ಕೆಲವು ಕೊರೊನಾ ಸೋಂಕಿತರಲ್ಲಿ ಕಂಡು ಬರ್ತಿದೆ ಹಠಾತ್ ಶಾಶ್ವತ ‌ʼಶ್ರವಣ ದೋಷʼ..!

ಲಂಡನ್: ಕೊರೊನಾ ಕುರಿತು ದಿನಕ್ಕೊಂದು ಹೊಸ ಸಂಗತಿಗಳು ಹುಟ್ಟಿಕೊಳ್ಳುತ್ತಿವೆ. ಹೀಗೊಂದು ಹೊಸದೊಂದು ವರದಿ ಬೆಚ್ಚಿ ಬೀಳಿಸುವ ಸತ್ಯವನ್ನ ಬಹಿರಂಗ ಪಡೆಸಿದೆ. ಅಸಹಜವಾಗಿದ್ರು ಮೊದಲ ಬಾರಿಗೆ ಸೋಂಕಿಗೆ ತುತ್ತಾದ ಕೆಲವು ರೋಗಿಗಳಲ್ಲಿ ಹಠಾತ್ ಶಾಶ್ವತ ಶ್ರವಣ ದೋಷ ಉಂಟಾಗಬಹುದು. ಈ ರೀತಿಯ ಮೊದಲ ಪ್ರಕರಣ UKಯಲ್ಲಿ ವರದಿಯಾಗಿದೆ.
ಯುಕೆಯ ಯೂನಿವರ್ಸಿಟಿ ಕಾಲೇಜ್ ಆಪ್ ಲಂಡನ್ ಸೇರಿದಂತೆ ವಿಜ್ಞಾನಿಗಳು ಹೇಳುವ ಪ್ರಕಾರ, ಈ ಸಂಭಾವ್ಯ ಅಡ್ಡ ಪರಿಣಾಮದ ಬಗ್ಗೆ ಅರಿವು ಮುಖ್ಯ, ಯಾಕಂದ್ರೆ, ಸ್ಟೀರಾಯ್ಡ್ ಚಿಕಿತ್ಸೆಯು ಶ್ರವಣ ನಷ್ಟವನ್ನ ಹಿಮ್ಮೆಟ್ಟಿಸಬಹುದು ಎಂದಿದ್ದಾರೆ. ಇನ್ನು ಕಾರಣಗಳು ಬಹಳ ಸ್ಪಷ್ಟವಾಗಿಲ್ಲವಾದ್ರೂ ಈ ಸ್ಥಿತಿ ಕೆಲವೊಮ್ಮೆ ಜ್ವರ ಅಥವಾ ಹರ್ಪಿಸ್ ನಂತಹ ವೈರಸ್ ಸೋಂಕಿನ ನಂತರ ಬರುತ್ತೆ ಎಂದು ಹೇಳಿದ್ದಾರೆ.
BMJ ಕೇಸ್ ರಿಪೋರ್ಟ್ಸ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಈ ಸಂಶೋಧನೆಯು, 45 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವಾಗ ಹಠಾತ್ತಾಗಿ ಶ್ರವಣ ದೋಷ ಉಂಟಾಗಿದೆ. UKಯ ರಾಯಲ್ ನ್ಯಾಷನಲ್ ಥ್ರೋಟ್ ನೋಸ್ ಮತ್ತು ಕಿವಿ ಆಸ್ಪತ್ರೆ ಈ ಪ್ರಕರಣವನ್ನ ವಿವರಿಸುತ್ತಿದೆ.
ವೈದ್ಯರು ಹೇಳುವ ಪ್ರಕಾರ, 10 ದಿನಗಳ ಹಿಂದೆ ಕೋವಿಡ್-19 ಲಕ್ಷಣಗಳ ಹಿನ್ನೆಲೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಮಯದಲ್ಲಿ ಅವ್ರು ಉಸಿರಾಡಲು ಕಷ್ಟಪಡುತ್ತಿದ್ದ ಕಾರಣದಿಂದ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು. ಅದ್ರಂತೆ, ಅವರನ್ನ ಸುಮಾರು 30 ದಿನಗಳ ಕಾಲ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ನಂತ್ರದಲ್ಲಿ ಪರಿಣಾಮವಾಗಿ ಇತರ ತೊಂದರೆಗಳು ಕಾಣಿಸಿಕೊಂಡವು ಎಂದು ಅಧ್ಯಯನ ತಿಳಿಸಿದೆ.
ಸಂಶೋಧಕರು, ಆಂಟಿವೈರಲ್ ಔಷಧ, ರೆಮ್ಡೆಸಿವರ್‌, ಮತ್ತು ರಕ್ತ ವರ್ಗಾವಣೆ ಚಿಕಿತ್ಸೆ ಪಡೆಯುತ್ತಿದ್ರು. ನಂತ್ರದಲ್ಲಿ ಅವರು ಗುಣಮುಖರಾದ್ರು. ಆದ್ರೆ, ರೋಗಿಯ ಎಡ ಕಿವಿಯಲ್ಲಿ ರಿಂಗ್ ರಿಂಗ್ (ಟಿನಿಟಸ್) ಶಬ್ದವನ್ನು ಗಮನಿಸಿದ ನಂತರ, ಉಸಿರಾಟದ ಕೊಳವೆಯನ್ನ ತೆಗೆದು ಹಾಕಿದ ಒಂದು ವಾರದ ನಂತರ ಇದ್ದಕ್ಕಿದ್ದಂತೆ ಕಿವಿಯಲ್ಲಿ ಶ್ರವಣ ದೋಷ ಕಾಣಿಸಿಕೊಂಡಿತು.
ವಿಜ್ಞಾನಿಗಳ ಪ್ರಕಾರ, ರೋಗಿಯು ಮೊದಲೇ ಯಾವುದೇ ರೀತಿಯ ಕಿವಿ ಸಮಸ್ಯೆಯನ್ನ ಹೊಂದಿರಲಿಲ್ಲ ಮತ್ತು ಅಸ್ತಮಾ ಹೊರತುಪಡಿಸಿ ಎಲ್ಲ ರೀತಿಯಿಂದಲೂ ಚೆನ್ನಾಗಿದ್ದರು.
ಇನ್ನು ಆತನ ಕಿವಿಯನ್ನ ಪರಿಶೀಲಿಸಿದಾಗ ಯಾವುದೇ ಉರಿಯೂತಗಳು ಕಂಡುಬಂದಿಲ್ಲ. ಆದರೆ ಎಡ ಕಿವಿಯಲ್ಲಿ ಶ್ರವಣ ದೋಷ ಉಂಟಾಗಿದೆ ಎಂಬುದು ಶ್ರವಣ ಪರೀಕ್ಷೆಯಿಂದ ತಿಳಿದುಬಂದಿತು. ನಂತ್ರದಲ್ಲಿ ಸ್ಟಿರಾಯ್ಡ್ ಮಾತ್ರೆಗಳು ಮತ್ತು ಚುಚ್ಚು ಮದ್ದುಗಳಿಂದ ಚಿಕಿತ್ಸೆ ನೀಡಲಾಯ್ತು. ಅಮೇಲೆ ಅವರ ಕಿವಿ ಭಾಗಶಃ ಚೇತರಿಸಿಕೊಂಡಿತು ಎಂದು ಅಧ್ಯಯನ ತಿಳಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap