಹನ ಉದ್ಯಮ ತುಂಬಾ ಬಿಕ್ಕಟ್ಟಿನಲ್ಲಿದೆ. ಇದು ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲೂ ಇಷ್ಟು ಪ್ರಮಾಣದಲ್ಲಿ ಹಾನಿಗೊಳಗಾಗಿರಲಿಲ್ಲ, ಆದರೆ ಈ ಸಲ ಪರಿಸ್ಥಿತಿ ಇದಕ್ಕಿಂತಲೂ ಭೀಕರವಾಗಿದೆ ಸುಮಾರು 2. 30 ಲಕ್ಷ ಉದ್ಯೋಗ ನಷ್ಟವಾಗಿದೆ.ವಾಹನಗಳ ಮಾರಾಟ ಕುಸಿತ ಕಂಡಿದೆ.
  • ಔದ್ಯಗೀಕ ವಲಯಗಳು ಆರ್ಥಿಕ ಹಿಂಜರಿತದ ಪರಿಣಾಮಕ್ಕೊಳಕ್ಕಾಗಿದೆ. *ಮನೆಗಳು ಮಾರಾಟವಾಗದೆ ರಿಯಲ್ ಎಸ್ಟೇಟ್ ಉದ್ಯಮ ಕುಸಿಯುತ್ತಿದೆ ಪರಿಣಾಮವಾಗಿ ಜಿಡಿಪಿ ಅಭಿವೃದ್ದಿಯಲ್ಲಿ 6.8% ಕುಸಿದಿದೆ *ನಿರುದ್ಯೋಗ ಸತತವಾಗಿ ಹೇರುತ್ತಿದ್ದು, ಬಡತನ ರೇಖೆಗಿಂತ ಕೆಳಗಿರುವವರ ಪರಿಸ್ಥಿತಿ ಹೇಳಲಾರದಂದಾಗಿದೆ.
  • ದೇಶದ ಆರ್ಥಿಕತೆ ಹೆಚ್ಚು ಔಪಚಾರಿಕವಾಗಿದೆ ಬ್ಯಾಂಕುಗಳು ಎದುರಿಸುತ್ತಿರುವ ಹಣಕಾಸಿನ ಬಿಕ್ಕಟ್ಟು, ಕೃಷಿ ಕ್ಷೇತ್ರದ ಉತ್ಪಾದನೆ ಯಲ್ಲಿ ನಷ್ಟ, ಕೃಷಿ ಉತ್ಪನ್ನಕ್ಕೆ ಸರಿಯಾದ ಬೆಲೆ ಸಿಗದೆ ಇರುಹುದು. ಸಣ್ಣ ಮತ್ತು ಮಧ್ಯಮ ಉದ್ಯಮದಲ್ಲೂ ಉತ್ಪನೆಯಲ್ಲಿ ಕುಂಠಿತವಾಗಿದೆ. *GST ಮತ್ತು ನೋಟು ಅಮಾನ್ಯಕರನ ದಂತಹ ಸುಧಾರಣೆ ಕ್ರಮಗಳು ಮತ್ತು RERE ದಂತಹ ಕಠಿಣ ಕಾನೂನುಗಳಿಂದ ಎಲ್ಲಾ ವಹಿವಾಟುಗಳು ಪ್ರಸ್ತುತ ಪಾರದರ್ಶಕತೆಗೆ ಬಂದಿದೆ. ಅನೌಪಚಾರಿಕ ವ್ಯವಹಾರಗಳು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಹಜವಾಗಿಯೇ ಕಾರು ಸೇರಿದಂತೆ ಗ್ರಾಹಕ ಉತ್ಪನ್ನಗಳ ಬೇಡಿಕೆ ಕುಸಿದಿದೆ. ಹೀಗಾಗಿ ಹಣದ ಚಲಾವಣೆ ವೇಗ ಇಳಿಕೆ ಯಾಗಿರುವುದರಿಂದ ಕೈಗಾರಿಕೋದ್ಯಮ ದಲ್ಲಿ ಕುಸಿತವಾಗಿದೆ.

*ಕರೋನದ ಅನಿಶ್ಚಿತತೆ ಮತ್ತು ಭಯದ ಕಾರಣದಿಂದಾಗಿ ಜನರ ಬೇಡಿಕೆ ಕುಸಿದಿದೆ ಮತ್ತು ಅವರಲ್ಲಿ ಹಣದ ಹರಿವು ಕಡಿಮೆಯಾಗಿ ಬೇಡಿಕೆ ಹೆಚ್ಚಾಗುವ ವರೆಗೂ ಉತ್ಪಾದನೆ ಹೆಚ್ಚಾಗುವುದಿಲ್ಲ.

  • ಯುರೋಪ್ ನಿಂದ ಭಾರತಕ್ಕೆ ಆಪರೇಟರ್ಗಳು ಶೇಕಡ 35 ರಷ್ಟು ಇಳಿಕೆಯಾಗಿದೆ ಭಾರತದ ಕನ್ಸೂಮರ್, ಕ್ಯೂರೇಟರ್ ಮತ್ತು ಎಲೆಕ್ಟ್ರಾನಿಕ್ ಕಾರ್ಖಾನೆಗಳಿಗೆ ಚೀನಾದಿಂದ ಕಚ್ಚಾ ಸಾಮಗ್ರಿಗಳು ಬಿಡಿಭಾಗಗಳು ಆಮದು ಸ್ಥಗಿತಗೊಂಡಿದೆ. *ಕೋರೋಣ ಬೀತಿ ಕುಕ್ಕೋದ್ಯಮದ ಮೇಲೂ ಪರಿಣಾಮ ಬೀರಿದೆ. ಕಳೆದ ಮೂರು ವಾರಗಳಿಂದ ಚಿಕ್ಕನ್ ಗೆ ಬೇಡಿಕೆ ಶೇಕಡ 30 ರಷ್ಟು ಕುಸಿದಿದೆ. *ಕೊರೋಣ ದಿಂದಾಗಿ ಕರ್ನಾಟಕ ರಾಜ್ಯದ ಬೆಂಗಳೂರು ಕೈಗಾರಿಕಾ ಪ್ರದೇಶ ಮತ್ತು ಇತರ ಕೈಗಾರಿಕಾ ಪ್ರದೇಶಗಳು ಅರ್ಧದಷ್ಟು ಬಂದ್ ಆಗಿದ್ದು, ಉದ್ಯಮದ ವ್ಯವಹಾರಗಳು ಸಂಪೂರ್ಣ ಸ್ತಬ್ಧವಾಗಿದೆ. ಇದರಿಂದ ಬೇಸ್ಕಂ ವಿದ್ಯುತ್ ಬಿಲ್ಲ ಶೇಕಡ 40 ರಷ್ಟು ಕುಸಿದಿದೆ. ಜಿಎಸ್ಟಿ ಸಂಗ್ರಹದ ಶೇಕಡ 30ರಷ್ಟು ಇಳಿದಿದೆ. ಬೇಡಿಕೆ ಇಲ್ಲದಿರುವ ಕಾರಣ ಕೈಗಾರಿಕಾ ಘಟಕಗಳಲ್ಲಿ ಉತ್ಪಾದನೆ ಕುಸಿತ್ತಿದೆ. ಬೆಂಗಳೂರು ಪ್ರದೇಶವೊಂದರಲ್ಲಿ ಸುಮಾರು 80 ಸಾವಿರ ಮಂದಿ ಕೈಗಾರಿಕಾ ಉತ್ಪಾದನೆ ಗಾರರು ಉತ್ಪಾದನೆಯ ಕೊರತೆಯ ಪರಿಣಾಮ ಹಳ್ಳಿಗಳಿಗೆ ಮರಳಿ ಹೋಗಿದ್ದಾರೆ.

*ಇಂಜಿನಿಯರಿಂಗ್ ಎಲೆಕ್ಟ್ರಾನಿಕ್ ಆಪರೇಟ್ ಸೇವೆ ಬಹುತೇಕ ಉದ್ಯಮಗಳು ಕುಂಠಿತಗೊಂಡಿದೆ 2019 ರ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿಯೂ ಬೆಂಗಳೂರಿನ ಉದ್ಯಮಗಳಿಗೆ ಇಷ್ಟೊಂದು ಸಂಕಷ್ಟ ಬಂದಿರಲಿಲ್ಲ. ಇದೀಗ ಕೊರೊನಾ ವೈರಸ್ ಹಾವಳಿಯಿಂದ ಕಷ್ಟ ಜಾಸ್ತಿಯಾಗಿದೆ. ಬೆಂಗಳೂರು ಉದ್ಯಮಗಳು ಕಾರ್ಖಾನೆಗಳು ಕಚ್ಚಾಸಾಮಗ್ರಿಗಳನ್ನು ಚೀನಾ ಇಟಲಿ ಜಪಾನ್ ನಿಂದ ಆಮದು ಮಾಡಿಕೊಳ್ಳುತ್ತಿದ್ದವು ಈಗ ಅದು ನಿಂತುಹೋಗಿದ್ದು, ರಫ್ತು ಕೂಡ ಸ್ಥಗಿತಗೊಂಡಿದೆ.

*ಕೊರೊನ ವೈರಸ್ ಹಾವಳಿಯಿಂದ ದೈನಂದಿನ ಕೂಲಿ ಕಾರ್ಮಿಕರು ಉದ್ಯೋಗಗಳನ್ನು ಕಳೆದುಕೊಂಡಿದ್ದು ಅವರ ತಲಾ ಆದಾಯ ಶೂನ್ಯವಾಗಿದೆ ಹೀಗಾಗಿ ಆದಾಯದ ಕೊರತೆಯಿಂದ ಅವರು ಕನಿಷ್ಠ ಆಹಾರ ಪದಾರ್ಥಗಳನ್ನು ಪೂರೈಸಿಕೊಳ್ಳಲಾಗದೆ ಅಪೌಷ್ಟಿಕತೆ ಮತ್ತು ಹಸುವಿನಿಂದ ನರಳುವ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಅವರ ಜೀವನದ ಮಟ್ಟ ಕುಸಿದಿದ್ದು ಬಡತನಕ್ಕೆ ಮತ್ತಷ್ಟು ಕಾರಣವಾಗಿದೆ.

*ಕೋರೋನ ವೈರಸ್ ಹಾವಳಿಯಿಂದ ಪಟ್ಟಣ ಪ್ರದೇಶದಿಂದ ಹಳ್ಳಿಗಳಿಗೆ ಮರಳಿ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು ಇದು ಕೃಷಿಯ ಮೇಲೆ ಅವಲಂಬಿತರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ ಹಾಗೂ ಕೃಷಿಯಲ್ಲಿನ ಪ್ರಚನ್ನ ನಿರುದ್ಯೋಗದ ಸಂಖ್ಯೆ ಕೂಡ ಹೆಚ್ಚಾಗಿದೆ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಅವಶ್ಯಕತೆಗಳ ಕೊರತೆಯು ಉಂಟಾಗಿದೆ.

*ಕೊರೊನ ವೈರಸ್ ನಿಂದ ಖಾಸಗಿ ಮತ್ತು ಸರ್ಕಾರಿ ಉದ್ಯೋಗಿಗಳು ಕೆಲಸ ಇಲ್ಲದೆ ಮನೆಯಲ್ಲಿ ನಿರುದ್ಯೋಗಿಗಳಾಗಿ ಜೀವನ ಕಲಿಯುವುದರಿಂದ ಇದು ಪರೋಕ್ಷವಾಗಿ ಜನನ ದರ ಹೆಚ್ಚಳಕ್ಕೆ ಕಾರಣವಾಗಿ ಜನಸಂಖ್ಯೆ ಹೆಚ್ಚಳವಾಗಬಹುದು.

*ಈ ಸಂದರ್ಭದಲ್ಲಿ ದೇಶಿಯ ಮತ್ತು ವಿದೇಶಿಯ ಪ್ರವಾಸೋದ್ಯಮವು ಸಂಪೂರ್ಣವಾಗಿ ಬಂದ್ ಆಗಿದ್ದು ದೇಶದ ಜಿಡಿಪಿಗೆ ಅದರ ಕೊಡುಗೆ ಶೂನ್ಯ ವಾಗಿದ್ದು ವಿದೇಶಿ ವಿನಿಮಯ ಗಳಿಕೆ ಇಳಿಕೆಯಾಗಿದೆ.

*ಈ ಜಾಗತಿಕ ಮಹಾಮಾರಿ ಆರ್ಥಿಕತೆಯ ಮೇಲೆ ವ್ಯಾಪಕ ಶ್ರೇಣಿಯ ಪರಿಣಾಮ ಬೀರಿರುವುದರಿಂದ ತಲೆದೋರಿರುವ ಆರ್ಥಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಲವಾರು ಅಗತ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಭಾರತ ಸರ್ಕಾರ ಹಣಕಾಸು ಸಚಿವರ ನೇತೃತ್ವದಲ್ಲಿ ಕೋವಿದ್ -19 ಆರ್ಥಿಕ ಸ್ಪಂದನ ಕಾರ್ಯಪಡೆಯನ್ನು ಸ್ಥಾಪಿಸಲು ನಿರ್ಧರಿಸಿದೆ.

ಬೇಡಿಕೆ ಕುಸಿತದಿಂದ ಕಂಗಾಲಾಗಿರುವ ಉದ್ಯಮಗಳು ಉತ್ತೇಜಕ ಪ್ಯಾಕೇಜ್ ಗಳನ್ನು ಘೋಷಿಸಬೇಕೆಂದುವುದು ಅವರ ಆಶಯ. ಹೀಗೆ ಪ್ಯಾಕೇಜ್ ಘೋಷಿಸಿದರೆ ಇತರ ಉದ್ಯಮಗಳು ಬೇಡಿಕೆ ಇಡುತ್ತವೆ. ಹಾಗಾಗಿ ಬೇಡಿಕೆ ಮತ್ತು ರಫ್ತು ಹೆಚ್ಚಿಸುವಂತಹ ನೀತಿ ನಿರೂಪಣೆಗಳಿಗೆ ಹೆಚ್ಚು ಗಮನ ಹರಿಸಬೇಕು. ಮತ್ತು ಹಣದ ಚಲಾವಣೆಯ ವೇಗ ಹೆಚ್ಚಿಸಬೇಕು.

*ಆರ್ಥಿಕ ವ್ಯವಹಾರಗಳು ಮತ್ತು ಜನರ ಬಿಕ್ಕಟ್ಟುಗಳನ್ನು ನಿಭಾಯಿಸಲು ವಿತ್ತೀಯ ಮತ್ತು ಹಣಕಾಸಿನ ಹಾಗೂ ಹಣಕಾಸು ಮಾರುಕಟ್ಟೆ ಕ್ರಮಗಳು ಅಗತ್ಯವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಸಮಯದಲ್ಲಿ ಕೈಗಾರಿಕೆ ಮತ್ತು ಆರ್ಥಿಕತೆ ಬೆಂಬಲಿಸುವ ಅವಶ್ಯಕತೆ ಇದೆ. ತೆರಿಗೆ ಸಂಗ್ರಹದಲ್ಲಿ ಯಾವುದೇ ಕೊರತೆ ಇದ್ದರೂ ಸರ್ಕಾರ ತನ್ನ ಬಂಡವಾಳ ವೆಚ್ಚ ಯೋಜನೆಗಳನ್ನು ಕಡಿತಗೊಳಿಸಬಾರದು.

*ಕೋವಿಡ್ 19 ಕಾರಣದಿಂದಾಗಿ ತೀವ್ರವಾಗಿ ಪರಿಣಾಮ ಬೀರಿರುವ ವಾಯುಯಾನ ಮತ್ತು ಹೋಟೆಲ್ ನಂತಹ ಕ್ಷೇತ್ರಗಳಿಗೆ ದಿವಾಳಿತನ ಸಂಹಿತೆ ಜಾರಿಗೊಳಿಸಬೇಕು.
*ಭಾರತದ ರಿಸರ್ವ್ ಬ್ಯಾಂಕ್ ಈ ಸಂದರ್ಭದಲ್ಲಿ ಡಿಜಿಟಲ್ ಪಾವತಿಗಳಿಗೆ ಪ್ರೋತ್ಸಾಹಿಸಬೇಕು.

*ಪ್ರಪಂಚದ ಬಹುತೇಕ ದೇಶಗಳ ಆರ್ಥಿಕ ಮುಖಂಡರು ಬ್ಯಾಂಕ್ ದರಗಳನ್ನು ಕಡಿತಗೊಳಿಸಿದ್ದಾರೆ. ತೆರಿಗೆ ವಿನಾಯಿತಿ ನೀಡಿದ್ದಾರೆ. ಸಂಘಟಿತ ಪ್ರಯತ್ನಗಳ ಮೂಲಕ ಮಾರುಕಟ್ಟೆಯಲ್ಲಿ ಹಣದ ಹರಿವನ್ನು ಹೆಚ್ಚಿಸುವುದು. ಇದರಿಂದ ಉತ್ಪಾದನೆ ಮತ್ತು ಪೂರೈಕೆ ಮುಂದುವರಿಯುತ್ತದೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ಸಹಾಯವಾಗುತ್ತದೆ.

  • ಗಂಟೆಗಳ ಲೆಕ್ಕದಲ್ಲಿ ವೇತನ ಪಡೆಯುವವರನ್ನು ರಕ್ಷಿಸಲು ಮತ್ತು ಸಣ್ಣ ಉದ್ಯಮಗಳಿಗೆ ಹೆಚ್ಚುವರಿ ಸಾಲಗಳನ್ನು ನೀಡಲು ಅನುದಾನವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಭಾರತದ ಆರ್ಥಿಕತೆಯ ಕೂಡ ಗಂಭೀರ ಪರಿಸ್ಥಿತಿ ತಲುಪಲಿದ್ದು ಸರ್ಕಾರ ತುರ್ತಾಗಿ ಪರಿಹಾರ ಕ್ರಮ ಕೈಗೊಳ್ಳಬೇಕು. ಈ ಹಿನ್ನಲೆಯಲ್ಲಿ ಕೋರೋಣ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಭಾರತದ ಮಟ್ಟಿಗೆ ಭಾರತದ ರಿಸರ್ವ್ ಬ್ಯಾಂಕ್ ಹೊಸ ನೋಟುಗಳನ್ನು ಮುದ್ರಿಸುವುದು. ರಾಜ್ಯಗಳಿಗೆ ಹೆಚ್ಚಿನ ಸಾಲಗಳನ್ನು ವಿತರಿಸುವುದು. ಸರ್ಕಾರವು ನೂತನ ಬಾಂಡುಗಳನ್ನು ಬಿಡುಗಡೆಗೊಳಿಸುವುದು ಉತ್ತಮ ಮಾರ್ಗ. ಈ ಸಂದರ್ಭದಲ್ಲಿ ಹಣದುಬ್ಬರ 5.6 ರಷ್ಟು ಏರಿಕೆಯಾದರೂ ಜನಸಾಮಾನ್ಯರಿಗೆ ಸಮಸ್ಯೆಯಾಗುವುದಿಲ್ಲ. ಇಡೀ ಆರ್ಥಿಕತೆ ಕುಸಿಯುವುದನ್ನು ತಡೆಯಲು ಸಣ್ಣ ಉದ್ಯಮಗಳನ್ನು ರಕ್ಷಿಸಲು ಇಂತಹ ನೆರವು ಬೇಕು. *ಸರ್ಕಾರ ಬಾಂಡುಗಳನ್ನು ಬಿಡುಗಡೆ ಬಿಡುಗಡೆಗೊಳಿಸಿದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಅದನ್ನು ಖರೀದಿಸಿ ಬಾಂಡುಗಳಿಗೆ ಪ್ರತಿಯಾಗಿ RBI ನೋಟುಗಳನ್ನು ಮುದ್ರಿಸಿ ಸರ್ಕಾರಕ್ಕೆ ಹಣ ನೀಡಬೇಕು. ಇದನ್ನು ಸರ್ಕಾರ ಸಂಕಷ್ಟದಲ್ಲಿರುವ ವಲಯಗಳಿಗೆ ಬಡಜನತೆಗೆ ನೆರವು ನೀಡುವ ಮೂಲಕ ವ್ಯವಸ್ಥೆಗೆ ಪೂರೈಸಬೇಕು. ಇದರಿಂದ ಹೂಡಿಕೆದಾರರಲ್ಲೂ ಉತ್ಸಾಹ ವೃದ್ಧಿಯಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿಯೂ ಮೂಲಭೂತ ಸೌಕರ್ಯಗಳನ್ನು ನಿರ್ಮಾಣಕ್ಕೆ ಹೆಚ್ಚು ಹೊತ್ತುನ್ನು ನೀಡುವುದರ ಮೂಲಕ ಕನಿಷ್ಠ ಅವಶ್ಯಕತೆಗಳನ್ನು ಪೂರೈಸುವ ಕ್ರಮವನ್ನು ಕೈಗೊಳ್ಳಬೇಕು.

ಒಟ್ಟಾರೆಯಾಗಿ ಹೇಳುವುದಾದರೆ ಜಾಗತೀಕರಣ ದುಷ್ಪಾರಿಣಾಮ ದಿಂದ ದೇಶ ವಿದೇಶಗರ ಸಂಚಾರದಿಂದ ಇಂದು ಕೊರೊನ ವೈರಸ್ ವಿಶ್ವದಾದ್ಯಂತ ಹರಡಿದ್ದು ಸ್ಥಳೀಯ ಗ್ರಾಮೀಣ ಆರ್ಥಿಕತೆ ಯಿಂದ ಪ್ರಪಂಚದ ಆರ್ಥಿಕತೆ ವರಿಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬಿಸಿಯನ್ನು ತಟ್ಟಿದೆ ಈ ಹಿನ್ನೆಲೆಯಲ್ಲಿ ಸರ್ಕಾರಗಳು ಮುಂಜಾಗ್ರತೆ ಯಾಗಿ ಅಗತ್ಯ ಆರ್ಥಿಕ ಹಾಗೂ ಹಣಕಾಸಿನ ಕ್ರಮಗಳನ್ನು ಕೈಗೊಂಡು ಆರ್ಥಿಕಸ್ ಸ್ಥಿರತೆ ಮತ್ತು ಬೆಳವಣಿಗೆಯನ್ನು ಕಾಯ್ದುಕೊಳ್ಳಬೇಕಾಗಿದೆ.
…………….ತೇಜಸ್ವಿನಿ, ಸಹಾಯಕ ಪ್ರಾದ್ಯಾಪಕರು, ತೆಕ್ಕಲಕೋಟೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap