ಕೊರೊನಾಗೆ ಆಯುರ್ವೇದ ಚಿಕಿತ್ಸೆ: ಯಾವ ಮದ್ದನ್ನು, ಎಷ್ಟು ಪ್ರಮಾಣದಲ್ಲಿ, ಯಾವಾಗ ಸೇವಿಸಬೇಕು?

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ಜನರು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆವಹಿಸಬೇಕಾಗಿದೆ.
ಕೊರೊನಾ ತಡೆಗಟ್ಟಲು ಯಾವುದೇ ಲಸಿಕೆ ಬಂದಿಲ್ಲ, ಮುಂದುವರಿದ ರಾಷ್ಟ್ರಗಳು ಕೊರೊನಾಗೆ ಲಸಿಕೆ ಕಂಡು ಹಿಡಿಯಲು ಕಳೆದ ಹತ್ತು ತಿಂಗಳಿನಿಂದ ಶತತ ಪ್ರಯತ್ನ ಮಾಡುತ್ತಿವೆ.
ಭಾರತದಲ್ಲಿಯೂ ಕೊರೊನಾಗೆ ಔಷಧಿ ಕಂಡು ಹಿಡಿಯಲು ಪ್ರಯತ್ನಗಳು ನಡೆಯುತ್ತಿದ್ದು ಇವುಗಳ ನಡುವೆ ಆಯುರ್ವೇದ ಔಷಧಿಯಿಂದ ಚೇತರಿಸಿಕೊಂಡಿರುವ ಹಲವಾರು ಪ್ರಕರಣಗಳಿವೆ.
ಇದೀಗ ಆಯುಷ್‌ ಇಲಾಖೆ ಕೂಡ ಕೊರೊನಾಗೆ ಯಾವೆಲ್ಲಾ ಆಯುರ್ವೇದ ಔಷಧಗಳನ್ನು ನೀಡಬಹುದು, ರೋಗ ಲಕ್ಷಣ ಇರುವವರು ಯಾವ ಔಷಧಿಯನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು, ರೋಗ ಲಕ್ಷಣ ಕಂಡು ಬರದಿರುವ ರೋಗಿಗಳು ಯಾವ ಔಷಧಿಯನ್ನು ತೆಗೆದುಕೊಳ್ಳಬೇಕು, ಸ್ವಲ್ಪ ಲಕ್ಷಣವಿದ್ದರೆ ಯಾವ ಆಹಾರ ಸೇವಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದೆ ನೋಡಿ:
ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ
ಕೋವಿಡ್ 19 ನಿರ್ವಹಣೆಗಾಗಿ ಆಯುರ್ವೇದ ಮತ್ತು ಯೋಗ ಆಧರಿತ ರಾಷ್ಟ್ರೀಯ ಕ್ಲಿನಿಕಲ್ ಮ್ಯಾನೇಜ್‌ಮೆಂಟ್‌ ಮಾರ್ಗಸೂಚಿಯನ್ನು ಕೇಂದ್ರ ಸರಕಾರ ನೀಡಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಆಯುರ್ವೇದ ಔಷಧಗಳಾದ ಅಶ್ವಗಂಧ, ಅಮೃತಬಳ್ಳಿ (ಗುಡುಚಿ ಘಾನಾ ವಾಟಿ) ಅಥವಾ ಚ್ಯವನಪ್ರಾಶವನ್ನು ಕೋವಿಡ್ 19 ರೋಗಿಗಳ ಪ್ರಾಥಮಿಕ ಸಂಪರ್ಕ ಹೊಂದಿರುವವರು ಹೇಗೆ ಬಳಸಬೇಕೆಂಬ ಮಾರ್ಗಸೂಚಿ ನೀಡಿದೆ.
ಈ ಮದ್ದುಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಹಾರಕ್ರಮ ಪಾಲಿಸಬೇಕು, ಗಂಭೀರ ಸ್ಥಿತಿಯಲ್ಲಿ ಇರುವವರು ವೈದ್ಯರ ಸಲಹೆ ಸೂಚನೆ ಮೇರೆಗೆ ಔಷಧಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ.
ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿ ಇರುವವರಿಗೆ (high-risk population, primary contacts)
; ಇವರು ಅಶ್ವಗಂಧ ಪುಡಿಯನ್ನು ತೆಗೆದುಕೊಳ್ಳಬೇಕು. ಒಬ್ಬರು 500ಮಿಗ್ರಾಂ ಅಥವಾ 1-3 ಗ್ರಾಂ ಪುಡಿಯನ್ನು ದಿನದಲ್ಲಿ ಎರಡು ಬಾರಿ ಬಿಸಿ ನೀರಿನಲ್ಲಿ ತೆಗೆದುಕೊಳ್ಳಬೇಕು. ಈ ರೀತಿ 15 ದಿನದವರೆಗೆ ಅಥವಾ ಒಂದು ತಿಂಗಳಿನವರೆಗೆ ಸೇವಿಸಬೇಕು. ಆಯುರ್ವೇದ ವೈದ್ಯರು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ, ಅದರಂತೆ ಪಾಲಿಸಿ.
ರೋಗ ಲಕ್ಷಣವಿಲ್ಲದ ಕೋವಿಡ್ 19 ಸೋಂಕಿತರಿಗೆ: ಇವರಿಗೆ ಗುಡುಚಿ ಘಾನಾ ವಾಟಿ ನೀಡಬಹುದು. ಒಬ್ಬರು ಆಯುರ್ವೇದ ಸೂಚನೆಯ ಅನುಸಾರ 500ಮಿಗ್ರಾಂ ಅಥವಾ 1-3 ಗ್ರಾಂ ಪುಡಿಯನ್ನು ದಿನದಲ್ಲಿ ಎರಡು ಬಾರಿ ಬಿಸಿ ನೀರಿನಲ್ಲಿ ತೆಗೆದುಕೊಳ್ಳಬೇಕು. ಈ ರೀತಿ 15 ದಿನದವರೆಗೆ ಅಥವಾ ಒಂದು ತಿಂಗಳಿನವರೆಗೆ ಸೇವಿಸಬೇಕು. ಗುಡುಚಿ ಜೊತೆಗೆ ಪಿಪ್ಪಾಲಿ ಕೂಡ ಸೇವಿಸಬಹುದು. ಪಿಪ್ಪಾಲಿಯನ್ನು (Pippali) 375 ಮಿಗ್ರಾಂನಂತೆ ದಿನದಲ್ಲಿ ಎರಡು ಬಾರಿ ಸೇವಿಸಬೇಕು. ಇದನ್ನು 15 ದಿನದವರಿಗೆ ತೆಗೆದುಕೊಳ್ಳಬೇಕು. ಆಯುಷ್‌ 64 ಕೂಡ ತೆಗೆದುಕೊಳ್ಳಬಹುದು. ಇದನ್ನು 500ಮಿಗ್ರಾಂ ನಂತೆ ದಿನದಲ್ಲಿ ಎರಡು ಬಾರಿ ನೀರು ಅಥವಾ ಹಾಲಿನೊಂದಿಗೆ ತೆಗೆದುಕೊಳ್ಖಬೇಕು. ಈ ಔಷಧಗಳು ರೋಗ ಲಕ್ಷಣಗಳು ಹೆಚ್ಚಾಗುವುದನ್ನು ತಡೆಗಟ್ಟುವುದರ ಜೊತೆಗೆ ರೋಗದಿಂದ ಬೇಗನೆ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ.
ಮೈಲ್ಡ್(ಅಷ್ಟೇನು ಗಂಭೀರವಲ್ಲದ) ಕೋವಿಡ್ 19 ಲಕ್ಷಣಗಳಿದ್ದರೆ: ಜ್ವರ, ತಲೆನೋವು, ಸುಸ್ತು, ಒಣ ಕೆಮ್ಮು, ಗಂಟಲು ಕೆರೆತ, ಮೂಗು ಕಟ್ಟುವುದು ಇದ್ದು ಉಸಿರಾಟದ ತೊಂದರೆ ಮುಂತಾದ ಗಂಭೀರ ಲಕ್ಷಣಗಳು ಇಲ್ಲದಿದ್ದರೆ ಗುಡುಚಿ ಅಥವಾ ಪಿಪ್ಪಾಲಿ ನೀಡಬಹುದು. ಇದನ್ನು 31ಮಿಗ್ರಾಂನಷ್ಟು ದಿನದಲ್ಲಿ ಎರಡು ಬಾರಿ ಸೇವಿಸಬೇಕು, ಈ ರೀತಿ 15 ದಿನಗಳವರೆಗೆ ತೆಗೆದುಕೊಳ್ಳಬೇಕು. ಇದರ ಜೊತೆಗೆ 500ಮಿಗ್ರಾಂನಷ್ಟು ಆಯುಷ್‌ 64 ತೆಗೆದುಕೊಳ್ಳಬೇಕು. 1-3 ಗ್ರಾಂ ಅಶ್ವಗಂಧ ಪುಡಿಯನ್ನ ದಿನದಲ್ಲಿ ಎರಡು ಬಾರಿ ಬಿಸಿ ನೀರಿನಲ್ಲಿ ತೆಗೆದುಕೊಳ್ಳಬೇಕು. ಈ ರೀತಿ 15 ದಿನಗಳವರೆಗೆ ತೆಗೆದುಕೊಳ್ಳಬೇಕು. ಇವುಗಳ ಜೊತೆಗೆ 10ಗ್ರಾಂನಷ್ಟು ಚ್ಯವನಪ್ರಾಶವನ್ನು ದಿನದಲ್ಲಿ ಒಂದು ಬಾರಿ ಹಾಲು ಅಥವಾ ನೀರಿನಲ್ಲಿ ತೆಗೆದುಕೊಳ್ಳಬೇಕು.
ಸೂಚನೆ:ಈ ಲೇಖನದಲ್ಲಿ ಕೋವಿಡ್‌ 19 ರೋಗಿಗಳಿಗೆ ಬೇಗನೆ ಚೇತರಿಸಿಕೊಳ್ಳಲು ಆಯುಷ್ ಇಲಾಖೆ ನೀಡಿದ ಮಾರ್ಗಸೂಚಿ ನೀಡಲಾಗಿದೆ. ನೀವು ಈ ಔಷಧಿ ತೆಗೆದುಕೊಳ್ಳುವ ಮುನ್ನ ಆಯುರ್ವೇದ ವೈದ್ಯರ ಸಲಹೆಯನ್ನು ಪಡೆದ ಬಳಿಕವಷ್ಟೇ ಪ್ರಾರಂಭಿಸಿ, ಅವರು ನಿಮ್ಮ ಆರೋಗ್ಯ ಸ್ಥಿತಿ ತಿಳಿದುಕೊಂಡು ಸಲಹೆ ನೀಡುತ್ತಾರೆ)

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap