ಕೊರೊನಾ ಸೋಂಕಿತ ಮೃತರ ಅಮಾನವೀಯ ವಿಲೇವಾರಿಯ ವಿಡಿಯೋ ದೃಶ್ಯ ವೈರಲ್!, ತನಿಕೆಗೆ ಅದೇಶ ನೀಡಿದ ಜಿಲ್ಲಾಧಿಕಾರಿಗಳು.

ಸಿರಿನಾಡ ಸುದ್ದಿ, ಬಳ್ಳಾರಿ: ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ಸಂತ್ರಸ್ಥರ ಮೃತದೇಹಗಳನ್ನು ಅಮಾನವೀಯವಾಗಿ ವಿಲೇವಾರಿ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ ಎನ್ನಲಾಗುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ಕೊರೊನಾದಿಂದ 9 ಮಂದಿ ಸೋಂಕಿತರು ಮೃತಪಟ್ಟಿದ್ದರು. ಸೋಮವಾರ ಜಿಲ್ಲಾಡಳಿತ ಮೃತಪಟ್ಟವರ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಿದೆ. ಈ ಸಂಬAಧ ಶವಸಂಸ್ಕಾರದ ವಿಡಿಯೋ ಒಂದು ಹರಿದಾಡುತ್ತಿದ್ದು. ಮೃತದೇಹಗಳನ್ನು ಗುಂಡಿಯಲ್ಲಿ ಎಸೆಯುತ್ತಿರುವ ಮಾನವಿಯ ದೃಶ್ಯಾವಳಿಗಳು ಎಂತಹವರನ್ನೂ ಬೆಚ್ಚಿ ಬೀಳಿಸುತ್ತಿವೆ.
ಮನುಷ್ಯನ ಜೀವನ ಇಷ್ಟೇನಾ? ಎಂಬ ಭಾವನೆ ಬರುವಂತೆ ದೊಡ್ಡ ದೊಡ್ಡ ಗುಂಡಿಗಳಿಗೆ ಮೃತದೇಹಗಳನ್ನು ವಸ್ತುಗಳನ್ನು ಎಸೆಯುವಂತೆ ಎಸೆಲ್ಪಡುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ. ಕೊರೊನಾ ಭೀತಿಯಿಂದ ಶವ ಸಂಸ್ಕಾರವನ್ನು ಹೀಗೆ ಅವಸರ ಅವಸರವಾಗಿ ಗುಂಡಿ ತೆಗೆದು ಬೀಸಾಡಿ ಹೋಗುತ್ತಿರುವ ವಿಡಿಯೋ ನೋಡುಗರ ಎದೆ ಝಲ್ಲೆನಿಸುತ್ತಿವೆ. ಕನಿಷ್ಠ ಪಕ್ಷ ಶವಗಳಿಗೆ ಗೌರವ ಸಲ್ಲಿಸದೆ, ಒಟ್ಟಾಗಿ ಬಿಸಾಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿರುವಂತೆಯೇ ಜನಸಾಮಾನ್ಯರು ಬಳ್ಳಾರಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ವೀಡಿಯೋ ಬಳ್ಳಾರಿಯದ್ದಾ ಎನ್ನುವುದು ಜಿಲ್ಲಾಡಳಿತ ಸ್ಪಷ್ಠಪಡಿಸಬೇಕಿದೆ.
ಜಿಲ್ಲಾಧಿಕಾಗಳಿಂದ ತನಿಕೆಗೆ ಆದೇಶ: ಬಳ್ಳಾರಿಯಲ್ಲಿ ಅಮಾನವೀಯ ರೀತಿಯಲ್ಲಿ ಶವ ಸಂಸ್ಕಾರ ವಿಚಾರಕ್ಕೆ ಸಂಬAಧಿಸಿದAತೆ ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ ನೇತೃತ್ವದಲ್ಲಿ ತನಿಖೆಗೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ.
ನಿನ್ನೆ ಒಂದೇ ದಿನ 9 ಜನರು ಮೃತಪಟ್ಟಿದ್ರು ಒಂದೇ ಬಾರಿ ಶವ ಸಂಸ್ಕಾರ ಮಾಡಬೇಕಾದರೆ ಶವವನ್ನು ಮೇಲಿಂದ ಎಸೆದಿದ್ರು ಎಂಬ ಮಾಧ್ಯಮಗಳ ವರದಿ ಹಿನ್ನಲೆ ಜಿಲ್ಲಾಧಿಕಾರಿಯಿಂದ ತನಿಖೆಗೆ ಆದೇಶ ನೀಡಿದ್ದಾರೆ.
ಬಳ್ಳಾರಿಯಲ್ಲಿ ಕೊರೊನಾದಿಂದ ಮಂಗಳವಾರವೂ ಸಹ 5 ಜನ ಮೃತಪಟ್ಟಿದ್ದಾರೆ. ಸೋಮವಾರ ಒಂದೇ ದಿನ 9 ಜನರು ಮೃತರಾಗಿದ್ದು ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 28 ಕ್ಕೇರಿದ ಏರಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap